
ಈಗಿನ ಕಾಲದಲ್ಲಿ ಹೆತ್ತವರು ಮಕ್ಕಳನ್ನು ಇಂಗ್ಲೀಷ್ ಮೀಡಿಯಂಗೆ (English medium) ಸೇರಿಸುವ ಕಾರಣ ಮಕ್ಕಳಿಗೆ ಕನ್ನಡ ಭಾಷೆಯ ನಂಟು ಇರುವುದಿಲ್ಲ. ಎಬಿಸಿಡಿಯಿಂದಲೇ ತಮ್ಮ ಶಿಕ್ಷಣದ ಆರಂಭದ ದಿನಗಳು ಶುರುವಾಗುವ ಕಾರಣ ಕನ್ನಡ (Kannada) ಮಾತನಾಡಲು, ಬರೆಯಲು ಕಷ್ಟ ಪಡುತ್ತಾರೆ. ಆದರೆ ಸರ್ಕಾರಿ ಶಾಲೆಯ ಮಕ್ಕಳು ಆಗಲ್ಲ, ಶುದ್ಧ ಹಾಗೂ ಸ್ವಷ್ಟವಾಗಿ ಕನ್ನಡ ಮಾತನಾಡುತ್ತಾರೆ. ಇದೀಗ ಪುಟ್ಟ ಹುಡುಗಿಯೂ ಕನ್ನಡ ಪದಗಳನ್ನು ಜೋಡಿಸಿ ಪಟ ಪಟನೇ ಓದುತ್ತಿರುವ ವಿಡಿಯೋ ವೈರಲ್ ಆಗಿದೆ.
ಮಾರುತಿ (maruti.mkh) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಪುಟ್ಟ ಬಾಲಕಿಯೂ ಅಕ್ಷರಗಳ ನಡುವೆ ಬಿಟ್ಟಿರುವ ಒಂದೇ ಒಂದು ಅಕ್ಷರವನ್ನು ಜೋಡಿಸಿ ಪದವನ್ನು ಜೋರಾಗಿ ಓದುತ್ತಿರುವುದನ್ನು ಕಾಣಬಹುದು. ಸಹಪಾಠಿಗಳು ಕೂಡ ಈ ಪುಟ್ಟ ಬಾಲಕನಿಗೆ ಸಾಥ್ ನೀಡುತ್ತಿರುವುದನ್ನು ನೀವಿಲ್ಲಿ ನೋಡಬಹುದು.
ಇದನ್ನೂ ಓದಿ:Video: ಇದು ವನಗಿರಿಯ ರಂಗು; ಪ್ರಕೃತಿಯ ನಡುವೆ ಹುಲಿದನ ಆಟವಾಡಿ ಸಂಭ್ರಮಿಸಿದ ಪುಟಾಣಿಗಳು
ಈ ವಿಡಿಯೋ ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಳಕೆದಾರರು, ಸರ್ಕಾರಿ ಶಾಲೆಯ ಮಕ್ಕಳನ್ನು ಮಾತ್ರ ಈ ರೀತಿ ನೋಡಲು ಸಾಧ್ಯ. ಪ್ರೌಡ್ ಆಫ್ ಸರ್ಕಾರಿ ಸ್ಕೂಲ್ ಕನ್ನಡ ಮಾಧ್ಯಮವಿದ್ಯಾರ್ಥಿ ಎಂದು ಹೇಳಿದ್ದಾರೆ. ಮತ್ತೊಬ್ಬರು ಈ ವಿಡಿಯೋ ನೋಡಿ ನಮ್ಮ ಶಾಲಾ ದಿನಗಳು ನೆನಪಿಗೆ ಬಂತು ಎಂದು ಕಾಮೆಂಟ್ ಮಾಡಿದ್ದಾರೆ. ಈ ವಯಸ್ಸಿನಲ್ಲಿ ಇತರ ಓದಲು ಮೀಟರ್ ಬೇಕು ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:36 pm, Sun, 28 September 25