Video: ಶ್ವಾನಕ್ಕೆ ಸೊಂಡಿಲಿನಿಂದ ನೀರು ಎರಚುತ್ತಾ ಖುಷಿ ಪಟ್ಟ ಕಂಜನ್‌ ಆನೆ

ಪ್ರಾಣಿ ಸಾಮ್ರಾಜ್ಯದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಶ್ವಾನ ಹಾಗೂ ಆನೆಯ ಬಾಂಧವ್ಯ ಸಾರುವ ಅಪರೂಪ ದೃಶ್ಯವೊಂದು ಕಣ್ಮನ ಸೆಳೆಯುತ್ತಿದೆ. ಆನೆಯೊಂದು ಶ್ವಾನಕ್ಕೆ ನೀರು ಎರಚುತ್ತಾ ತುಂಟಾಟದಲ್ಲಿ ತೊಡಗಿದೆ. ಈ ಹೃದಯ ಸ್ಪರ್ಶಿ ವಿಡಿಯೋ ಸದ್ಯ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಶ್ವಾನಕ್ಕೆ ಸೊಂಡಿಲಿನಿಂದ ನೀರು ಎರಚುತ್ತಾ ಖುಷಿ ಪಟ್ಟ ಕಂಜನ್‌ ಆನೆ
ವೈರಲ್‌ ವಿಡಿಯೋ
Image Credit source: Instagram

Updated on: Nov 24, 2025 | 11:43 AM

ಆನೆಗಳ (elephant) ತುಂಟಾಟಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಮಾಲೀಕನ ಜತೆಗೆ ಮಗುವಾಗಿ ವರ್ತಿಸುವ ಆನೆಗಳ ವಿಡಿಯೋವನ್ನು ನೀವು ನೋಡಿರುತ್ತೀರಿ. ಆದರೆ ಈ ದೃಶ್ಯವು ಪ್ರಾಣಿಗಳ ಸುಮಧುರ ಗೆಳತನಕ್ಕೆ ಸಾಕ್ಷಿಯಾಗಿದೆ. ತನ್ನ ಸ್ನೇಹಿತನಾದ ಶ್ವಾನದ (dog) ಜತೆಗೆ ಆನೆಯೊಂದು ತುಂಟಾಟ ಮಾಡುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಮುಗ್ಧ ಪ್ರಾಣಿಗಳ ಶುದ್ಧವಾದ ಗೆಳೆತನ ಕಂಡು ಬೆರಗಾಗಿದ್ದಾರೆ.

ಈ ಆನೆಯ ತುಂಟಾಟ ನೋಡಿ

ಕರ್ನಾಟಕ ವೈಲ್ಡ್ ಲೈಫ್ (Karnataka wildlife) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಕಂಜನ್ ಹಾಗೂ ನಾಯಿಯ ಮಧುರ ಗೆಳೆತನ ಎಂದು ಶೀರ್ಷಿಕೆ ನೀಡಲಾಗಿದೆ. ಇದು ದುಬಾರೆ ಎಲಿಫೆಂಟ್ ಕ್ಯಾಂಪ್‌ನ ಸುಂದರ ದೃಶ್ಯವಾಗಿದೆ. ಆನೆಯೊಂದು ತನ್ನ ಸೊಂಡಿಲಿನಿಂದ ಶ್ವಾನಕ್ಕೆ ನೀರು ಎರಚುತ್ತಾ ತುಂಟಾಟ ಆಡಿದೆ. ಶ್ವಾನವು ಆನೆಯು ನೀರು ಎರಚುತ್ತಿದ್ದಂತೆ ಅತ್ತಿಂದ ಇತ್ತ ಓಡಾಡುತ್ತಾ ಇರುವುದನ್ನು ನೀವು ನೋಡಬಹದು. ಈ ಸುಂದರ ದೃಶ್ಯವನ್ನು ಪ್ರವಾಸಿಗರು ಕಣ್ತುಂಬಿಸಿಕೊಳ್ಳುವುದನ್ನುನೀವಿಲ್ಲಿ ನೋಡಬಹುದು.

ವೈರಲ್‌ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ನನಗೆ ನೀನು, ನಿನಗೆ ನಾನು; ಶ್ವಾನವನ್ನು ಹೆಗಲ ಮೇಲೆ ಹೊತ್ತುಕೊಂಡು ಊರು ಸುತ್ತಿದ ವ್ಯಕ್ತಿ

ಈ ವಿಡಿಯೋ ಇದುವರೆಗೆ ಎರಡೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಇವರಿಬ್ಬರೂ ಭಗವಂತನ ಮಕ್ಕಳು ಎಂದಿದ್ದಾರೆ. ಇನ್ನೊಬ್ಬರು, ಬೆಲೆ ಕಟ್ಟಲಾಗದ ಬಾಂಧವ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಮುದ್ದಾದ ಹೃದಯ ತುಂಟಾಟದಲ್ಲಿ ತೊಡಗಿಕೊಂಡಿದೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 11:10 am, Mon, 24 November 25