Viral: ರೈಲಿನ ಫುಟ್ ಬೋರ್ಡ್ ಬಳಿ ಯಾಕ್ ನಿಂತಿದ್ದೀರಾ, ಬೇಗ ಒಳಗೆ ಹೋಗಿ; ಪ್ರಯಾಣಿಕರಿಗೆ ಸುರಕ್ಷತೆ ಪಾಠ ಕಲಿಸಿದ ಶ್ವಾನ 

ರೈಲಿನಲ್ಲಿ ಪ್ರಯಣಿಸುವಾಗ ಕೆಲವೊಬ್ಬರೂ  ಫುಟ್ಬೋರ್ಡ್ ಬಳಿ ನಿಂತುಕೊಂಡು ಅಥವಾ ಕುಳಿತುಕೊಂಡು ಪ್ರಯಾಣಿಸುತ್ತಾರೆ. ಈ ರೀತಿ ಹುಚ್ಚಾಟ ಮೆರೆಯುವುದು ಸರಿಯಲ್ಲ ಎಂದು ಎಷ್ಟೇ ಎಚ್ಚರಿಗೆ ನೀಡಿದ್ರೂ ಕೂಡ ಕೆಲವರು ಕ್ಯಾರೇ ಅನ್ನದೇ ಯಾವಾಗ್ಲೂ ರೈಲಿನಲ್ಲಿ ಫುಟ್ಬೋರ್ಡ್ ಬಳಿ ನಿಂತುಕೊಂಡೇ ಪ್ರಯಾಣಿಸುತ್ತಾರೆ. ಇಂತಹ ಪ್ರಯಾಣಿಕರಿಗೆ ಇಲ್ಲೊಂದು ಶ್ವಾನ ಸರಿಯಾದ ಪಾಠವನ್ನು ಕಲಿಸುತ್ತಿದೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು,  ಈ ನಾಯಿಗೆ ರೈಲ್ವೆಯಲ್ಲಿ ಉದ್ಯೋಗ ಸಿಗ್ಲೇಬೇಕಪ್ಪ ಎಂದು ನೆಟ್ಟಿಗರು ಹೇಳಿದ್ದಾರೆ. 

Viral: ರೈಲಿನ ಫುಟ್ ಬೋರ್ಡ್ ಬಳಿ ಯಾಕ್ ನಿಂತಿದ್ದೀರಾ, ಬೇಗ ಒಳಗೆ ಹೋಗಿ; ಪ್ರಯಾಣಿಕರಿಗೆ ಸುರಕ್ಷತೆ ಪಾಠ ಕಲಿಸಿದ ಶ್ವಾನ 
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Jan 03, 2024 | 1:02 PM

ವೇಗವಾಗಿ ಚಲಿಸುತ್ತಿರುವ ರೈಲಿನ ಫುಟ್ ಬೋರ್ಡ್ ಬಳಿ ನಿಂತುಕೊಂಡು ಅಥವಾ ಕುಳಿತುಕೊಂಡು ಪ್ರಯಾಣಿಸುವುದು ತುಂಬಾ ಅಪಾಯಕಾರಿಯಾಗಿದೆ. ಈ ರೀತಿ ಫುಟ್ಬೋರ್ಡ್ ಬಳಿ ನಿಂತು ಪ್ರಯಾಣಿಸುವ ಸಂದರ್ಭದಲ್ಲಿ ಅದೆಷ್ಟೋ ಜನರು ಆಯ ತಪ್ಪಿ ಬಿದ್ದು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಹೀಗೆ ಪ್ರಯಾಣಿಸುವುದು ಅಪಾಯಕಾರಿ ಅಂತ ಗೊತ್ತಿದ್ರೂ ಹಾಗೂ ರೈಲ್ವೆ ಇಲಾಖೆ ಎಷ್ಟೇ ಎಚ್ಚರಿಕೆ ನೀಡಿದ್ರೂ  ಕೂಡಾ ಇಂದಿಗೂ ಕೆಲವೊಬ್ರು ರೈಲಿನಲ್ಲಿ ಪ್ರಯಾಣಿಸುವಾಗ ಫುಟ್ಬೋರ್ಡ್ ಬಳಿಯೇ ನಿಂತಿರುತ್ತಾರೆ. ಇಂತಹ ಮಹಾನುಭಾವರಿಗೆ ಬುದ್ಧಿ ಕಲಿಸಲು ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ಇಲ್ಲೊಂದು ನಾಯಿ ಮುಂಬೈ  ರೈಲ್ವೆ ನಿಲ್ದಾಣದಲ್ಲಿ, ಚಲಿಸುತ್ತಿರುವ ರೈಲಿನ ಫುಟ್ ಬೋರ್ಡ್ ಮೇಲೆ ನೇತಾಡಿಕೊಂಡು ಹೋಗುವವರ ಹತ್ತಿರ ಬಂದು ಬೊಗಳುತ್ತಾ, ಪ್ರಯಾಣಿಕರನ್ನು  ಭಯಪಡಿಸಿ, ರೈಲಿನ ಒಳಗೆ ಹೋಗಿ ಕುಳಿತುಕೊಳ್ಳುವಂತೆ ಮಾಡುವ ಒಂದೊಳ್ಳೆ ಕೆಲಸವನ್ನು ಮಾಡಿದೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

Brut India ಎಂಬ ಫೇಸ್ಬುಕ್ ಪೇಜ್​​ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಶ್ವಾನವೊಂದು ಮುಂಬೈನ ಲೋಕಲ್ ಟ್ರೈನ್ ಅಲ್ಲಿ ಫುಟ್ ಬೋರ್ಡ್ ಬಳಿ ನಿಂತು ಪ್ರಯಾಣಿಸುವಂತಹ ಪ್ರಯಾಣಿಕರಿಗೆ ಬೊಗಳುತ್ತಾ ಭಯಪಡಿಸುವ ಮೂಲಕ ಅವರನ್ನು ಫುಟ್ ಬೋರ್ಡ್ ಬಳಿ ನಿಲ್ಲದಂತೆ ಎಚ್ಚರಿಸುತ್ತಿರುವ ದೃಶ್ಯವನ್ನು   ಕಾಣಬಹುದು.

ಈ ವೈರಲ್​​​ ವಿಡಿಯೋ ಇಲ್ಲಿದೆ ನೋಡಿ

ವೈರಲ್ ವಿಡಿಯೋದಲ್ಲಿ ಚಲಿಸುತ್ತಿರುವ ರೈಲಿನ ಫುಟ್ ಮೇಲೆ ಕುಳಿತು ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಕಂಡು ಶ್ವಾನವೊಂದು, ಫುಟ್ ಬೋರ್ಡ್ ಬಳಿ ಯಾಕ್ ನಿಂತಿದ್ದೀರಾ, ಬೇಗ  ಒಳಗೆ ಹೋಗಿ ಎಂದು ಬೊಗಳುತ್ತಾ, ಭಯಪಡಿಸುವ ಮೂಲಕ ಸುರಕ್ಷತೆಯ ದೃಷ್ಟಿಯಿಂದ  ಪ್ರಯಾಣಿಕರನ್ನು  ಫುಟ್ ಬೋರ್ಡ್ ಬಳಿ ನಿಲ್ಲದಂತೆ ಎಚ್ಚರಿಸುತ್ತಿರುವ ದೃಶ್ಯವನ್ನು   ಕಾಣಬಹುದು.

ಇದನ್ನೂ ಓದಿ: 8 ತಿಂಗಳ ಮಗುವಿನ ಗಂಟಲಲ್ಲಿ ಸಿಲುಕಿತ್ತು ತೆಂಗಿನ ಕಾಯಿ ತುಂಡು!

ಈ ವೈರಲ್ ವಿಡಿಯೋ ಎರಡುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಶ್ವಾನ ಹಿಂದಿನ ಜನ್ಮದಲ್ಲಿ ರೈಲು ಅಪಘಾತದಲ್ಲಿ ಮರಣ ಹೊಂದಿರಬಹುದು. ಈಗ ಮರುಜನ್ಮ ಪಡೆದು, ಇತರ ಪ್ರಯಾಣಿಕರ ಜೀವ ರಕ್ಷಣೆಗಾಗಿ ಈ ಕೆಲಸವನ್ನು ಮಾಡುತ್ತಿರಬಹುದುʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಫುಟ್ ಬೋರ್ಡ್ ಬಳಿ ನಿಲ್ಲಬೇಡಿ ಎಂದು ಜನರನ್ನು ಎಚ್ಚರಿಸುವ ಶ್ವಾನದ ಕಾರ್ಯಕ್ಕೆ ಮೆಚ್ಚಲೇಬೇಕುʼ ಎಂದು ಹೇಳಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:00 pm, Wed, 3 January 24