ಇಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಸಂಪಾದಿಸುತ್ತಾರೆ: ಎಲ್ಲಿ ಗೊತ್ತಾ?
ವಿಶ್ವದಲ್ಲಿ ಮಹಿಳೆಯರು ಪುರುಷರಿಗಿಂತ ಕಡಿಮೆ ಗಳಿಸುವುದು ಸಾಮಾನ್ಯ. ಆದರೆ ಲಕ್ಸೆಂಬರ್ಗ್ ಇದಕ್ಕೆ ವಿರುದ್ಧವಾಗಿದೆ. ಇಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಸಂಬಳ ಪಡೆಯುತ್ತಾರೆ. ಬಲವಾದ ಲಿಂಗ ಸ್ನೇಹಿ ನೀತಿಗಳು ಮತ್ತು ಸಾರ್ವಜನಿಕ ವಲಯದಲ್ಲಿ ಮಹಿಳೆಯರ ಹೆಚ್ಚಿನ ಪಾಲ್ಗೊಳ್ಳುವಿಕೆ ಇದಕ್ಕೆ ಕಾರಣ. ಲಕ್ಸೆಂಬರ್ಗ್ ಸಮಾನ ವೇತನ ಮತ್ತು ಮಹಿಳಾ ಸಬಲೀಕರಣಕ್ಕೆ ಮಾದರಿಯಾಗಿದೆ.

ಕೆಲಸ ವಿಚಾರದಲ್ಲಿ ಗಂಡು -ಹೆಣ್ಣು ಇಬ್ಬರು ಸಮಾನರು, (equal pay for women) ಇಂದಿನ ಕಾಲದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಕಾರ್ಯನಿರ್ವಹಿಸುತ್ತಾರೆ. ಕೆಲಸದಲ್ಲೂ ಮುಂದೆ, ಕಂಪನಿ ನಡೆಸುವುದರಲ್ಲೂ ಮುಂದು. ಸಂಸಾರ ನಿಭಾಯಿಸುವುದರಲ್ಲೂ ಮುಂದು, ಆದರೆ ಇಂದಿಗೂ ಮಹಿಳೆಯರಿಗೆ ನೀಡುವ ಸಂಬಳ ಮಾತ್ರ ಪರುಷರಿಗಿಂತ ಕಡಿಮೆಯೇ. ಇದೊಂದು ಗಂಭೀರ ವಿಚಾರವೂ ಹೌದು. ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್ಒ) ಪ್ರಕಾರ, ಪ್ರಪಂಚದಾದ್ಯಂತ ಮಹಿಳೆಯರು ಪುರುಷರಿಗಿಂತ ಸರಾಸರಿ ಶೇಕಡಾ 20 ರಷ್ಟು ಕಡಿಮೆ ಗಳಿಸುತ್ತಾರೆ ಎಂದು ಹೇಳಿದೆ. ಆದರೆ ಈ ದೇಶ ಮಾತ್ರ ಇತರ ದೇಶಕ್ಕಿಂತ ಭಿನ್ನವಾಗಿದೆ. ಇಲ್ಲಿನ ಮಹಿಳೆಯರು ಈ ಸಮಸ್ಯೆಯನ್ನು ಎದುರಿಸುತ್ತಿಲ್ಲ. ಅಮೆರಿಕ, ಯುಕೆ, ಕೆನಡಾ, ಆಸ್ಟ್ರೇಲಿಯಾ ಮತ್ತು ಹಲವಾರು ಯುರೋಪಿಯನ್ ರಾಷ್ಟ್ರಗಳು ಸೇರಿದಂತೆ ವಿಶ್ವದ ಅನೇಕ ಭಾಗಗಳಲ್ಲಿ ಮಹಿಳೆಯರು ಇನ್ನೂ ಪುರುಷರಿಗಿಂತ ಕಡಿಮೆ ಸಂಪಾದಿಸುತ್ತಾರೆ.
ಆದರೆ ಯುರೋಪಿಯನ್ ದೇಶವಾದ ಲಕ್ಸೆಂಬರ್ಗ್‌ನ ಮಾತ್ರ ಇದರಿಂದ ಭಿನ್ನವಾಗಿದೆ. ಯೂರೋಸ್ಟ್ಯಾಟ್ ಎಂಬ ಸಂಸ್ಥೆ ಇತ್ತೀಚೆಗೆ ನಡೆಸಿದ ಲಿಂಗ ವೇತನ ಅಂತರದ ಕುರಿತು ವರದಿಯನ್ನು ಬಿಡುಗಡೆ ಮಾಡಿತು. ಈ ಅಧ್ಯಯನವು ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚಿನ ಸಂಬಳ ನೀಡುವ ಏಕೈಕ ದೇಶ ಲಕ್ಸೆಂಬರ್ಗ್‌ಎಂದು ಹೇಳಿದೆ. ಸಣ್ಣ ಯುರೋಪಿಯನ್ ರಾಷ್ಟ್ರವಾದ ಲಕ್ಸೆಂಬರ್ಗ್‌ನಲ್ಲಿ ಮಾತ್ರ ಮಹಿಳೆಯರು ಪುರುಷರಿಗಿಂತ ಹೆಚ್ಚು ಗಳಿಸುತ್ತಾರೆ.
ಇದನ್ನೂ ಓದಿ: ಸಾರ್ವಜನಿಕ ಸ್ಥಳದಲ್ಲಿ ಪತ್ನಿಯ ಜತೆಗೆ ಜಗಳ ಮಾಡಿಕೊಂಡ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್
ಇಲ್ಲಿ ಲಿಂಗ ವೇತನ ಅಂತರವು 0.7%, ಅಂದರೆ ಮಹಿಳೆಯರು ಪುರುಷರಿಗಿಂತ ಸ್ವಲ್ಪ ಹೆಚ್ಚಿನ ಆದಾಯವನ್ನು ಗಳಿಸುತ್ತಾರೆ. ಇದಕ್ಕೆ ಪ್ರಮುಖ ಕಾರಣವೆಂದರೆ, ದೇಶದ ಬಲವಾದ ಲಿಂಗ ಸ್ನೇಹಿ ನೀತಿಗಳು ಮತ್ತು ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುವ ಹೆಚ್ಚಿನ ಸಂಖ್ಯೆಯ ಮಹಿಳೆಯರು. ಇನ್ನು ಲಕ್ಸೆಂಬರ್ಗ್ ಅನ್ನು ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ದೇಶದಲ್ಲಿ ಮಹಿಳೆಯರಿಗೂ ಕೂಡ ಪುರುಷರಷ್ಟೇ ಗೌರವವನ್ನು ನೀಡಲಾಗುತ್ತದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




