AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Emotional Story: 11 ಅಂಧ ಮಕ್ಕಳಿಗೆ ಜನ್ಮ ನೀಡಿದ ತಾಯಿ, ಕುರುಡು ಮಕ್ಕಳಿಗೆ ಊರುಗೋಲಾದ ಅಮ್ಮ

ಒಂದಲ್ಲಾ ಎರಡಲ್ಲಾ ತನ್ನ 11 ಮಕ್ಕಳು ಕೂಡ ಅಂಧರಾಗಿರುವುದರಿಂದ ಆಕೆಯನ್ನು ಶಾಪಗ್ರಸ್ತಳಾಗಿದ್ದಾಳೆ ಎಂದು ಅಲ್ಲಿನ ಕಿಸುಮು ಗ್ರಾಮದಿಂದಲೇ ದೂರ ಇಡಲಾಗಿದೆ.

Emotional Story: 11 ಅಂಧ ಮಕ್ಕಳಿಗೆ ಜನ್ಮ ನೀಡಿದ ತಾಯಿ, ಕುರುಡು ಮಕ್ಕಳಿಗೆ ಊರುಗೋಲಾದ ಅಮ್ಮ
ಆಗ್ನೆಸ್ ನೆಸ್ಪೊಂಡಿ ಮತ್ತು ಆಕೆಯ 11 ಅಂಧ ಮಕ್ಕಳುImage Credit source: timeafricamagazine
Follow us
ಅಕ್ಷತಾ ವರ್ಕಾಡಿ
|

Updated on: Jul 20, 2023 | 5:03 PM

ಆಫ್ರಿಕಾ: ಕೀನ್ಯಾದ ಆಗ್ನೆಸ್ ನೆಸ್ಪೊಂಡಿ ಎಂಬ ಮಹಿಳೆ ಒಂದಲ್ಲಾ ಎರಡಲ್ಲ 11 ಅಂಧ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಪತಿಯ ಸಾವಿನ ನಂತರ ಸುಮಾರು 20 ವರ್ಷಗಳಿಂದ ತನ್ನ ಅಂಧ ಮಕ್ಕಳನ್ನು ಬೆಳೆಸಲು ಕಷ್ಟಪಡುತ್ತಿರುವುದು ವರದಿಯಾಗಿದೆ. ಒಂದಲ್ಲಾ ಎರಡಲ್ಲಾ  11 ಮಕ್ಕಳು ಕೂಡ ದೃಷ್ಟಿಹೀನರಾಗಿರುವುದರಿಂದ ಆಕೆಯನ್ನು ಶಾಪಗ್ರಸ್ತಳಾಗಿದ್ದಾಳೆ ಎಂದು ಅಲ್ಲಿನ ಕಿಸುಮು ಗ್ರಾಮದಿಂದಲೇ ಆಕೆ ಹಾಗೂ ಆಕೆಯ ಮಕ್ಕಳನ್ನು ದೂರ ಇಡಲಾಗಿದೆ. 20 ವರ್ಷಗಳ ಹಿಂದೆ ತನ್ನ ಪತಿ ತೀರಿಕೊಂಡ ನಂತರ, ದೃಷ್ಟಿ ವಿಕಲಾಂಗತೆ ಹೊಂದಿರುವ ತನ್ನ 11 ಮಕ್ಕಳನ್ನು ಬೆಳೆಸಲು ನಾನು ತುಂಬಾ ಕಷ್ಟಪಡುತ್ತಿದ್ದೆನೆ ಎಂದು ಆಗ್ನೆಸ್ ನೆಸ್ಪೊಂಡಿ Time Africa Magazine ಸಂದರ್ಶನದಲ್ಲಿ ವಿವರಿಸಿದ್ದಾರೆ.

ಮೊದಲನೆಯ ಗಂಡು ಮಗುವಿಗೆ ಜನ್ಮ ನೀಡಿದಾಗ ಮಗು ಕುರುಡಾಗಿರುವುದು ತಿಳಿದಿರಲ್ಲಿಲ್ಲ, ಕೆಲವು ತಿಂಗಳ ನಂತರ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ವೈದ್ಯರು ಮಗು ಕುರುಡಾಗಿ ಹುಟ್ಟಿರುವುದನ್ನು ದೃಢಪಡಿಸಿದರು. ಹೀಗೆ ಪ್ರತೀ ಭಾರೀ ಮಗು ಜನಿಸುವಾಗಲೂ ವೈದ್ಯರು ಸಾಕಷ್ಟು ಭರವಸೆ ನೀಡಿದ್ದರೂ ಕೂಡ ತನ್ನ 11 ಮಕ್ಕಳು ಕುರುಡಾಗಿ ಹುಟ್ಟಿದ್ದಾರೆ. ಇದು ತನಗೆ ದುಃಖವನ್ನುಂಟುಮಾಡಿದ್ದು, ತನಗೆ ಈ ರೀತಿ ಏಕೆ ಸಂಭವಿಸಿತು ಎಂದು ತಿಳಿಯುತ್ತಿಲ್ಲ ಎಂದು ಆಗ್ನೆಸ್ ನೆಸ್ಪೊಂಡಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ನಡುರಸ್ತೆಯಲ್ಲಿ ಸರಸರನೇ ಸಾಲಾಗಿ ಮರಿಗಳಿಗೆ ಜನ್ಮ ನೀಡಿದ ಹಾವು, ಕುತೂಹಲಗೊಂಡ ಜನ!

ಈಕೆ ಅಂಧ ಮಕ್ಕಳಿಗೆ ಜನ್ಮ ನೀಡಲು ಶಾಪಗ್ರಸ್ತಳಾಗಿದ್ದಾಳೆ ಅಥವಾ ಆಕೆಯ ಮೇಲೆ ವಾಮಾಚಾರ ಮಾಡಿರಬಹುದು ಎಂದು ಅಲ್ಲಿನ ಗ್ರಾಮಸ್ಥರು ಬಲವಾಗಿ ನಂಬುತ್ತಾರೆ. ಪತಿಯ ನಿಧನದ ನಂತರ ಮಕ್ಕಳ ಶಾಲಾ ಶುಲ್ಕವನ್ನು ಪಾವತಿಸಲು ಸಾಧ್ಯವಾಗದ ಕಾರಣ 11 ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದು, ಸ್ಥಳೀಯ ಚರ್ಚ್ ಮಕ್ಕಳಿಗೆ ಹೆಚ್ಚಿನ ಸಹಾಯ ಮಾಡುತ್ತಿದೆ. ನೆಸ್ಪೊಂಡಿ ಅವರ ಕುಟುಂಬದಲ್ಲಿ ಅವರ ಕುಟುಂಬದವರು ತಮ್ಮ ವಯಸ್ಸಿನ ಕಾರಣದಿಂದಾಗಿ ಕಣ್ಣಿನ ತೊಂದರೆಗಳನ್ನು ಹೊಂದಿದ್ದನ್ನು ಹೊರತುಪಡಿಸಿ ಯಾವುದೇ ಕುರುಡುತನದ ಕುರುಹುಗಳನ್ನು ಕಂಡುಹಿಡಿಯಲಾಗಲಿಲ್ಲ. ಅದರೂ ಕೂಡ 11 ಮಕ್ಕಳು ಕುರುಡಾಗಿರುವುದಕ್ಕೆ ಕಾರಣ ಎನೆಂದು ತಿಳಿದಿಲ್ಲ.

ಮತ್ತಷ್ಟು ವೈರಲ್​​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಪಾಕ್ ಪರ ಘೋಷಣೆ ಕೂಗುವವರ ನಿರ್ನಾಮಕ್ಕಾಗಿ ಹೋಮ ಯಜ್ಞ: ಮುತಾಲಿಕ್
ಪಾಕ್ ಪರ ಘೋಷಣೆ ಕೂಗುವವರ ನಿರ್ನಾಮಕ್ಕಾಗಿ ಹೋಮ ಯಜ್ಞ: ಮುತಾಲಿಕ್
ಮಹಿಳೆಯರು ಬಿಜೆಪಿ ಶಾಲು ಹೊದ್ದಿದ್ದರೆ ಭದ್ರತಾ ಲೋಪ ಗೊತ್ತಾಗುತಿತ್ತು: ಸಚಿವ
ಮಹಿಳೆಯರು ಬಿಜೆಪಿ ಶಾಲು ಹೊದ್ದಿದ್ದರೆ ಭದ್ರತಾ ಲೋಪ ಗೊತ್ತಾಗುತಿತ್ತು: ಸಚಿವ
ವ್ಯಾನಿಟಿ ಬ್ಯಾಗ್​ನಲ್ಲಿ ಚೂರಿ ಇರಲಿ: ಕಲ್ಲಡ್ಕ ಪ್ರಭಾಕರ ಭಟ್
ವ್ಯಾನಿಟಿ ಬ್ಯಾಗ್​ನಲ್ಲಿ ಚೂರಿ ಇರಲಿ: ಕಲ್ಲಡ್ಕ ಪ್ರಭಾಕರ ಭಟ್
ಸಿದ್ದರಾಮಯ್ಯ ಏನು ಮಾಡುತ್ತಾರೋ ಎಂಬ ಭಯವಂತೂ ಇದೆ: ನಾಡಗೌಡ
ಸಿದ್ದರಾಮಯ್ಯ ಏನು ಮಾಡುತ್ತಾರೋ ಎಂಬ ಭಯವಂತೂ ಇದೆ: ನಾಡಗೌಡ
ದೆವ್ವದ ಹಾಡಿಗೆ ಭಯಬಿದ್ದ ಸರಿಗಮಪ ಮನೋಜ್; ಇಲ್ಲಿದೆ ಫನ್ನಿ ವಿಡಿಯೋ
ದೆವ್ವದ ಹಾಡಿಗೆ ಭಯಬಿದ್ದ ಸರಿಗಮಪ ಮನೋಜ್; ಇಲ್ಲಿದೆ ಫನ್ನಿ ವಿಡಿಯೋ
ರಾಹುಲ್​ಗೆ ತಿರುಗೇಟು ನೀಡಲು ಪ್ಲ್ಯಾನ್ ರೂಪಿಸಿದ್ದ ವಿರಾಟ್ ಕೊಹ್ಲಿ
ರಾಹುಲ್​ಗೆ ತಿರುಗೇಟು ನೀಡಲು ಪ್ಲ್ಯಾನ್ ರೂಪಿಸಿದ್ದ ವಿರಾಟ್ ಕೊಹ್ಲಿ
14 ವರ್ಷದ ವೈಭವ್​ನ 11 ರಾಕೆಟ್ ಸಿಕ್ಸ್​ಗಳು: ವಿಡಿಯೋ ವೀಕ್ಷಿಸಿ
14 ವರ್ಷದ ವೈಭವ್​ನ 11 ರಾಕೆಟ್ ಸಿಕ್ಸ್​ಗಳು: ವಿಡಿಯೋ ವೀಕ್ಷಿಸಿ
VIDEO: ಅತ್ಯಂತ ಕೆಟ್ಟ ದಾಖಲೆ: ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ವೈಭವ್
VIDEO: ಅತ್ಯಂತ ಕೆಟ್ಟ ದಾಖಲೆ: ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ವೈಭವ್
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ
ಸ್ತ್ರೀಯರು ಗರ್ಭಾವಸ್ಥೆಯಲ್ಲಿ ನೀತಿಕತೆಗಳನ್ನು ಯಾಕೆ ಕೇಳಬೇಕು?
ಸ್ತ್ರೀಯರು ಗರ್ಭಾವಸ್ಥೆಯಲ್ಲಿ ನೀತಿಕತೆಗಳನ್ನು ಯಾಕೆ ಕೇಳಬೇಕು?