ಪಂಜಾಬಿನ ಅಮೃತಸರ ಜಿಲ್ಲೆಯ ಅಟ್ಟಾರಿ-ವಾಘಾ ಗಡಿಯಲ್ಲಿ ಪ್ರತಿದಿನ ಬೀಟಿಂಗ್ ರಿಟ್ರೀಟ್ ಸಮಾರಂಭ ನಡೆಯುತ್ತದೆ. ಇದು ಭಾರತೀಯ ಗಡಿ ಭದ್ರತಾ ಪಡೆ (BSF) ಮತ್ತು ಪಾಕಿಸ್ತಾನ ರೇಂಜರ್ ನಡೆಸುವ ಮಿಲಿಟರಿ ಅಭ್ಯಾಸವಾಗಿದೆ. ಈ ಕಾರ್ಯಕ್ರಮವನ್ನು ನೋಡಲೆಂದು ಭಾರತ ಮತ್ತು ಪಾಕಿಸ್ತಾನದ ಅನೇಕ ಜನರು ಈ ಸ್ಥಳಕ್ಕೆ ಬರುತ್ತಾರೆ. ಆದರೆ ಇತ್ತೀಚಿಗೆ ಪಾಕಿಸ್ತಾನದಲ್ಲಿ ನಡೆದ ಮದುವೆಯಲ್ಲಿ ಪಾಕಿಸ್ತಾನ ಸೇನೆಯ ಬೀಟಿಂಗ್ ರಿಟ್ರೀಟ್ ಪ್ರದರ್ಶನವನ್ನು ಮಾಡಿದ್ದು, ಈ ಕುರಿತ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಇದನ್ನು ನೋಡಿದ ಅನೇಕರು ಇನ್ನು ಮುಂದೆ ನೀವು ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮವನ್ನು ನೋಡಲು ಅಟ್ಟಾರಿ-ವಾಘಾ ಗಡಿ ಭಾಗಕ್ಕೆ ಹೋಗಬೇಕೆಂದಿಲ್ಲ, ನಿಮ್ಮ ಬಳಿ ಹಣವಿದ್ದರೆ ಮದುವೆ ಮತ್ತು ಇನ್ನಿತರ ಕಾರ್ಯಕ್ರಮಗಳಲ್ಲಿ ಪಾಕಿಸ್ತಾನದ ರೇಂಜರ್ಗಳನ್ನು ನೇಮಿಸಿಕೊಂಡು ಬೀಟಿಂಗ್ ರಿಟ್ರೀಟ್ ಪ್ರದರ್ಶನವನ್ನು ಮಾಡಿಸಬಹುದು ಎಂದು ಗೇಲಿ ಮಾಡಿದ್ದಾರೆ.
ಮೇಜರ್ ಗೌರವ್ ಆರ್ಯ (@majorgauravarya) ಅವರು ತಮ್ಮ X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ʼನಿಮ್ಮ ಬಳಿ ಹಣವಿದ್ದರೆ ಮದುವೆ ಕಾರ್ಯಕ್ರಮ ಅಥವಾ ಕುಟುಂಬದ ಇತರ ಸಮಾರಂಭಗಳಲ್ಲಿ ಅಟ್ಟಾರಿ-ವಾಘಾ ಗಡಿಯ ಬೀಟಿಂಗ್ ರಿಟ್ರೀಟ್ ಪ್ರದರ್ಶನವನ್ನು ಮಾಡಲು ಬಯಸಿದರೆ, ನೀವು ಪಾಕಿಸ್ತಾನ ರೇಂಜರ್ಗಳನ್ನು ನೇಮಿಸಿಕೊಳ್ಳಬಹುದುʼ ಎಂಬ ತಮಾಷೆಯ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
If you have money, you can hire Pakistan Rangers to do the “Attari-Wagah” border drill for a marriage function or other family events. In dire straits and in urgent need of cash, Pakistan has monetised everything.
You have to be crazy pro max to have drill at your wedding.… pic.twitter.com/cLGhqfklq8
— Major Gaurav Arya (Retd) (@majorgauravarya) December 6, 2023
ವಿಡಿಯೋದಲ್ಲಿ ಅಟ್ಟಾರಿ-ವಾಘಾ ಗಡಿಯಲ್ಲಿ ನಡೆಯುವ ಬೀಟಿಂಗ್ ರಿಟ್ರೀಟ್ ಸಮಾರಂಭದ ವೇಳೆ ಪಾಕಿಸ್ತಾನ ಸೇನೆಯ ಸೈನಿಕರು ತೊಡುವ ವೇಷಭೂಷಣವನ್ನು ತೊಟ್ಟ ಪುರುಷರ ತಂಡವೊಂದನ್ನು ನೋಡಬಹುದು. ಅದರಲ್ಲಿ ಒಬ್ಬ ವ್ಯಕ್ತಿ ವಾದ್ಯ ಮತ್ತು ಬ್ಯಾಂಡ್ ಸದ್ದಿಗೆ ರೋಷದಿಂದ ಪಾಕಿಸ್ತಾನ ಸೇನೆಯ ಬೀಟಿಂಗ್ ರಿಟ್ರೀಟ್ ಪ್ರದರ್ಶನವನ್ನು ಮಾಡಿದ್ದಾನೆ. ಇದೀಗ ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಇದನ್ನೂ ಓದಿ: ಈ ರೆಸ್ಟೋರೆಂಟ್ನಲ್ಲಿ ಕಪಾಳಮೋಕ್ಷ ಸ್ಪೆಷಲ್ ಮೆನು
ಡಿಸೆಂಬರ್ 6 ರಂದು ಹಂಚಿಕೊಳ್ಳಲಾದ ಈ ವಿಡಿಯೋ 563.4K ವೀಕ್ಷಣೆಗಳನ್ನು ಹಾಗೂ ಹಲವಾರು ಕಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ಗಡಿ ಭಾಗದಲ್ಲಿ ನಡೆಯುವ ಸೇನೆಯ ಸಂಪ್ರದಾಯಿಕ ಪ್ರದರ್ಶನವಾಗಿದೆ. ಆದರೆ ಇವರುಗಳದ್ದು ಇದೆಂತಹ ಹುಚ್ಚಾಟʼ ಎಂದು ಗರಂ ಆಗಿದ್ದಾರೆ. ಇನ್ನೊಬ್ಬ ಬಳಕೆದಾರರು ʼಮಾಡಬೇಕಾದ ಕೆಲಸಗಳನ್ನು ಬಿಟ್ಟು ಉಳಿದೆಲ್ಲಾ ಕೆಲಸವನ್ನು ಮಾಡುವ ಸೇನೆ ಮತ್ತು ಸೈನಿಕರು ಇರುವ ದೇಶವೆಂದರೆ ಅದು ಪಾಕಿಸ್ತಾನʼ ಎಂದು ಕಾಲೆಳೆದಿದ್ದಾರೆ. ಮತ್ತೊಬ್ಬ ಬಳಕೆದಾರರು ʼಪಾಕಿಸ್ತಾನಿ ಸೈನಿಕರು ಹಣಕ್ಕಾಗಿ ಜನಸಾಮಾನ್ಯರಿಗೆ ಸೆಲ್ಯೂಟ್ ಮಾಡುತ್ತಾರೆಯೇ?ʼ ಎಂದು ಪ್ರಶ್ನೆ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: