ನೀಯತ್ತಿಗೆ ಇನ್ನೊಂದು ಹೆಸರೇ ನಾಯಿ. ಅವುಗಳು ತನಗೆ ಹಸಿವಿನ ಸಮಯದಲ್ಲಿ ಒಂದು ತುತ್ತು ಅನ್ನ ನೀಡಿದವರನ್ನು ಜೀವನಪರ್ಯಂತ ನೆನಪಿಟ್ಟುಕೊಳ್ಳುತ್ತವೆ. ತನ್ನನು ಸಾಕುವವರಿಗೆ ತನ್ನ ಪ್ರೀತಿಯನ್ನು ಧಾರೆಯೆರೆಯುತ್ತವೆ ಶ್ವಾನಗಳು ಮನುಷ್ಯನಿಗೆ ಅತಿಯಾದ ಪ್ರೀತಿಯನ್ನು ತೋರಿಸುತ್ತದೆ. ಕೆಲವೊಂದು ಬಾರಿ ಸಾಕುನಾಯಿಗಳು ಮಕ್ಕಳಂತೆ ಹಠ ಕೂಡಾ ಮಾಡುವುದುಂಟು. ಈ ಮುದ್ದಾದ ಹಠ ಮತ್ತು ನಿಷ್ಕಲ್ಮಶ ಶ್ವಾನ ಪ್ರೀತಿಯನ್ನು ನಾವೆಲ್ಲರೂ ಚಾರ್ಲಿ 777 ಚಿತ್ರದಲ್ಲಿ ನೋಡಿರುತ್ತೇವೆ. ಇದೇ ರೀತಿಯ ಶ್ವಾನ ಪ್ರೇಮದ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯ ಅಮ್ಮುಂಜೆ ಎಂಬ ಊರಿನಲ್ಲಿ ಚಾರ್ಲಿ ಸಿನಿಮಾದಂತೆ ಶ್ವಾನ ಪ್ರೇಮದ ಘಟನೆ ನಡೆದಿದ್ದು, ಲ್ಯಾಬ್ರಿಡಾರ್ ತಳಿಯ ನಾಯಿಯನ್ನು ಆರೈಕೆ ಮಾಡುತ್ತಿದ್ದ ಮನೆಕೆಲಸದಾಕೆ ತನ್ನ ಊರಿಗೆ ಹೋಗುವ ಸಲುವಾಗಿ ಸರ್ಕಾರಿ ಬಸ್ ಹತ್ತಿ ಕುಳಿತಿರುತ್ತಾರೆ. ತನ್ನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾಕೆ ನನ್ನನ್ನು ಬಿಟ್ಟು ಹೋಗುತ್ತಿದ್ದಾರೆ ಎಂದು ತಿಳಿದ ನಾಯಿ ಕೂಡಾ ಆಕೆಯ ಜೊತೆಗೆ ಬಸ್ ಹತ್ತಿ ಕುಳಿತುಕೊಳ್ಳುತ್ತದೆ. ಆ ಶ್ವಾನದ ಪ್ರೀತಿ ಎಷ್ಟು ಪರಿಶುದ್ಧವಾದದ್ದು ಎಂದರೆ, ಕಂಡಕ್ಟರ್, ಸೇರಿದಂತೆ ಅಲ್ಲಿದ್ದವರು ನಾಯಿಯನ್ನು ಬಸ್ಸಿನಿಂದ ಇಳಿಸಲು ಎಷ್ಟು ಪ್ರಯತ್ನಪಟ್ಟರೂ ಅದು ಸಾಧ್ಯವಾಗುವುದಿಲ್ಲ, ಕೊನೆಗೆ ಒಬ್ಬ ವ್ಯಕ್ತಿ ಬಂದು ಕೆಳಗೆ ಇಳಿಯುವಂತೆ ನಾಯಿಗೆ ಗದರುತ್ತಾರೆ. ನನ್ನನ್ನೇ ಇಳಿಯಲು ಹೇಳುತ್ತಿರಾ ಎಂದು ಕೋಪಗೊಂಡ ನಾಯಿ, ಆ ವ್ಯಕ್ತಿಗೆ ಬೊಗಳುತ್ತದೆ. ಯಾರು ಏನೇ ಮಾಡಿದರು, ನಾಯಿ ಮಾತ್ರ ತನ್ನನ್ನು ಮುದ್ದು ಮಾಡುವ, ತನಗೆ ಪ್ರೀತಿ ನೀಡುವ ಕೆಲಸದಾಕೆಯನ್ನು ಬಿಟ್ಟು ಬಸ್ಸಿನಿಂದ ಇಳಿಯಲು ಒಪ್ಪಲೇ ಇಲ್ಲ. ಕೊನೆಗೂ ಈ ಮುದ್ದಾದ ನಾಯಿಯ ಹಠಕ್ಕೆ ಮಣಿದು, ಆ ಮಹಿಳೆ ಬಸ್ಸಿನಿಂದ ಇಳಿಯಬೇಕಾಯಿತು. ಅವರು ಇಳಿಯುತ್ತಿದ್ದಂತೆ ನಾಯಿ ಕೂಡಾ ತಕ್ಷಣವೇ ಅವರ ಹಿಂದೆ ಬಸ್ಸಿನಿಂದ ಇಳಿದು, ಆಕೆಯನ್ನು ಖುಷಿಯಿಂದ ಮನೆಗೆ ಕರೆದುಕೊಂಡು ಹೋಗುತ್ತದೆ. ನೋಡಿ, ಮನುಷ್ಯ ಕೇವಲ ಸಾವಿವೆಯಷ್ಟು ಪ್ರೀತಿಯನ್ನು ಕೊಟ್ಟರೆ ಸಾಕು, ಆ ಸಾಕು ಪ್ರಾಣಿಗಳು ತನ್ನ ಮಾಲೀಕರಿಗೆ ಪ್ರೀತಿಯ ಧಾರೆಯೆರೆಯುತ್ತವೆ. ಯಾವುದೇ ಸಂದರ್ಭದಲ್ಲೂ ತನ್ನನ್ನು ಆರೈಕೆ ಮಾಡಿದವರನ್ನು ಬಿಟ್ಟುಕೊಡುವುದಿಲ್ಲ. ಅದಕ್ಕೆ ಜೀವಂತ ಉದಾಹರಣೆಯೇ ಈ ವೀಡಿಯೋ.
ಇದನ್ನೂ ಓದಿ; Viral: ನಿದ್ರೆ ನಿಮ್ಮ ವೈಯಕ್ತಿಕ, ಆದರೆ ಸ್ವಲ್ಪ ಮೋಜಿಗಾಗಿ ಇದನ್ನು ಓದಬಹುದಲ್ಲ…
ಇನ್ಸ್ಟಾಗ್ರಾಮ್ ನಲ್ಲಿ ಟ್ರೋಲ್ ಬೊಗ್ರ ಎಂಬ ಟ್ರೋಲ್ ಪೇಜ್ ಒಂದರಲ್ಲಿ ಹರಿಬಿಡಲಾದ ಈ ವೀಡಿಯೋ ನೆಟ್ಟಿಗರ ಮೆಚ್ಚುಗೆಯನ್ನು ಗಳಿಸಿದೆ. ಇಂದು ಬೆಳಗ್ಗೆ ಪೋಸ್ಟ್ ಮಾಡಲಾದ ವೀಡಿಯೋ 16.9 ಸಾವಿರ ವೀಕ್ಷಣೆಗಳನ್ನು ಮತ್ತು 2.8 ಸಾವಿರ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಲವಾರು ಕಮೆಂಟ್ ಗಳೂ ಈ ವೀಡಿಯೋಗೆ ಹರಿದುಬಂದಿವೆ. ಒಬ್ಬ ಬಳಕೆದಾರರು ‘ಮಾತು ಆಡುವ ಮಾನುಷ್ಯ ನಾಯಿಗೆ ಒದಿಯುತ್ತಾನೆ, ಮಾತು ಬಾರದ ಪ್ರಾಣಿ ಆ ಮಾನವನ ಮೇಲೆ ಪ್ರೀತಿ ತೋರುತ್ತದೆ. ಎಷ್ಟು ವ್ಯತ್ಯಾಸ ಅಲ್ವಾ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ವೀಡಿಯೋದಲ್ಲಿ ಕಂಡಕ್ಟರ್ ನಾಯಿಯನ್ನು ಕಾಲಿನಿಂದ ಒದಿಯುವುದನ್ನು ಗಮನಿಸಿದ ಅನೇಕರು ಕಂಡಕ್ಟರ್ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 9:33 am, Sat, 27 May 23