Video: ಮೊದಲ ಬಾರಿಗೆ ಭಾರತೀಯ ರೈಲಿನಲ್ಲಿ ಪ್ರಯಾಣಿಸಿ ಅನುಭವ ಬಿಚ್ಚಿಟ್ಟ ವಿದೇಶಿಗ

ಆರಾಮದಾಯಕ ಮತ್ತು ಬಜೆಟ್‌ ಫ್ರೆಂಡ್ಲಿ ಎಂದು ಹೆಚ್ಚಿನ ಭಾರತೀಯರು ಪ್ರಯಾಣಕ್ಕಾಗಿ ರೈಲನ್ನೇ ಅವಲಂಬಿಸಿದ್ದಾರೆ. ಆದರೆ ವಿದೇಶಿಗರೊಬ್ಬರು ಭಾರತೀಯ ರೈಲಿನಲ್ಲಿ ಮೊದಲ ಬಾರಿಗೆ ಪ್ರಯಾಣಿಸಿ ಒಂದೊಳ್ಳೆ ಅನುಭವ ಪಡೆದುಕೊಂಡಿದ್ದಾರೆ. ತಮ್ಮ ಸುಂದರ ಪ್ರಯಾಣದ ಕ್ಷಣಗಳನ್ನು ಸೆರೆ ಹಿಡಿದು ಹಂಚಿಕೊಂಡಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಮೊದಲ ಬಾರಿಗೆ ಭಾರತೀಯ ರೈಲಿನಲ್ಲಿ ಪ್ರಯಾಣಿಸಿ ಅನುಭವ ಬಿಚ್ಚಿಟ್ಟ ವಿದೇಶಿಗ
ವೈರಲ್‌ ವಿಡಿಯೋ
Image Credit source: Instagram

Updated on: Oct 26, 2025 | 5:08 PM

ಭಾರತಕ್ಕೆ ಬಂದ ವಿದೇಶಿಗರು (Foreigner) ಇಲ್ಲಿನ ಆಹಾರದಿಂದ ಹಿಡಿದು ಪ್ರವಾಸಿ ತಾಣಗಳನ್ನು ಇಷ್ಟ ಪಡ್ತಾರೆ. ಇಲ್ಲಿನ ಆಚಾರ, ವಿಚಾರ ಸೇರಿದಂತೆ ಹಲವು ವಿಚಾರವನ್ನು ಕಲಿಯುತ್ತಾರೆ. ಬಸ್ಸು, ರೈಲು, ಆಟೋಗಳಲ್ಲಿ ಓಡಾಡುವ ಮೂಲಕ ಹೊಚ್ಚ ಹೊಸ ಅನುಭವವನ್ನು ಪಡೆಯುತ್ತಾರೆ. ಸ್ಕಾಟಿಷ್ ಕಂಟೆಂಟ್ ಕ್ರಿಯೇಟರ್ (Scottish content creator’s) ಭಾರತೀಯ ರೈಲಿನಲ್ಲಿ ಪ್ರಯಾಣಿಸಿದ್ದು ತಮಗಾದ ಆನಂದದಾಯಕ ಅನುಭವದ ಬಗ್ಗೆ ಹೇಳಿದ್ದಾರೆ. ಭಾರತೀಯ ರೈಲ್ವೆ ಸೇವೆಯನ್ನು ಶ್ಲಾಘಿಸಿದ್ದಾರೆ. ವಿವಿಧ ದೇಶಗಳಲ್ಲಿನ ರೈಲ್ವೆ ಸೇವೆಗೂ ಇಲ್ಲಿಗೂ ಏನೆಲ್ಲಾ ವ್ಯತ್ಯಾಸವಿದೆ ಎಂದು ವಿವರಿಸಿದ್ದು, ಈ ವಿಡಿಯೋ ಇಂಟರ್ನೆಟ್‌ನಲ್ಲಿ ಗಮನ ಸೆಳೆದಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆದಾರರೂ ಭಾರತೀಯ ರೈಲ್ವೆಯ ದಕ್ಷ ಸೇವೆಯನ್ನು ಹಾಡಿ ಹೊಗಳಿದ್ದಾರೆ.

hughabroad ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಟಿಕೆಟ್ ಕಲೆಕ್ಟರ್ ಬಂದು ಪ್ರಯಾಣಿಕರ ಟಿಕೆಟ್ ಪರಿಶೀಲನೆ ನಡೆಸುತ್ತಿದ್ದಾರೆ. ಈ ವೇಳೆ ವಿದೇಶಿಗನು ಟಿಕೆಟ್ ಪರಿಶೀಲನಾ ವ್ಯವಸ್ಥೆಯ ದಕ್ಷತೆ ಮತ್ತು ರೈಲಿನಲ್ಲಿರುವ ವಿಶಾಲವಾದ ಆಸನ ವ್ಯವಸ್ಥೆಗಳನ್ನು ಹೊಗಳಿದ್ದಾರೆ. ನಿಲ್ದಾಣಗಳಲ್ಲಿ ಯಾವುದೇ ಅಡೆತಡೆಗಳಿಲ್ಲ. ರೈಲು ಚಲಿಸುತ್ತಿದ್ದಂತೆ ಟಿಕೆಟ್ ಕಲೆಕ್ಟರ್ ಬಂದು ನನ್ನ ಟಿಕೆಟ್ ತೆಗೆದುಕೊಂಡು, ನನ್ನ ಹೆಸರು ಹೊಂದಿಕೆಯಾಗುತ್ತದೆಯೇ ಎಂದು ಪರಿಶೀಲಿಸಿದರು ಎಂದು ಹೇಳುವುದನ್ನು ನೋಡಬಹುದು.

ಇದನ್ನೂ ಓದಿ
ಬೆಂಗಳೂರಲ್ಲಿ ಜಾಗಿಂಗ್ ಮಾಡ್ತಿದ್ದ ವೇಳೆ ವಿದೇಶಿಗನನ್ನು ಕಚ್ಚಿದ ಬೀದಿ ನಾಯಿ
ಆಹಾ! ಎಷ್ಟು ಚಂದ ನೋಡಿ ಈ ವಿದೇಶಿಗನ ಬಾಯಲ್ಲಿ ಕನ್ನಡ ಕೇಳೋದು
ಬೆಂಗಳೂರಿನ ಫುಟ್‌ಪಾತ್‌ನಲ್ಲಿ ಸಂಚರಿಸಿ ವಾಸ್ತವ ಸ್ಥಿತಿ ಬಿಚ್ಚಿಟ್ಟ ವಿದೇಶಿಗ
ಭಾರತದಲ್ಲಿನ ಜೀವನ ಎಷ್ಟು ಕಷ್ಟ ಎಂದು ತಿಳಿಸಿದ ರಷ್ಯನ್ ಯುವತಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಜಪಾನ್, ತೈವಾನ್, ಕೊರಿಯಾದಲ್ಲಿ ಇತರ ದೇಶಗಳಲ್ಲಿ ನಾನು ನೋಡಿದ ರೈಲುಗಳಿಗೆ ಹೋಲಿಸಿದ್ರೆ ಇಲ್ಲಿ ಹೆಚ್ಚು ಸ್ಥಳವಕಾಶವಿದೆ. ಈ ರೈಲು ಇತರ ಎಲ್ಲಾ ದೇಶದ ರೈಲ್ವೆ ಸೇವೆಗಳನ್ನು ಮೀರಿಸುತ್ತದೆ, ಸ್ಥಳ ಹಾಗೂ ಗೌಪ್ಯತೆಯ ದೃಷ್ಟಿಯಿಂದ ರೈಲು ಸೇವೆಯೂ ಸಾಕಷ್ಟು ಉತ್ತಮವಾಗಿದೆ. ಕೆಲವೊಮ್ಮೆ ಯುಕೆಯಲ್ಲಿ, ನೀವು ಸ್ಕಾಟ್ಲೆಂಡ್‌ನಿಂದ ಲಂಡನ್‌ಗೆ ಹೋಗಲು €80 ಪಾವತಿಸುತ್ತೀರಿ. ನಿಮ್ಮ ಪಕ್ಕದಲ್ಲಿ ಬೇರೊಬ್ಬ ಪ್ರಯಾಣಿಕರು ಇದ್ದೆ ಇರುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ:Viral: ಬೆಂಗಳೂರಿನಲ್ಲಿ ವಿದೇಶಿ ಉದ್ಯಮಿ ಮೇಲೆ ನಾಯಿ ದಾಳಿ, ಬೆಡ್ ಮೇಲೆ ಮಲಗಿ ಶ್ವಾನಗಳನ್ನು ಪ್ರೀತಿಸುವೆ ಎಂದು ವ್ಯಂಗ್ಯ ಪೋಸ್ಟ್

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಒಬ್ಬ ಬಳಕೆದಾರ ಇಡೀ ರೈಲಿನಲ್ಲಿ ಅತ್ಯುತ್ತಮ ಸೀಟೆಂದರೆ ಕೆಳಗಿನ ಬದಿಯ ಸೀಟು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ನಿದ್ದೆ ಮಾಡಿ, ಚಹಾ ಕುಡಿಯಿರಿ. ಆರಾಮದಾಯಕ ಪ್ರಯಾಣ ಮಾಡಿ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ ನಮ್ಮ ಭಾರತೀಯ ರೈಲ್ವೆಯ ಬಗ್ಗೆ ನಮಗೆ ಹೆಮ್ಮೆ ಇದೆ, ನೀವು ಇದೇ ರೀತಿ ಪೋಸ್ಟ್ ಮಾಡುತ್ತಲೇ ಇರಿ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ