
Horse: ಲಾಯದೊಳಗೆ ನೇತುಹಾಕಿದ ಕನ್ನಡಿಯೊಳಗೆ ಈ ಬ್ಲ್ಯಾಕ್ ಬ್ಯೂಟಿ (Black Beauty) ಮುಳುಗಿ ಹೋಗಿದ್ದಾರೆ. ಶ್! ಏಕಾಂತದಲ್ಲಿರುವ ಅವರನ್ನು ನೋಡಿ ನೀವು ಹೀಗೆಲ್ಲ ನೋಡಿ ತಮಾಷೆ ಮಾಡುವುದು ನಗುವುದು ಸರಿಯೇ? ತಮ್ಮ ಬಿಂಬವನ್ನು ಕನ್ನಡಿಯಲ್ಲಿ ನೋಡಿಕೊಂಡ ಅವರಿಗೆ ಅಚ್ಚರಿಯೋ, ಗಾಬರಿಯೋ, ಖುಷಿಯೋ ಇನ್ನೂ ಏನೋ ಆದಂತಿದೆ. ಹಿಂದೆ ಸರಿಯುತ್ತಾರೆ ಮುಂದೆ ಹೋಗುತ್ತಾರೆ, ಕನ್ನಡಿಯೊಳಗಿನ ಪ್ರತಿಬಿಂಬಕ್ಕೆ ಮುತ್ತಿಕ್ಕುತ್ತಾರೆ. ಕೊನೆಗೆ ಏನೋ ಎಂತೋ ಲಾಯದಿಂದ ಓಡಿಯೇ ಹೋಗುತ್ತಾರೆ. ಈ ವಿಡಿಯೋ ನೋಡಿದ ನಿಮಗೂ ನಗು ಬರುತ್ತದೆಯೇ?
ಇದನ್ನೂ ಓದಿ : Viral Video: ಪಾಕಿಸ್ತಾನ; ಒಂದು ಟೋಪಿಯಿಂದಾಗಿ ಮದುವೆಯ ಔತಣಕೂಟ ಕುಸ್ತಿ ಅಖಾಡಾ ಆದ ಹೊತ್ತು
ಈ ವಿಡಿಯೋ ಅನ್ನು ಆ. 30ರಂದು X ನಲ್ಲಿ ಪೋಸ್ಟ್ ಮಾಡಲಾಗಿದೆ. 5.8 ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. 76,000ಕ್ಕೂ ಹೆಚ್ಚು ಜನರು ಈ ವಿಡಿಯೋ ಲೈಕ್ ಮಾಡಿದ್ದಾರೆ. ಸುಮಾರು 7,000 ಜನರು ರೀಪೋಸ್ಟ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ.
ಇವ ತುಂಬಾ ಮುದ್ದಾಗಿದ್ದಾನೆ ಆದರೆ ನನ್ನಿಂದ ಇವನನ್ನು ಸಾಕಲಾಗುವುದಿಲ್ಲ ಎಂದಿದ್ದಾರೆ ಒಬ್ಬರು. ಇನ್ನೊಂದು ಕುದುರೆಯನ್ನು ಇವನು ಹುಡುಕುತ್ತಿದ್ದಾನೆ ಎಂದು ಇನ್ನೊಬ್ಬರು. ಕೊನೆಯಲ್ಲಿ ಅದು ಓಡುವ ರೀತಿ ಇದೆಯಲ್ಲ, ಅದ್ಭುತ! ಎಂದು ಮತ್ತೊಬ್ಬರು. ಮೇಕಪ್ ಸಾಮಾನುಗಳೆಲ್ಲ ಎಲ್ಲಿ ಹೋದವು? ಬಹುಶಃ ತರಲು ಅದು ಓಡಿಹೋಯಿತೆ? ಎಂದು ಮಗದೊಬ್ಬರು. ಈ ಕುದುರೆಗಳನ್ನು ನೋಡಿ ಎಂದು ಈ ಕೆಳಗಿನ ವಿಡಿಯೋ ಪೋಸ್ಟ್ ಮಾಡಿದ್ದಾರೆ ಇಒಬ್ಬರು.
ಏನೇ ಹೇಳಿ ಹೀಗೆ ವಿಡಿಯೋ ಮಾಡಿ ಏಕಾಂತವನ್ನು ಭಂಗ ಮಾಡಬಾರದಿತ್ತು, ಅದಲ್ಲದೇ ಇಡೀ ಜಗತ್ತು ವಿಡಿಯೋ ನೋಡುವ ಹಾಗೆ ಮಾಡಿದ್ದು ಸರಿ ಅಲ್ಲ ಎಂದು ಕೆಲವರು ಹೇಳಿದ್ದಾರೆ. ನಿಮ್ಮಷ್ಟು ಯೋಚಿಸುವ ಬುದ್ಧಿ ಪ್ರಾಣಿಗಳಿಗಿಲ್ಲ, ಅಂಥದ್ದೇನೂ ಆಗಿಲ್ಲ ಎಂದಿದ್ದಾರೆ ಉಳಿದವರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:22 pm, Fri, 1 September 23