
ವಿದೇಶಿಗರಿಗೆ (foreigner) ಭಾರತವೆಂದರೆ ಅದೇನೋ ಸೆಳೆತ. ಹೀಗಾಗಿ ಭಾರತಕ್ಕೆ ಬರುವ ವಿದೇಶಿಗರ ಸಂಖ್ಯೆ ಹೆಚ್ಚಾಗಿದೆ. ಹೀಗೆ ಬಂದ ವಿದೇಶಿಗರು ಇಲ್ಲಿನ ಪ್ರವಾಸಿ ತಾಣಗಳು ಹಾಗೂ ಹಳ್ಳಿ ಬದುಕನ್ನು ಆಸ್ವಾದಿಸುತ್ತಾರೆ. ಇದೀಗ ಭತ್ತ ತೂರುವ ಕಾಯಕದಲ್ಲಿ ಬ್ಯುಸಿಯಾಗಿದ್ದ ಹಳ್ಳಿ ಮಹಿಳೆಯರ ಜತೆಗೆ ಬೆರೆತು ಕೆಲಸ ಮಾಡಿದ ವಿದೇಶಿ ಮಹಿಳೆಯ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.
ಮರಿಯಾ (Maria) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಚೆನ್ನೈ ಮೂಲದ ಸೊಸೆಯಾಗಿರುವ ಈ ಮರಿಯಾ ಹಳ್ಳಿಯ ಮಹಿಳೆಯರ ಜತೆಗೆ ಬೆರೆತು ಕೆಲಸ ಮಾಡುವುದನ್ನು ಕಾಣಬಹುದು. ಇಲ್ಲಿ ಹಳ್ಳಿ ಮಹಿಳೆಯರು ಭತ್ತ ತೂರುವ ಕಾಯಕದಲ್ಲಿ ಬ್ಯುಸಿಯಾಗಿದ್ದಾರೆ. ಇವರ ಜತೆಗೆ ವಿದೇಶಿ ಮಹಿಳೆ ಬೆರೆತು ಸಖತ್ ಎಂಜಾಯ್ ಮಾಡುತ್ತಿರುವ ದೃಶ್ಯವನ್ನು ನೋಡಬಹುದು.
ಇದನ್ನೂ ಓದಿ: ವಿದೇಶಿ ಸೊಸೆ-ಮಗನನ್ನು ಆರತಿ ಬೆಳಗಿ ಮನೆಗೆ ಸ್ವಾಗತಿಸಿದ ಭಾರತೀಯ ಕುಟುಂಬ
ಈ ವಿಡಿಯೋ ಎರಡು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿವೆ. ಒಬ್ಬ ಬಳಕೆದಾರ, ಈ ವಿದೇಶಿ ಮಹಿಳೆಗೆ ಎಷ್ಟು ಖುಷಿ ನೋಡಿ ಎಂದಿದ್ದಾರೆ. ಇನ್ನೊಬ್ಬರು, ನಮ್ಮವರೇ ಈ ಹಳ್ಳಿ ಬದುಕು ಬೇಡವೆಂದು ದೂರ ಸರಿಯುವವರ ಮುಂದೆ ಈ ವಿದೇಶಿ ಮಹಿಳೆಗೆ ಇರುವ ಆಸಕ್ತಿ ಮೆಚ್ಚುವಂತಹದ್ದು ಎಂದು ಹೇಳಿದ್ದಾರೆ. ಮತ್ತೊಬ್ಬರು, ನೋಡಲು ಎರಡು ಕಣ್ಣು ಸಾಲದು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:54 am, Sun, 30 August 26