ಮಗಳಿಗೊಂದು ಚೆಂದನೆಯ ಹೆಸರಿಟ್ಟ ಅಪ್ಪ; ಕೆಲವೇ ತಿಂಗಳಲ್ಲಿ ಗೊತ್ತಾಯ್ತು ಆ ಹೆಸರಿನ ಹಿಂದಿನ ಭಯಂಕರ ಗುಟ್ಟು

ವಿಡಿಯೋ ಇದೀಗ ಸಿಕ್ಕಾಪಟೆ ವೈರಲ್ ಆಗಿದೆ. ನೆಟ್ಟಿಗರಂತೂ ವಿವಿಧ ರೀತಿಯ ಕಾಮೆಂಟ್​​ಗಳನ್ನು ಮಾಡಿದ್ದಾರೆ. ನಿಮ್ಮ ತಂದೆಯದು ಅದೆಷ್ಟು ಸುಂದರ ಸ್ವಾರ್ಥ ಎಂದು ಒಬ್ಬರು ಹೇಳಿದ್ದರೆ, ನಿಮ್ಮ ಹೆಸರನ್ನು ನಾನು ಬದಲಿಸಿಕೊಡುತ್ತೇನೆಂದು ಇನ್ನೊಬ್ಬರು ಹೇಳಿದ್ದಾರೆ.

ಮಗಳಿಗೊಂದು ಚೆಂದನೆಯ ಹೆಸರಿಟ್ಟ ಅಪ್ಪ; ಕೆಲವೇ ತಿಂಗಳಲ್ಲಿ ಗೊತ್ತಾಯ್ತು ಆ ಹೆಸರಿನ ಹಿಂದಿನ ಭಯಂಕರ ಗುಟ್ಟು
ತನ್ನ ತಂದೆ ಇಟ್ಟ ಹೆಸರಿನ ಕತೆ ಹೇಳಿದ ಯುವತಿ
Edited By:

Updated on: Jul 13, 2021 | 5:52 PM

ಹುಟ್ಟುವ ಮಗುವಿಗೆ ಯಾವ ಹೆಸರಿಡಬೇಕು ಎಂಬ ಬಗ್ಗೆ ಪಾಲಕರು ತುಂಬ ಯೋಚಿಸುತ್ತಾರೆ. ಈಗಿಗಂತೂ ಗಂಡು ಹುಟ್ಟರೆ ಆ ಹೆಸರು..ಹೆಣ್ಣು ಹುಟ್ಟಿದರೆ ಈ ಹೆಸರು ಎಂದೆಲ್ಲ ಮಗು ಜನಿಸುವ ಮೊದಲೇ ಫಿಕ್ಸ್​ ಮಾಡಿಟ್ಟುಕೊಳ್ಳುವವರೂ ಇದ್ದಾರೆ. ಹೀಗೆ ಮಗುವಿಗೆ ಹೆಸರಿಡುವಾಗ ಪತಿ-ಪತ್ನಿಯ ಹೆಸರಿನ ಅಕ್ಷರ ಸೇರುವಂತೆ ಇಡುವುದು ಇತ್ತೀಚೆಗೆ ಒಂದು ಫ್ಯಾಷನ್​..ಹೀಗೆ ಹಲವು ಎಮೋಶನ್​​ಗಳನ್ನು ಬೆರೆಸಿ, ಚೆಂದನೆಯ ಹೆಸರು ಇಡಲಾಗುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಮಗುವಿಗೆ ವಿಲಕ್ಷಣ, ವಿಚಿತ್ರ ಕಾರಣಕ್ಕೆ ಒಂದು ಹೆಸರಿಟ್ಟಿದ್ದಾರೆ.

ಯುಎಸ್​ನ ಕೆಂಟುಕಿಯ ಮಹಿಳೆಯೊಬ್ಬರು ಈ ವಿಚಿತ್ರ ಸ್ಟೋರಿ ಹಂಚಿಕೊಂಡಿದ್ದಾರೆ. ತಮ್ಮ ತಂದೆ ತನಗೆ ಯಾಕೆ ಕ್ರಿಸ್ಟಾನಾ ಎಂದು ಹೆಸರಿಟ್ಟರು? ಅದರ ಹಿಂದಿನ ವಿಲಕ್ಷಣ ಕಾರಣವೇನು ಎಂಬ ಬಗ್ಗೆ ವಿವರಿಸಿದ್ದಾರೆ. ನಾನು ಹುಟ್ಟುವ ಮೊದಲನೇ ನನ್ನ ತಂದೆ-ತಾಯಿ ಹೆಸರಿಡುವ ಬಗ್ಗೆ ಚರ್ಚಿಸಿದ್ದರಂತೆ. ಹೆಣ್ಣು ಮಗು ಹುಟ್ಟಿದರೆ ಅಪ್ಪ ಹೆಸರಿಡಬೇಕು..ಗಂಡು ಮಗು ಹುಟ್ಟಿದರೆ ತಾಯಿ ಹೆಸರಿಡಬೇಕು ಎಂಬುದು ಒಪ್ಪಂದವಾಗಿತ್ತು. ನನ್ನ ತಾಯಿಯದ್ದು ಸಿ ಸೆಕ್ಷನ್​ ಹೆರಿಗೆ. ಹಾಗಾಗಿ ನಾನು ಹುಟ್ಟಿದ ತಕ್ಷಣ ನನಗೆ ಸ್ವಲ್ಪ ಚಿಕಿತ್ಸೆಯ ಅಗತ್ಯ ಇದ್ದಿದ್ದರಿಂದ ಪ್ರತ್ಯೇಕವಾಗಿಡಲಾಯಿತು. ತಾಯಿಗೆ ತನಗೆ ಹುಟ್ಟಿದ ಮಗು ಯಾವುದು ಎಂದು ಇನ್ನೂ ಗೊತ್ತಿರಲಿಲ್ಲ. ಆದರೆ ತಂದೆ ನನ್ನ ಜನ್ಮದಾಖಲೆಯನ್ನು ಆಗಲೇ ತುಂಬಬೇಕಿತ್ತು. ಅದರಲ್ಲಿ ನನ್ನ ಹೆಸರನ್ನು ಕ್ರಿಸ್ಟಾನಾ ಎಂದು ಅಪ್ಪ ಬರೆದಿದ್ದರು. ಅದಾದ ಬಳಿಕ ಪೇಪರ್ ನೋಡಿದ ಅಮ್ಮನಿಗೆ ಆ ಹೆಸರಿನ ಬಗ್ಗೆ ತಕರಾರೇನೂ ಇರಲಿಲ್ಲ. ಆದರೆ ಕೆಲವು ತಿಂಗಳಲ್ಲೇ ಕ್ರಿಸ್ಟಾನಾ ಹೆಸರಿನ ಹಿಂದಿನ ಸತ್ಯ ಅರ್ಥವಾಯಿತು.

ನನ್ನ ತಂದೆಗೆ ಕ್ರಿಸ್ಟಾನಾ ಎಂಬ ಮಹಿಳೆಯ ಜತೆ ಲವ್​ ಅಫೇರ್ ಇತ್ತು. ಒಮ್ಮೆ ನಮ್ಮ ಮನೆಯಲ್ಲಿ ಏನಾದರೂ ಅವರು ಬಾಯ್ತಪ್ಪಿನಿಂದ ಕ್ರಿಸ್ಟಾನಾ ಎಂದು ಕರೆದರೆ ಅಮ್ಮನಿಗೆ ಅನುಮಾನ ಬರಬಾರದು ಎಂಬ ಕಾರಣಕ್ಕೆ ಅದೇ ಮಹಿಳೆಯ ಹೆಸರನ್ನು ನನಗೆ ಇಟ್ಟಿದ್ದರು. ಒಮ್ಮೆ ಬಾಯ್ತಪ್ಪಿ ಕ್ರಿಸ್ಟಾನಾ ಎಂದು ಕರೆದು, ಅಮ್ಮ ಕೇಳಿದರೆ ನಾನು ಮಗಳ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಹೇಳಿ ನುಣುಚಿಕೊಳ್ಳುವ ಪ್ಲ್ಯಾನ್​ ಅವರದಾಗಿತ್ತು ಎಂದು ಯುವತಿ ಟಿಕ್​ಟಾಕ್​ ವಿಡಿಯೋ ಮೂಲಕ ಹೇಳಿಕೊಂಡಿದ್ದಾಳೆ.

ಈ ವಿಡಿಯೋ ಇದೀಗ ಸಿಕ್ಕಾಪಟೆ ವೈರಲ್ ಆಗಿದೆ. ನೆಟ್ಟಿಗರಂತೂ ವಿವಿಧ ರೀತಿಯ ಕಾಮೆಂಟ್​​ಗಳನ್ನು ಮಾಡಿದ್ದಾರೆ. ಅದೆಷ್ಟು ಸುಂದರ ಸ್ವಾರ್ಥ ಎಂದು ಒಬ್ಬರು ಹೇಳಿದ್ದರೆ, ಇನ್ನೊಬ್ಬರು ನನ್ನ ತಂದೆಗೆ ಹೈಸ್ಕೂಲ್​​ನಲ್ಲಿ ಒಬ್ಬಳು ಹುಡುಗಿಯ ಮೇಲೆ ಕ್ರಷ್​ ಆಗಿತ್ತು. ಆಕೆಯ ಹೆಸರನ್ನೇ ನನಗೆ ಇಟ್ಟಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ವಿಧವಾ ವೇತನ ಕೇಳಲು ಬಂದಿದ್ದ ಮಹಿಳೆ ಜತೆ ಅಸಭ್ಯ ವರ್ತನೆ ಆರೋಪ; ಗ್ರೇಡ್ 2 ತಹಶೀಲ್ದಾರಗೆ ಬಿತ್ತು ಗೂಸಾ

A Father names daughter after woman he was having affair with