Video: ಟೀಚರ್‌ಗೆ ಗೊತ್ತಾಗದಂತೆ ಬಿಸ್ಕೆಟ್‌ ತಿನ್ನುತ್ತಾ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಪುಟಾಣಿ

ಶಾಲಾ ದಿನಗಳಲ್ಲಿ ಬಹುತೇಕರು ಶಿಕ್ಷಕರಿಗೆ ಚಲ್ಲೇ ಹಣ್ಣು ತಿನ್ನಿಸಲು ಹೋಗಿ ಸಿಕ್ಕಿ ಬಿದ್ದಿರುತ್ತಾರೆ. ಈ ವಿಡಿಯೋ ನೋಡಿದ ಮೇಲು ನಿಮ್ಗೂ ನಿಮ್ಮ ಬಾಲ್ಯ ನೆನಪಾಗದೇ ಇರದು. ಇಲ್ಲೊಬ್ಬ ಪುಟ್ಟ ಬಾಲಕನು ಕ್ಲಾಸ್ ರೂಮ್‌ನಲ್ಲಿ ಕುಳಿತುಕೊಂಡು ಶಿಕ್ಷಕರಿಗೆ ಗೊತ್ತಾಗದಂತೆ ತಿಂಡಿ ತಿನ್ನುತ್ತಿದ್ದಾನೆ. ಆದರೆ ಈ ವಿಡಿಯೋದ ಕೊನೆಗೆ ಆಗಿದ್ದೇನು ಎಂದು ನೋಡಿದ್ರೆ ನಿಮಗೂ ಶಾಕ್ ಆಗುತ್ತದೆ. ಈ ಪುಟ್ಟ ಬಾಲಕನ ಈ ವಿಡಿಯೋ ನೋಡಿ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.

Video: ಟೀಚರ್‌ಗೆ ಗೊತ್ತಾಗದಂತೆ ಬಿಸ್ಕೆಟ್‌ ತಿನ್ನುತ್ತಾ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಪುಟಾಣಿ
ವೈರಲ್ ವಿಡಿಯೋ
Image Credit source: Instagram

Updated on: Sep 08, 2025 | 2:11 PM

ಶಾಲಾ ದಿನಗಳಲ್ಲಿ(School Days) ಮಾಡಿದ ಆಟ ತುಂಟಾಟಗಳಿಗೆ ಕೊರತೆ ಇರಲ್ಲ. ಪಾಠ ಮಾಡುತ್ತಿರುವಾಗಲೇ ಮಕ್ಕಳು ನಾನಾ ರೀತಿಯ ಚಟುವಟಿಕೆಯಲ್ಲಿ ತೊಡಗಿಕೊಂಡು ಶಿಕ್ಷಕರನ್ನು ಯಾಮಾರಿಸುತ್ತಾರೆ. ನೀವು ಕೂಡ ನಿಮ್ಮ ಶಾಲಾ ದಿನಗಳಲ್ಲಿ ಪಾಠ ಮಾಡುತ್ತಿರುವಾಗಲೇ ಟೀಚರ್ ಗೆ ತಿಳಿಯದಂತೆ, ಚಾಕಲೇಟ್ ತಿನ್ನೋದು, ಟಿಫನ್ ಬಾಕ್ಸ್ ತೆರೆದು ತಿಂಡಿ ತಿಂದು ಸಿಕ್ಕಿ ಬಿದ್ದಿರಬಹುದು. ಈ ಪುಟಾಣಿದ್ದು (Little Boy) ಅದೇ ಕಥೆ ಆಗಿದೆ. ಪುಟ್ಟ ಬಾಲಕನೋರ್ವ ಶಿಕ್ಷಕರು ತರಗತಿಯಲ್ಲಿರುವಾಗಲೇ ಮೆಲ್ಲನೆ ತನ್ನ ಬ್ಯಾಗ್ ಒಳಗೆ ಮುಖವಿಟ್ಟು ಬಿಸ್ಕೆಟ್‌ನ್ನು ತಿನ್ನಲು ಶುರು ಮಾಡಿದ್ದಾನೆ. ಆದರೆ ಕೊನೆಗೆ ಸಿಕ್ಕಿ ಬಿದ್ದ ರೀತಿ ನೋಡಿದ್ರೆ ನೀವು ಬಿದ್ದು ಬಿದ್ದು ನಗ್ತೀರಾ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಬಿಸ್ಕೆಟ್ ತಿಂದು ಟೀಚರ್ ಕೈಯಲ್ಲಿ ಸಿಕ್ಕ ಬಿದ್ದ ಪುಟ್ಟ ಬಾಲಕ

ಇದನ್ನೂ ಓದಿ
ಮುದ್ದಿನ ಮಗನಿಗೆ ಕಷ್ಟ ಕೊಡದೇ ತಾನೇ ಹೋಮ್ ವರ್ಕ್ ಮಾಡಿದ ಅಮ್ಮ
ಅಪ್ಪನ ವರ್ಕ್ ಫ್ರಮ್ ಹೋಮ್ ಸ್ಥಿತಿಗತಿಯನ್ನು ಅನುಕರಣೆ ಮಾಡಿದ ಪುಟಾಣಿ
ಹಾವನ್ನು ಬರಿಗೈಲಿ ಹಿಡಿದ ಧೈರ್ಯವಂತ ಬಾಲಕ
ಚೋಟ ಮಾಸ್ಕ್ ಮ್ಯಾನ್, ಪತ್ತೆಯಾಗದ ಹೊಸ ತಲೆಬುರುಡೆ

comedyculture.in ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಹಸಿದಿದ್ದ ಕಾರಣ ಪುಟ್ಟ ಬಾಲಕನು ಡೆಸ್ಕ್ ಮೇಲೆ ಬ್ಯಾಗ್ ಗೆ ಮುಖವನ್ನಿಟ್ಟು ಬಿಸ್ಕೆಟ್ ಕದ್ದು ತಿನ್ನುತ್ತಿರುವುದನ್ನು ಕಾಣಬಹುದು. ಆದರೆ ತನ್ನ ಕೆಲಸವನ್ನು ಶಿಕ್ಷಕರು ತನ್ನ ಬೆನ್ನ ಹಿಂದೆ ನಿಂತು ಗಮನಿಸುತ್ತಿದ್ದಾರೆ, ಮೊಬೈಲ್ ಕ್ಯಾಮೆರಾದಲ್ಲಿ ಇದನ್ನು ರೆಕಾರ್ಡ್ ಮಾಡುತ್ತಿದ್ದಾರೆ ಎನ್ನುವ ಪರಿವೇ ಇಲ್ಲ.

ಆದರೆ ಈ ವಿಡಿಯೋದ ಕೊನೆಗೆಗೆ ಈ ಪುಟ್ಟ ಬಾಲಕನು ತನ್ನ ಬೆನ್ನ ಹಿಂದೆಯೇ ಶಿಕ್ಷಕರು ನಿಂತಿರುವುದನ್ನು ಗಮನಿಸಿದ್ದಾನೆ. ಈ ವಿಡಿಯೋಗೆ ತರಗತಿಯ ದೃಶ್ಯವಿದು, ಕೊನೆಯ ಬೆಂಚಿನಲ್ಲಿ ಕುಳಿತು ರಹಸ್ಯವಾಗಿ ಬಿಸ್ಕೆಟ್ ತಿನ್ನುತ್ತಿದ್ದ ವಿದ್ಯಾರ್ಥಿಯನ್ನು ಶಿಕ್ಷಕರು ರೆಡ್ ಹ್ಯಾಂಡ್ ಆಗಿ ಹಿಡಿದರು. ಆ ವಿದ್ಯಾರ್ಥಿ ಎಲ್ಲರಿಗೂ ತಮ್ಮ ಶಾಲಾ ದಿನಗಳ ಮುಗ್ಧ ಕಿಡಿಗೇಡಿತನವನ್ನು ನೆನಪಿಸಿದ್ದಾನೆ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ: Video: ರಾಯಲ್ ಟ್ರೀಟ್ಮೆಂಟ್ ಅಂದ್ರೆ ಇದೆ ಇರ್ಬೇಕು; ಮುದ್ದಿನ ಮಗನಿಗೆ ಕಷ್ಟ ಕೊಡದೇ ತಾನೇ ಹೋಮ್ ವರ್ಕ್ ಮಾಡಿದ ಅಮ್ಮ

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಳಕೆದಾರರು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ನಾಲ್ಕು ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದು, ಒಬ್ಬ ಬಳಕೆದಾರರೊಬ್ಬರು ನಾನು ಹೀಗೆಯೇ ಮಾಡುತ್ತಿದ್ದೆ. ಈ ವಿಡಿಯೋ ನನ್ನ ಬಾಲ್ಯವನ್ನು ನೆನಪಿಸುವಂತಿದೆ ಎಂದಿದ್ದಾರೆ. ಇನ್ನೊಬ್ಬರು, ಇದು ನಿಜಕ್ಕೂ ಮಜಾವಾಗಿದೆ. ಕೊನೆಗೆ ಈ ಹುಡುಗನ ರಿಯಾಕ್ಷನ್ ಹೇಗಿತ್ತು ನೋಡಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇದು ಮರೆಯಲಾಗದ ನೆನಪುಗಳು ಎಂದಿದ್ದಾರೆ. ಇನ್ನು ಕೆಲವರು ಹಾರ್ಟ್ ಸಿಂಬಲ್ ಕಳುಹಿಸುವ ಮೂಲಕ ಮೆಚ್ಚಿಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:09 pm, Mon, 8 September 25