ತಮಿಳುನಾಡು: ವಿಶ್ವದ ಪ್ರಮುಖ ಕಾರು ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ ಬಿ ಎಮ್ ಡಬ್ಲ್ಯುದ ಐಷಾರಾಮಿ ಕಾರೊಂದು ನಡು ರಸ್ತೆಯಲ್ಲಿ ಸುಟ್ಟು ಕರಕಲಾಗಿದೆ. ಕಾರಿಗೆ ಬೆಂಕಿ ಹೊತ್ತಿಕೊಳ್ಳುತ್ತಿರುವ ದೃಶ್ಯಾವಳಿಗಳು ವಿಡಿಯೋದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಇದೀಗಾ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ತಮಿಳುನಾಡಿನ ಚೆನ್ನೈನಲ್ಲಿ ಜನನಿಬಿಡ ರಸ್ತೆಯ ಮಧ್ಯದಲ್ಲಿ ಮಂಗಳವಾರ ಬೆಳಗ್ಗೆ ಐಷಾರಾಮಿ ಬಿಎಂಡಬ್ಲ್ಯು ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಕಾರಿನಲ್ಲಿ ಹೊಗೆ ಮತ್ತು ಬೆಂಕಿ ಹೊತ್ತಿಕೊಂಡ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಮಾಧ್ಯಮ ವರದಿಗಳ ಪ್ರಕಾರ, ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಚಾಲಕ ಕಾರಿನಿಂದ ಜಿಗಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆಲ ಹೊತ್ತಿನಲ್ಲೇ ಅಗ್ನಿಶಾಮಕ ದಳದ ತಂಡವು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು.
This is scary. #BMW car caught fire at Chrompet, Chennai. #ChennaiRains pic.twitter.com/Ob1MgKH5ZA
— The Dreamer (@Asif_admire) July 25, 2023
ಇದನ್ನೂ ಓದಿ: Viral Video: ಗುಜರಾತ್; ರಸ್ತೆಯಲ್ಲಿ ಗರ್ಭಾನೃತ್ಯ ಮಾಡಿದ ರೀಲಿಗರನ್ನು ಜೈಲಿಗೆ ಅಟ್ಟಿದ ಪೊಲೀಸರು
ಏಷ್ಯಾನೆಟ್ ನ್ಯೂಸ್ ಪ್ರಕಾರ ತಮಿಳುನಾಡು ರಾಜಧಾನಿ ಕ್ರೋಮ್‌ಪೇಟೆಯಿಂದ ಈ ಘಟನೆ ವರದಿಯಾಗಿದೆ. ಹೊಗೆಯನ್ನು ಗಮನಿಸಿದ ಚಾಲಕ ಕಾರು ನಿಲ್ಲಿಸಿ ಕೂಡಲೇ ವಾಹನದಿಂದ ಜಿಗಿದಿದ್ದಾನೆ. ಆತನನ್ನು 22 ವರ್ಷದ ಪಾರ್ಥಸಾರಥಿ ಎಂದು ಗುರುತಿಸಲಾಗಿದ್ದು, ತಿರುವಲ್ಲಿಕೇಣಿಯಿಂದ ತಿಂಡಿವನಂಗೆ ಪ್ರಯಾಣಿಸುತ್ತಿದ್ದ ಎಂದು ತಿಳಿದು ಬಂದಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 4:09 pm, Tue, 25 July 23