Viral Video: ನಮ್ಮ ನಾಗರಿಕತೆ, ಸಂಸ್ಕೃತಿ ಮರಳಿದೆ, ಹೆದ್ದಾರಿಯಲ್ಲಿ ಎತ್ತಿನ ಗಾಡಿ ಓಡಿಸಿದ ರೈತ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 03, 2024 | 5:44 PM

ಇಂದಿನ ಕಾಲದಲ್ಲಿ ನಗರಗಳಲ್ಲಿ ಬಿಡಿ, ಹಳ್ಳಿಗಳಲ್ಲಿಯೂ ಎತ್ತಿನಗಾಡಿಗಳು ಕಾಣಸಿಗುವುದೇ ಬಲು ಅಪರೂಪವಾಗಿಬಿಟ್ಟಿದೆ. ಇಂದು ರೈತರು ಕೃಷಿ ಉದ್ದೇಶಕ್ಕಾಗಿಯೂ ಟ್ರ್ಯಾಕ್ಟರ್ ಇತ್ಯಾದಿ ಯಂತ್ರಗಳನ್ನು ಬಳಸುತ್ತಿದ್ದಾರೆ. ಹಾಗಿರುವಾಗ  ಇಲ್ಲೊಬ್ರು ವ್ಯಕ್ತಿ, ಲಾರಿ, ಬಸ್ಸು ಓಡಾಡುವ ಹೆದ್ದಾರಿಯಲ್ಲಿ ಎತ್ತಿನ ಗಾಡಿಯಲ್ಲಿ ಮಸ್ತ್ ಸವಾರಿ ಹೊರಟಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. 

Viral Video: ನಮ್ಮ ನಾಗರಿಕತೆ, ಸಂಸ್ಕೃತಿ ಮರಳಿದೆ, ಹೆದ್ದಾರಿಯಲ್ಲಿ ಎತ್ತಿನ ಗಾಡಿ ಓಡಿಸಿದ ರೈತ
Follow us on

ಅಭಿವೃದ್ಧಿ, ನಗರೀಕರಣದಿಂದ ಇಂದು ಹಳ್ಳಿಗಳಲ್ಲಿನ ಸೊಗಡು ಕಾಣಸಿಗವುದೇ ಅಪರೂಪವಾಗಿಬಿಟ್ಟಿದೆ. ಅದರಲ್ಲೂ ಒಂದು ಕಾಲದಲ್ಲಿ ರೈತರಿಗೆ ವರವಾಗಿದ್ದ, ಸಾರಿಗೆ ವಹಿವಾಟಿನ  ಪ್ರಮುಖ ಮೂಲವಾಗಿದ್ದ, ಎತ್ತಿನ ಗಾಡಿಗಳು ಮೂಲೆ ಸೇರಿವೆ. ನಗರಗಳಲ್ಲಿ ಬಿಡಿ ಹಳ್ಳಿಗಳಲ್ಲಿಯೂ ಎತ್ತಿನ ಗಾಡಿಗಳು ಕಾಣಸಿಗುವುದೇ ಬಲು ಅಪರೂಪವಾಗಿಬಿಟ್ಟಿದೆ. ಇಂದು ರೈತರು, ತಮ್ಮ ಕೃಷಿ, ವ್ಯಾಪಾರ ಉದ್ದೇಶಗಳಿಗಾಗಿಯೂ ಎತ್ತಿನ ಗಾಡಿಯ ಬದಲಾಗಿ ಟ್ರ್ಯಾಕ್ಟರ್ ಇತ್ಯಾದಿ ವಾಹನಗಳನ್ನು ಬಳಸುತ್ತಿದ್ದಾರೆ.  ಇಂದು ಪ್ರತಿಯೊಬ್ಬರೂ ತಮ್ಮ ದಿನನಿತ್ಯದ ಓಡಾಟಕ್ಕಾಗಿ ಬೈಕು, ಕಾರು, ಸಾರ್ವಜನಿಕ ವಾಹನವನ್ನು ಬಳಸಿದ್ರೆ, ಇಲ್ಲೊಬ್ರು ವ್ಯಕ್ತಿ ಇಂದಿಗೂ ಎತ್ತಿನಗಾಡಿಯಲ್ಲಿಯೇ ಓಡಾಡುತ್ತಿದ್ದಾರೆ. ಹೌದು ಈ ವ್ಯಕ್ತಿ ಲಾರಿ, ಬಸ್ಸು ಓಡಾಡುವ ಹೆದ್ದಾರಿಯಲ್ಲಿ ಎತ್ತಿನಗಾಡಿಯಲ್ಲಿ  ಸವಾರಿ ಹೊರಟಿದ್ದು, ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.

ಪೂನಮ್ ಕೇಸರಿ ಎಂಬವರು ಈ ವಿಡಿಯೋವನ್ನು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು, ನಮ್ಮ ಶಾಶ್ವತ ನಾಗರಿಕತೆ ಮತ್ತು ಸಂಸ್ಕೃತಿ ಮರಳಿದೆ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಹೆದ್ದಾರಿಯೊಂದರ ಟೋಲ್ ಗೇಟ್ ಬಳಿ ವ್ಯಕ್ತಿಯೊಬ್ಬರು ಎತ್ತಿನ ಗಾಡಿಯಲ್ಲಿ ಸವಾರಿ ಹೋಗುತ್ತಿರುವ ದೃಶ್ಯವನ್ನು ಕಾಣಬಹುದು.

ವೈರಲ್​​​ ವಿಡಿಯೋ ಇಲ್ಲಿದೆ:


ವೈರಲ್ ವಿಡಿಯೋದಲ್ಲಿ ಲಾರಿ, ಬಸ್ಸು ಇತ್ಯಾದಿ ಬೃಹತ್  ವಾಹನಗಳು ಓಡಾಡುವ ಹೆದ್ದಾರಿಯಲ್ಲಿ ವ್ಯಕ್ತಿಯೊಬ್ಬರು ಎತ್ತಿನ ಗಾಡಿಯಲ್ಲಿ ಸವಾರಿ ಹೊರಟಿರುವುದನ್ನು ಕಾಣಬಹುದು. ಆ ವ್ಯಕ್ತಿ ಟೋಲ್ ಗೇಟ್ ದಾಟಿ ಹೋಗುವಂಹತ ಸಂದರ್ಭದಲ್ಲಿ, ಎತ್ತಿನ ಗಾಡಿ ಸವಾರಿಯನ್ನು  ಕಂಡು ಇತರ ವಾಹನ ಸವಾರರು ಬಹಳ ಖುಷಿಟ್ಟು ಚಪ್ಪಾಳೆ ತಟ್ಟುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ರೈಲಿನ ಫುಟ್ ಬೋರ್ಡ್ ಬಳಿ ಯಾಕ್ ನಿಂತಿದ್ದೀರಾ, ಬೇಗ ಒಳಗೆ ಹೋಗಿ; ಪ್ರಯಾಣಿಕರಿಗೆ ಸುರಕ್ಷತೆ ಪಾಠ ಕಲಿಸಿದ ಶ್ವಾನ 

ಜನವರಿ 02 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಒಂಬತ್ತು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಮೆಂಟ್ಸ್ಗಳನ್ನು ಸಹ ಪಡೆದುಕೊಂಡಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:51 pm, Wed, 3 January 24