ಆಸ್ಕರ್ ಮುಡಿಗೇರಿಸಿಕೊಂಡ ರಘುವನ್ನು ನೋಡಲು ತೆಪ್ಪಕಾಡು ಆನೆ ಶಿಬಿರದಲ್ಲಿ ಜನಸಾಗರ

ತಮಿಳುನಾಡಿನ ಮುದುಮಲೈ ಅರಣ್ಯದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದ್ದು, ರಘು ಆನೆಯನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮುದುಮಲೈ ತೆಪ್ಪಕಾಡು ಆನೆ ಶಿಬಿರಕ್ಕೆ ಬರುತ್ತಿದ್ದಾರೆ.

ಆಸ್ಕರ್ ಮುಡಿಗೇರಿಸಿಕೊಂಡ ರಘುವನ್ನು ನೋಡಲು ತೆಪ್ಪಕಾಡು ಆನೆ ಶಿಬಿರದಲ್ಲಿ ಜನಸಾಗರ
ಎಲಿಫೆಂಟ್ ವಿಸ್ಪರರ್ಸ್

Updated on: Mar 14, 2023 | 12:03 PM

ಎಲಿಫೆಂಟ್ ವಿಸ್ಪರರ್ಸ್(Elephant Whisperers) ಭಾರತದ ಮೊದಲ ಆಸ್ಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಸಾಕ್ಷ್ಯಚಿತ್ರವಾಗಿದೆ. 95ನೇ ಅಕಾಡೆಮಿ ಪ್ರಶಸ್ತಿಯಲ್ಲಿ ‘ಸ್ಟ್ರೇಂಜರ್ ಅಟ್ ದಿ ಗೇಟ್’ ಮತ್ತು ‘ಹೌ ಡು ಯು ಮೆಷರ್ ಎ ಇಯರ್’ ನಂತಹ ಸಾಕ್ಷ್ಯಚಿತ್ರಗಳನ್ನು ಹಿಂದಿಕ್ಕಿ ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದೀಗಾ ಈ ಸಾಕ್ಷ್ಯಚಿತ್ರದಲ್ಲಿ ಸಾಕಷ್ಟು ಜನರ ಮನಗೆದ್ದ ಮರಿ ಆನೆ ರಘು ಭಾರೀ ಸುದ್ದಿಯಲ್ಲಿದೆ. ತಮಿಳುನಾಡಿನ ಮುದುಮಲೈ ಅರಣ್ಯದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದ್ದು, ರಘು ಆನೆಯನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮುದುಮಲೈ ತೆಪ್ಪಕಾಡುಗೆ ಬರುವುದನ್ನು ಕಾಣಬಹುದು.

ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಎರಡು ಅನಾಥ ಮರಿ ಆನೆಗಳನ್ನು ದತ್ತು ತೆಗೆದುಕೊಳ್ಳುವ ಸುತ್ತ ಸುತ್ತುವ  ಭಾವನಾತ್ಮಕ ಕಥೆ ಇದಾಗಿದ್ದು, ಪ್ರಕೃತಿಯೊಂದಿಗಿನ ಬುಡಕಟ್ಟು ಜನರ ಸಾಮರಸ್ಯವನ್ನೂ ತಿಳಿಸುತ್ತದೆ. ‘ದಿ ಎಲಿಫೆಂಟ್​ ವಿಸ್ಪರರ್ಸ್​’ ಕಿರುಚಿತ್ರ ನೆಟ್​ಫ್ಲಿಕ್ಸ್​ನಲ್ಲಿ ತಮಿಳು ಭಾಷೆಯಲ್ಲಿದ್ದು, ಈಗ ಮತ್ತೇ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈ ಕಿರುಚಿತ್ರದಲ್ಲಿ ಆನೆಗಳ ಸಂರಕ್ಷಣೆ ಹಾಗೂ ಪ್ರಾಣಿಗಳ ರಕ್ಷಣೆ ಕುರಿತ ಸಂದೇಶವೂ ಇದೆ.

ಇದನ್ನೂ ಓದಿ: ಭಾರತಕ್ಕೆ ಆಸ್ಕರ್​: ‘ದಿ ಎಲಿಫೆಂಟ್​ ವಿಸ್ಪರರ್ಸ್​’ಗೆ ಅಕಾಡೆಮಿ ಪ್ರಶಸ್ತಿ

ಸುದ್ದಿ ಸಂಸ್ಥೆ ANI ವರದಿಯ ಪ್ರಕಾರ ಎರಡು ದಿನಗಳಿಂದ ದೇಶ ವಿದೇಶಗಳಿಂದ ಈಗಾಗಲೇ ಸಾಕಷ್ಟು ಪ್ರವಾಸಿಗಳು ರಘು ಆನೆಯನ್ನು ನೋಡಲು ಬಹಳ ಉತ್ಸುಕತೆಯಿಂದ ಬರುತ್ತಿದ್ದಾರೆ ಎಂದು ತಿಳಿಸಿದೆ. ಇದೊಂದು ಉತ್ತಮ ಕ್ಷಣ. ಇಲ್ಲಿಗೆ ಬಂದಿರುವುದು ಸಂತಸ ತಂದಿದೆ. ಆಸ್ಕರ್ ಪ್ರಶಸ್ತಿ ಗೆದ್ದಿರುವುದು ನನಗೆ ಸಂತಸ ಮತ್ತು ಉತ್ಸುಕತೆಯನ್ನುಂಟು ಮಾಡಿದೆ” ಎಂದು ಪ್ರವಾಸಿಗರೊಬ್ಬರು ಸುದ್ದಿ ಮಾಧ್ಯಮದೊಂದಿಗೆ ಖುಷಿಯನ್ನು ವ್ಯಕ್ತ ಪಡಿಸಿದ್ದಾರೆ. ಮತ್ತೊಬ್ಬ ವಿದೇಶಿ ಪ್ರವಾಸಿಗ ನಾನು ಲಂಡನ್‌ನಿಂದ ಬಂದಿದ್ದೇನೆ, ಇಲ್ಲಿಗೆ ಭೇಟಿ ನೀಡಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದ ಆನೆಮರಿಗಳನ್ನು ನೋಡಿದ ನಾವೇ ಅದೃಷ್ಟಶಾಲಿಗಳು ಎಂದು ಹೇಳಿಕೊಂಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 12:00 pm, Tue, 14 March 23

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us