
ಬದುಕು (life) ಅಂದುಕೊಂಡಷ್ಟು ಸುಲಭವಲ್ಲ. ಕೆಲವರು ಎಲ್ಲಾ ಇದ್ದು ನೆಮ್ಮದಿಗಾಗಿ ಹೋರಾಟ ನಡೆಸಿದರೆ, ಇನ್ನು ಕೆಲವರು ಮೂರು ಹೊತ್ತಿನ ತುತ್ತಿಗಾಗಿ ಹೋರಾಟಕ್ಕೆ ಇಳಿಯುತ್ತಾರೆ. ಬಡತನದಿಂದಾಗಿ ಸಣ್ಣ ವಯಸ್ಸಿನಲ್ಲಿಯೇ ಕುಟುಂಬಕ್ಕೆ ಹೆಗಲರಾಗುತ್ತಾರೆ. ಈ ಪುಟ್ಟ ಹುಡುಗಿಯದು (little girl) ಅದೇ ರೀತಿಯ ಬದುಕು. ಪುಟ್ಟ ಹುಡುಗಿಯೂ ಓದುವ ವಯಸ್ಸಿನಲ್ಲಿ ಈ ಹಗ್ಗದಲ್ಲೇ ನಡೆದಾಡುತ್ತಾ ಜವಾಬ್ದಾರಿ ನಡುವೆ ಹೋರಾಟ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ನೆಟ್ಟಿಗರ ಗಮನ ಸೆಳೆದಿದೆ.
ಅಡಿಗ ಕ್ಲಿಕ್ (adiga_clickz) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಪುಟ್ಟ ಹುಡುಗಿಯ ಹೆಗಲ ಮೇಲೆ ಇರುವ ಮನೆಯ ಜವಾಬ್ದಾರಿಯನ್ನು ನೋಡಬಹುದು. ಕೈಯಲ್ಲಿ ಕೋಲು ಹಿಡಿದುಕೊಂಡು ಹಗ್ಗದ ಮೇಲೆ ನಡೆದಾಡುತ್ತಾ ಈ ಪುಟಾಣಿಯೂ ತನ್ನ ಕುಟುಂಬಕ್ಕೆ ಹೆಗಲಾಗಿದ್ದಾಳೆ. ಇತ್ತ ತಾಯಿ ಮಗಳು ಬೀಳದಂತೆ ನೋಡುತ್ತಾ ಕುಟುಂಬದ ಜವಾಬ್ದಾರಿ ಹೊತ್ತಿರುವ ಪುಟಾಣಿಯ ಕಲೆಗೆ ಸಾಥ್ ನೀಡುವ ದೃಶ್ಯ ಇದಾಗಿದೆ.
ಇದನ್ನೂ ಓದಿ:ಈವಾಗ್ಲೇ ಹಿಂಗೇ, ಮುಂದೆ ಹೆಂಗೋ; ನಡು ರಸ್ತೆಯಲ್ಲೇ ಜಗಳಕ್ಕಿಳಿದ ಪುಟಾಣಿಗಳು
ಈ ವಿಡಿಯೋ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಬದುಕಿನ ಹೋರಾಟ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಚಿಕ್ಕ ವಯಸ್ಸಿನಲ್ಲಿ ಜವಾಬ್ದಾರಿ ಎಂದರೆ ಇನ್ನೊಬ್ಬರು, ನಿಮ್ಮ ವೀವ್ಸ್ ಗಳಿಗೆ ಅವರ ಬದುಕೇ ಬಂಡವಾಳ, ಆ ಬಂಡವಾಳಕ್ಕೆ ಸಿಗಲಿ ಸರಿಯಾದ ಪ್ರತಿಫಲ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ