Video: ಭಾರತೀಯನನ್ನು ಮದ್ವೆಯಾದ ಬಳಿಕ ನನ್ನ ಜೀವನವೇ ಬದಲಾಗಿ ಹೋಯ್ತು ಎಂದ ವಿದೇಶಿ ಮಹಿಳೆ
ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಹೆಣ್ಣು ಮಕ್ಕಳು ಗಂಡನ ಮನೆಯ ಆಚಾರ ವಿಚಾರ ಸಂಪ್ರದಾಯ ಅನುಸರಿಸಬೇಕಾಗುತ್ತದೆ. ಭಾರತೀಯನನ್ನು ಮದುವೆಯಾದ ವಿದೇಶಿ ಮಹಿಳೆಗೂ ಇದೇ ರೀತಿಯಾಗಿದೆ. ಹೀಗಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ತನ್ನ ಜೀವನದಲ್ಲಿ ಏನೆಲ್ಲಾ ಬದಲಾಯ್ತು ಎಂದು ಹೇಳಿಕೊಂಡಿದ್ದಾಳೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಇತ್ತೀಚೆಗಿನ ದಿನಗಳಲ್ಲಿ ವಿದೇಶಿಗರನ್ನು (Foreigner) ಭಾರತೀಯ ಯುವಕ ಯುವತಿಯರು ವರಿಸುತ್ತಿದ್ದಾರೆ. ಈ ವಿದೇಶಿಗರು ಹಿಂದೂ ಸಂಪ್ರದಾಯದಂತೆ ಭಾರತೀಯ ಯುವಕ ಅಥವಾ ಯುವತಿಯರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಾಕಷ್ಟು ಕಥೆಗಳನ್ನು ನೀವು ನೋಡಿರುತ್ತೀರಿ. ಮದುವೆಯಾದ ಬಳಿಕ ವಿದೇಶಿಗರು ತಮ್ಮ ಪತಿ ಅಥವಾ ಪತ್ನಿಯೊಂದಿಗೆ ಭಾರತದಲ್ಲಿ ನೆಲೆಸುತ್ತಾರೆ. ಈ ವೇಳೆ ಇಲ್ಲಿನ ಆಚಾರ ವಿಚಾರವನ್ನು ಅಳವಡಿಸಿಕೊಳ್ಳುತ್ತಾರೆ. ಆದರೆ ಉಕ್ರೇನಿಯನ್ ಮಹಿಳೆ (Ukrainian woman) ಭಾರತೀಯನನ್ನು ಮದುವೆಯಾಗಿದ್ದು, ಆ ಬಳಿಕ ತನ್ನ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ ಎಂದು ವಿವರಿಸಿದ್ದಾಳೆ. ಇಲ್ಲಿನ ಸಂಪ್ರದಾಯದೊಂದಿಗೆ ಈ ಮೂರು ಬದಲಾವಣೆಯನ್ನು ಸ್ವೀಕರಿಸಬೇಕಾಯಿತು ಎಂದು ಉಕ್ರೇನಿಯನ್ ಮಹಿಳೆ ಇನ್ಸ್ಟಾಗ್ರಾಮ್ ವಿಡಿಯೋದಲ್ಲಿ ಹೇಳಿದ್ದಾಳೆ.
ವೈವಾಹಿಕ ಜೀವನದ ಬಳಿಕ ಆದ ಬದಲಾವಣೆ ವಿವರಿಸಿದ ವಿದೇಶಿ ಮಹಿಳೆ
ವಿಕ್ಟೋರಿಯಾ ಚಕ್ರಬೋರ್ಟಿ (viktoriia.chakraborty) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮದುವೆಯ ಬಳಿಕ ತನ್ನ ಜೀವನದಲ್ಲಿ ಆದ ಮೂರು ಬದಲಾವಣೆಗಳ ಬಗ್ಗೆ ಉಲ್ಲೇಖಿಸಿದ್ದಾಳೆ. ಡ್ರೆಸ್ಸಿಂಗ್ ಶೈಲಿಯಿಂದ ಹಿಡಿದು ಭಾರತೀಯ ಆಹಾರದವರೆಗೂ ತಮ್ಮ ಜೀವನದಲ್ಲಿ ಸಣ್ಣ ಪುಟ್ಟ ಬದಲಾವಣೆಗಳು ಸಂತೋಷ ತಂದಿದೆ ಎಂದು ಹೇಳಿದ್ದಾಳೆ. ಸೀರೆ ವಾಡ್ರೋರ್ಬ್‌ನ ಭಾಗವಾಗಿದೆ. ಸೀರೆ ಯಿಲ್ಲದೇ ಮದುವೆ ಹಾಗೂ ಇತರ ಸಮಾರಂಭಗಳಿಗೆ ಹಾಜರಾಗುವುದನ್ನು ಊಹಿಸಲು ಸಾಧ್ಯವಿಲ್ಲ. ಸಾಂಪ್ರದಾಯಿಕ ಆಹಾರವನ್ನು ಕೈಗಳಿಂದ ತಿನ್ನುವುದು ಸ್ವಾಭಾವಿಕವಾಗಿದೆ. ಹಬ್ಬಗಳು ವರ್ಷದ ನನ್ನ ನೆಚ್ಚಿನ ಸಮಯಗಳಲ್ಲಿ ಒಂದಾಗಿದೆ. ಇದು ಬಣ್ಣಗಳು, ದೀಪಗಳು ಹಾಗೂ ಆಚರಣೆಗಳು ನನ್ನನ್ನು ಸದಾ ಮನೆಯಲ್ಲಿರುವಂತೆ ಮಾಡುತ್ತದೆ ಎಂದು ವಿವರಿಸಿದ್ದಾಳೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಇದನ್ನೂ ಓದಿ:Video: ಆಹಾ! ಎಷ್ಟು ಚಂದ ನೋಡಿ ಈ ವಿದೇಶಿಗನ ಬಾಯಲ್ಲಿ ಕನ್ನಡ ಕೇಳೋದು
ಈ ವಿಡಿಯೋ ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರ ಸುಂದರವಾದ ಮಹಿಳೆ ಎಂದಿದ್ದಾರೆ. ನೀವು ಸುಂದರವಾಗಿದ್ದೀರಿ, ಆದರೆ ಮದುವೆಯಾದ ಬಳಿಕ ಇನ್ನಷ್ಟು ಮುದ್ದಾಗಿ ಕಾಣುತ್ತೀರಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಸೀರೆಯಲ್ಲಿ ಮುದ್ದಾಗಿ ಕಾಣುತ್ತೀರಿ ಎಂದು ಇನ್ನೊಬ್ಬ ಬಳಕೆದಾರ ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:33 pm, Tue, 23 September 25








