ಪೆಟ್ರೋಲ್ ಬಂಕ್ ಸಿಬ್ಬಂದಿ ಕೆನ್ನೆಗೆ ಹೊಡೆದ ರಾಜಸ್ಥಾನದ ಅಧಿಕಾರಿಗೆ ವಾಪಾಸ್ ಕಪಾಳಮೋಕ್ಷ
ರಾಜಸ್ಥಾನದ ಅಧಿಕಾರಿಯೊಬ್ಬರು ಪೆಟ್ರೋಲ್ ಪಂಪ್ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ವೇಳೆ ಆತ ಪಾವಾಸ್ ಮತ್ತೆ ಆ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಬಿಲ್ವಾರದಲ್ಲಿ ಎಸ್‌ಡಿಎಂ ಛೋಟು ಲಾಲ್ ಶರ್ಮಾ ಅವರ ಪತ್ನಿಯ ಮೇಲೆ ನಡೆದ ದಾಳಿಯ ನಂತರ ಎಸ್‌ಡಿಎಂ ಛೋಟು ಲಾಲ್ ಶರ್ಮಾ ಮತ್ತು ಪೆಟ್ರೋಲ್ ಪಂಪ್ ಕಾರ್ಮಿಕರ ನಡುವೆ ಹೊಡೆದಾಟ ನಡೆದಿದೆ. ಈ ಘಟನೆಯು ಬಂಧನ ಮತ್ತು ಪೊಲೀಸ್ ತನಿಖೆಗೆ ಕಾರಣವಾಯಿತು.
ಜೈಪುರ, ಅಕ್ಟೋಬರ್ 23: ರಾಜಸ್ಥಾನದ (Rajasthan) ಭಿಲ್ವಾರದಲ್ಲಿರುವ ಪೆಟ್ರೋಲ್ ಪಂಪ್‌ನಲ್ಲಿ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಒಬ್ಬ ಉದ್ಯೋಗಿಗೆ ಕಪಾಳಮೋಕ್ಷ ಮಾಡಿದ ನಂತರ ಉಂಟಾದ ವಾಗ್ವಾದವು ಹೊಡೆದಾಟಕ್ಕೆ ಕಾರಣವಾಯಿತು. ಇದರಿಂದಾಗಿ ಅಲ್ಲಿದ್ದ ಸಿಬ್ಬಂದಿ ಆ ಅಧಿಕಾರಿಗೆ ಕಪಾಳಮೋಕ್ಷ ಮಾಡುವ ಮೂಲಕ ಪ್ರತೀಕಾರ ತೀರಿಸಿಕೊಂಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಮೂವರು ಪೆಟ್ರೋಲ್ ಪಂಪ್ ನೌಕರರನ್ನು ಬಂಧಿಸಿದ್ದಾರೆ.
ಪ್ರಸ್ತುತ ಪ್ರತಾಪ್‌ಗಢದ ಎಸ್‌ಡಿಎಂ ಛೋಟು ಲಾಲ್ ಶರ್ಮಾ ತಮ್ಮ ಪತ್ನಿ ದೀಪಿಕಾ ವ್ಯಾಸ್ ಅವರೊಂದಿಗೆ ಪೆಟ್ರೋಲ್ ಪಂಪ್‌ಗೆ ಭೇಟಿ ನೀಡಿದಾಗ ವಾಗ್ವಾದ ಪ್ರಾರಂಭವಾಯಿತು. ಪೆಟ್ರೋಲ್ ಪಂಪ್ ಕಾರ್ಮಿಕರಲ್ಲಿ ಒಬ್ಬರು ತನ್ನತ್ತ ಕಣ್ಣು ಮಿಟುಕಿಸಿ ಅಶ್ಲೀಲ ಕಾಮೆಂಟ್ ಮಾಡಿದ್ದಾರೆ ಎಂದು ದೀಪಿಕಾ ವ್ಯಾಸ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಇದಾದ ನಂತರ ಆ ಪೆಟ್ರೋಲ್ ಪಂಪ್ ಸಿಬ್ಬಂದಿಗೆ ಅಧಿಕಾರಿ ಕಪಾಳಮೋಕ್ಷ ಮಾಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

