Video: ಮುದ್ದು ಮುದ್ದಾಗಿ ಕನ್ನಡ ಮಾತನಾಡಿ ಕನ್ನಡಿಗರ ಹೃದಯ ಗೆದ್ದ ಜರ್ಮ್‌ನ್‌ ಮಹಿಳೆ

ವಿದೇಶಿಗರ ಬಾಯಲ್ಲಿ ಕನ್ನಡ ಪದಗಳನ್ನು ಕೇಳುವುದಕ್ಕೆ ಖುಷಿಯಾಗುತ್ತದೆ. ವಿದೇಶಿಗರು ನಮ್ಮ ಕನ್ನಡ ಭಾಷೆಯನ್ನು ತುಂಬು ಹೃದಯದಿಂದ ಇಷ್ಟ ಪಟ್ಟು ಕಲಿಯುವುದನ್ನು ನೋಡಿದರೆ ಖುಷಿಯಾಗುತ್ತದೆ. ಇದೀಗ ಜರ್ಮನಿಯ ಮಹಿಳೆಯೂ ಯುವಕನೊಂದಿಗೆ ಕನ್ನಡದಲ್ಲಿ ಮಾತನಾಡಲು ಪ್ರಯತ್ನ ಪಟ್ಟಿದ್ದಾಳೆ. ಈ ವಿಡಿಯೋ ಕನ್ನಡಿಗರ ಹೃದಯ ಗೆದ್ದುಕೊಂಡಿದೆ.

Video: ಮುದ್ದು ಮುದ್ದಾಗಿ ಕನ್ನಡ ಮಾತನಾಡಿ ಕನ್ನಡಿಗರ ಹೃದಯ ಗೆದ್ದ ಜರ್ಮ್‌ನ್‌ ಮಹಿಳೆ
ವಿದೇಶಿ ಮಹಿಳೆಯ ಕನ್ನಡ ಪ್ರೀತಿ
Image Credit source: Instagram

Updated on: Oct 23, 2025 | 6:00 PM

ಭಾರತಕ್ಕೆ ಬಂದ ವಿದೇಶಿಗರು (foreigners) ಇಲ್ಲಿನ ಆಚಾರ ವಿಚಾರಗಳೊಂದಿಗೆ ಸ್ಥಳೀಯ ಭಾಷೆಗಳನ್ನು ಕಲಿಯಲು ಇಷ್ಟ ಪಡುತ್ತಾರೆ. ಆದರೆ, ಈ ವಿದೇಶಿಗರ ಬಾಯಲ್ಲಿ ಕನ್ನಡ ಪದಗಳನ್ನು ಕೇಳುತ್ತಿದ್ದರೆ ನಾವುಗಳು ಕಳೆದೇ ಹೋಗುತ್ತೇವೆ. ಪದಗಳ ಉಚ್ಚಾರಣೆ ತಪ್ಪಿದರೂ ಕನ್ನಡ ಭಾಷೆ ಕಲಿಯಬೇಕೆನ್ನುವ ಅವರ ಆಸಕ್ತಿಯೂ ನಿಜಕ್ಕೂ ಮೆಚ್ಚುವಂತಹದ್ದು. ಇದಕ್ಕೆ ಉದಾಹರಣೆಯಂತಿದ್ದಾರೆ ಈ ಜರ್ಮನ್ ಮಹಿಳೆ (German Lady). ಹೌದು ತಮಗೆ ಗೊತ್ತಿರುವಷ್ಟು ಪದಗಳನ್ನು ಒಂದೊಂದಾಗಿ ಪೋಣಿಸಿ ತನ್ನ ಬಗ್ಗೆ ಪರಿಚಯ ಮಾಡಿಕೊಂಡು, ಮೊದಲು ಕನ್ನಡ ಕಲಿಯಬೇಕು ಎನ್ನುವ ಇಚ್ಛೆಯನ್ನು ಹೊರಹಾಕಿದ್ದಾಳೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ವಿದೇಶಿ ಮಹಿಳೆಯ ಕನ್ನಡ ಪ್ರೀತಿಗೆ ಮೆಚ್ಚಿಕೊಂಡಿದ್ದಾರೆ.

ವಿದೇಶಿ ಮಹಿಳೆ ಎಷ್ಟು ಮುದ್ದಾಗಿ ಕನ್ನಡ ಮಾತಾಡ್ತಾಳೆ ನೋಡಿ

ಪವನ್‌ ಕೋಮರನ್‌ (pavan komaran) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಕನ್ನಡಿಗನೊಬ್ಬನು ವಿದೇಶಿ ಮಹಿಳೆಯ ಬಳಿ ಕನ್ನಡದಲ್ಲೇ ಮಾತನಾಡುವುದನ್ನು ನೋಡಬಹುದು. ಈ ವಿದೇಶಿ ಮಹಿಳೆ ನನ್ನ ಹೆಸರು ಜೇಸಿಕಾ ನಾನು ಜರ್ಮನ್ ನಿಂದ ಬಂದಿದ್ದೇನೆ ಎಂದು ಹೇಳುತ್ತಾಳೆ. ಆ ಬಳಿಕ ಈ ಯುವಕನು ಇಷ್ಟು ಪದಗಳು ಮಾತ್ರ ಗೊತ್ತಿದೆಯೇ ಎಂದು ಕೇಳುತ್ತಿದ್ದಂತೆ, ನಗುತ್ತಾ ನಮಸ್ತೆ ಎಂದೇಳುತ್ತಾಳೆ. ಯುವಕನು ನಮಸ್ಕಾರ ಪದವು ಕರ್ನಾಟಕದ್ದು ಎನ್ನುತ್ತಿದ್ದಂತೆ, ಈ ಮಹಿಳೆ ನಮಸ್ಕಾರ ಎಂದು ಮತ್ತೆ ಅದೇ ಪದವನ್ನು ಪುನಾರ್ವತಿಸುವುದನ್ನು ಕಾಣಬಹುದು. ನೀವು ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆಯನ್ನು ಚೆನ್ನಾಗಿ ಕಲಿಯಿರಿ ಎಂದು ಯುವಕ ಹೇಳುತ್ತಿದ್ದಂತೆ, ಈ ವಿದೇಶಿ ಮಹಿಳೆಯೂ ಮೊದಲು ಕನ್ನಡ, ಆಮೇಲೆ ಹಿಂದಿ ಎಂದಿರುವುದನ್ನು ನೀವು ನೋಡಬಹುದು.

ಇದನ್ನೂ ಓದಿ
ಚರಂಡಿಗೆ ಬಿದ್ದ ಹಸುವನ್ನು ರಕ್ಷಿಸಿ ಮಾನವೀಯತೆ ಮೆರೆದ ವಿದೇಶಿಗ
ಭಾರತೀಯನ ಜೊತೆ ಮದ್ವೆ, ನನ್ನ ಜೀವನವೇ ಬದಲಾಗಿ ಹೋಯ್ತು ಎಂದ ವಿದೇಶಿ ಮಹಿಳೆ
ಆಹಾ! ಎಷ್ಟು ಚಂದ ನೋಡಿ ಈ ವಿದೇಶಿಗನ ಬಾಯಲ್ಲಿ ಕನ್ನಡ ಕೇಳೋದು
ಅಹಮದಾಬಾದ್ ನಗರ ಮಹಿಳೆಯರಿಗೆ ತುಂಬಾನೇ ಸುರಕ್ಷಿತ ಎಂದ ವಿದೇಶಿ ಮಹಿಳೆ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:Video: ಆಹಾ! ಎಷ್ಟು ಚಂದ ನೋಡಿ ಈ ವಿದೇಶಿಗನ ಬಾಯಲ್ಲಿ ಕನ್ನಡ ಕೇಳೋದು

ಈ ವಿಡಿಯೋ ಒಂದು ಲಕ್ಷ ಮೂವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರರು ಮೊದಲು ಕನ್ನಡ ಕಲಿಸಿ ಎಂದಿದ್ದಾರೆ. ಇನ್ನೊಬ್ಬರು ಕನ್ನಡ ಭಾಷೆ ನಿಜಕ್ಕೂ ಸುಂದರ, ಸರಳ ಕಲಿಯಿರಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ವಾವ್ಹ್, ಕನ್ನಡ ಪದಗಳನ್ನು ಕೇಳುವುದೇ ಚಂದ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 5:59 pm, Thu, 23 October 25