ಬೋರಲು ಬೀಳಲು ಕೂಡ ಬಾರದ ಶಿಶುವಿನ ಬಾಯಲ್ಲಿ ಸಂಸ್ಕೃತ ಶ್ಲೋಕಗಳು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 23, 2022 | 4:39 PM

ಈ ಮುದ್ದಾದ ಮಗುವಿನ ತಾಯಿ ಮಾಡಿದ್ದು ಅದೇ. ಅವರು ಒಂದೊಂದಾಗಿ ಶ್ಲೋಕ ಹೇಳುತ್ತಾ ಹೋಗುತ್ತಾರೆ ಮತ್ತು ಮಗು ಅದನ್ನು ಪೂರ್ತಿ ಮಾಡುತ್ತದೆ. ಅಮ್ಮನ ಗರ್ಭದಲ್ಲಿರುವಾಗಲೇ ಮಗು ಶ್ಲೋಕ ಪಠಿಸುವುದನ್ನು ಕಲಿತಿದೆ ಎಂದು ಹೇಳಲಾಗುತ್ತಿದೆ.

ಬೋರಲು ಬೀಳಲು ಕೂಡ ಬಾರದ ಶಿಶುವಿನ ಬಾಯಲ್ಲಿ ಸಂಸ್ಕೃತ ಶ್ಲೋಕಗಳು!
ಪವಾಡಸದೃಶ ಮಗು
Follow us on

ಇಂಟರ್ ನೆಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ (social media) ನಮಗೆ ಬಗೆಬಗೆಯ ವಿಡಿಯೋ ನೋಡಲು ಸಿಗುತ್ತವೆ ಮಾರಾಯ್ರೇ. ಆದರೆ ಇಂಥದೊಂದು ವಿಡಿಯೋವನ್ನು ನೀವ್ಯಾವತ್ತೂ ನೋಡಿರಲಿಕ್ಕಿಲ್ಲ. ಬೋರಲು ಬೀಳಲು ಕೂಡ ಬಾರದ ಮಗುವೊಂದು ತನ್ನಮ್ಮನ ಜೊತೆ ಸಂಸ್ಕೃತ (Sanskrit) ಶ್ಲೋಕಗಳನ್ನು ಹೇಳುತ್ತಿರುವುದನ್ನು ಚಿತ್ರಿಸಿರುವ ವಿಡಿಯೋ ಇದು. ಆಫ್ ಕೋರ್ಸ್ ನಮ್ಮಂತೆ ನೀವು ಕೂಡ ಈ ಪವಾಡವನ್ನು (miracles) ನಂಬಲಾರಿರಿ. ವಿಡಿಯೋ ನೋಡಿದವರೆಲ್ಲ ಈ ಬೊಚ್ಚುಬಾಯಿ ಮಗುವನ್ನು ‘ಕಲಿಯುಗದ ಅಭಿಮನ್ಯು’ ಎಂದು ಹೇಳುತ್ತಿದ್ದಾರೆ.

ವಿಡಿಯೋದಲ್ಲಿ ಮಗುವಿನ ಅಮ್ಮ ಶ್ಲೋಕ ಹೇಳುತ್ತಿದ್ದಾರೆ ಮತ್ತು ಪ್ರತಿಯೊಂದು ಶ್ಲೋಕದ ಕೊನೆ ಪದ ಉಚ್ಛರಿಸದೆ ನಿಲ್ಲಿಸಿಬಿಡುತ್ತಾರೆ. ಅದನ್ನು ಕೆಲವೇ ತಿಂಗಳು ಪ್ರಾಯದ ಮಗು ಹೇಳಿ ಬಿಡುತ್ತದೆ!

ಈ ಸುಂದರ ಮತ್ತು ಮನಸ್ಸು ಪುಳಕಿತಗೊಳಿಸುವ ವಿಡಿಯೋವನ್ನು ಐಪಿಎಸ್ ಅಧಿಕಾರಿ ರಾಜೇಶ್ ಹಿಂಗನ್ಕರ್ ತಮ್ಮ ಟ್ವಿಟರ್ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಶ್ಲೋಕದ ಕೊನೆಯ ಶಬ್ದವನ್ನು ಮಗು ಸ್ಪಷ್ಟವಾಗಿ ಉಚ್ಛರಿಸುವುದು ವಿಸ್ಮಯಕಾರಿ ಸಂಗತಿ ಮಾರಾಯ್ರೇ. ಇದನ್ನು ಪುನ್ಸಾವನ್ ಸಂಸ್ಕಾರ ಅಂತ ಕರೆಯುತ್ತಾರೆಂದು ಜನ ಹೇಳುತ್ತಿದ್ದಾರೆ. ಅದರರ್ಥ ಮಹಿಳೆ ಗರ್ಭದಲ್ಲಿ ಮಗು ಬೆಳೆಯುತ್ತಿರುವಾಗ ಶ್ಲೋಕಗಳನ್ನು ಹೇಳುತ್ತಾಳೆ ಅಥವಾ ಅದಕ್ಕೆ ಬೋಧಿಸುತ್ತಾಳೆ.

ಈ ಮುದ್ದಾದ ಮಗುವಿನ ತಾಯಿ ಮಾಡಿದ್ದು ಅದೇ. ಅವರು ಒಂದೊಂದಾಗಿ ಶ್ಲೋಕ ಹೇಳುತ್ತಾ ಹೋಗುತ್ತಾರೆ ಮತ್ತು ಮಗು ಅದನ್ನು ಪೂರ್ತಿ ಮಾಡುತ್ತದೆ. ಅಮ್ಮನ ಗರ್ಭದಲ್ಲಿರುವಾಗಲೇ ಮಗು ಶ್ಲೋಕ ಪಠಿಸುವುದನ್ನು ಕಲಿತಿದೆ ಎಂದು ಹೇಳಲಾಗುತ್ತಿದೆ.

ಹಿಂದೂ ಸಂಪ್ರದಾಯಗಳಲ್ಲಿ ಮಕ್ಕಳು ಚಿಕ್ಕವರಾಗಿರುವಾಗಲೇ 16 ಶಾಸ್ತ್ರಗಳನ್ನು ಕಲಿತಿರಬೇಕೆಂಬ ನಂಬಿಕೆಯಿದ್ದು ಅವುಗಳಲ್ಲಿ ಒಂದು ಪುನ್ಸಾವನ್ ಸಂಸ್ಕಾರ ಆಗಿದೆ. ಮಗುವಿಗೆ ಮೂರು ತಿಂಗಳು ಆದ ಬಳಿಕ ತಂದೆತಾಯಿಗಳು ಅದಕ್ಕೆ ಕಲಿಸಲು ಆರಂಭಿಸುತ್ತಾರೆ. ಆರೋಗ್ಯವಂತ ಮಗುವನ್ನು ಪಡೆಯಲು ಗರ್ಭಿಣಿ ಮಹಿಳೆ ಪುನ್ಸಾವನ್ ಸಂಸ್ಕಾರ ಪಠಿಸುತ್ತಾಳೆ ಮತ್ತು ಗರ್ಭದಲ್ಲಿರುವ ಮಗು ಅದನ್ನು ಗ್ರಹಿಸುತ್ತಾ ಹೋಗುತ್ತದೆ.

ಈ ವಿಡಿಯೋವನ್ನು ಈಗಾಗಲೇ ಸಾವಿರಾರು ಜನ ವೀಕ್ಷಿಸಿದ್ದಾರೆ. ನೋಡಿದವರೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ ಮತ್ತು ರೀಟ್ವೀಟ್ ಮಾಡುತ್ತಿದ್ದಾರೆ. ಸುಭದ್ರೆಯ ಗರ್ಭದಲ್ಲಿರುವಾಗಲೇ ಅಭಿಮನ್ಯು ಚಕ್ರವ್ಯೂಹ ಭೇದಿಸುವುದನ್ನು ಕಲಿತಿದ್ದ ಎಂದು ಮಹಾಭಾರತ ಹೇಳುತ್ತದೆ.