Viral Video: 10 ಬಿಯರ್​ ಮಗ್​​ಗಳನ್ನು ತಲೆಯ ಮೇಲಿಟ್ಟುಕೊಂಡು ಮೆಟ್ಟಿಲೇರಿದ ಈ ವ್ಯಕ್ತಿ

|

Updated on: Jul 25, 2023 | 3:57 PM

Balancing : ಈ ವಿದ್ಯೆಯನ್ನು ಎಲ್ಲಿಂದ ಕಲಿತಿರಿ, ಇದರ ಹಿಂದಿರುವ ತಂತ್ರ ಏನು, ನಮಗೂ ಸ್ವಲ್ಪ ಹೇಳಿಕೊಡಬಾರದೆ? ಎಂದು ನೆಟ್ಟಿಗರು ಈ ವಿಡಿಯೋದಡಿ ಪ್ರತಿಕ್ರಿಯಿಸುತ್ತಿದ್ದಾರೆ. ನಿಮಗೇನಾದರೂ ಗೊತ್ತಾದರೆ ಖಂಡಿತ ಹೇಳಿ ಮತ್ತೆ!

Viral Video: 10 ಬಿಯರ್​ ಮಗ್​​ಗಳನ್ನು ತಲೆಯ ಮೇಲಿಟ್ಟುಕೊಂಡು ಮೆಟ್ಟಿಲೇರಿದ ಈ ವ್ಯಕ್ತಿ
ಹತ್ತು ಬಿಯರ್​ ಮಗ್​​ಗಳನ್ನು ತಲೆಮೇಲಿಟ್ಟುಕೊಂಡು ಮೆಟ್ಟಿಲೇರುತ್ತಿರುವ ವ್ಯಕ್ತಿ
Follow us on

Mug : ಸಾಮಾಜಿಕ ಜಾಲತಾಣಗಳು ಅನೇಕ ಕುಶಲಿಗಳಿಗೆ, ಪ್ರತಿಭಾವಂತರಿಗೆ ಸೂಕ್ತ ವೇದಿಕೆಯನ್ನು ಒದಗಿಸಿಕೊಟ್ಟಿವೆ. ಇಷ್ಟೇ ಅಲ್ಲ, ಅನ್ನಕ್ಕೆ ಹಾದಿಯನ್ನೂ ಮಾಡಿಕೊಟ್ಟಿವೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಇಲ್ಲೊಬ್ಬ ತನ್ನ ತಲೆಯ ಮೇಲೆ ಹತ್ತು ಬಿಯರ್​ ಮಗ್​​​ಗಳನ್ನು (Beer Mug)  ತಲೆಕೆಳಗಾದ ಪಿರಮಿಡ್​ ಆಕಾರದಲ್ಲಿ ಜೋಡಿಸಿಟ್ಟುಕೊಂಡು ಮೆಟ್ಟಿಲುಗಳನ್ನು ಏರಿದ್ದಾನೆ. ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಲಾದ ಈ ವಿಡಿಯೋ ಇದೀಗ ನೆಟ್ಟಿಗರನ್ನು ಅಚ್ಚರಿಗೆ ಕೆಡವಿದೆ. ವಾಹ್​ ಎಂಥಾ ಬ್ಯಾಲೆನ್ಸಿಂಗ್​! ಎಂದು ಜನರು ಈತನನ್ನು ಪ್ರಶಂಸಿಸುತ್ತಿದ್ದಾರೆ.

ಈ ವಿಡಿಯೋ ಅನ್ನು ಟಿಕ್​ಟಾಕ್​ನಲ್ಲಿ ಮೊದಲಿಗೆ ಪೋಸ್ಟ್ ಮಾಡಲಾಗಿತ್ತು, ನಂತರ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಲಾಯ್ತು. ಇದು ನಿಜವಾದ ಪ್ರತಿಭೆ ಎಂದು ಅನೇಕರು ಈ ವಿಡಿಯೋದಡಿ ಪ್ರತಿಕ್ರಿಯಿಸುತ್ತಿದ್ದಾರೆ. ಇದು ಹೇಗೆ ಸಾಧ್ಯವಾಗಿದೆ, ಇದರ ಹಿಂದೆ ಏನಾದರೂ ತಂತ್ರ ಇದೆಯೇ? ಎಂದು ಒಬ್ಬರು ಕೇಳಿದ್ದಾರೆ. ನನಗಂತೂ ಹೀಗೆ ಬ್ಲಾಲೆನ್ಸ್ ಮಾಡಲು ಈ ಜನ್ಮದಲ್ಲಿ ಸಾಧ್ಯವಿಲ್ಲ ಎಂದು ಇನ್ನೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : Viral Video: ಗುಜರಾತ್; ರಸ್ತೆಯಲ್ಲಿ ಗರ್ಭಾನೃತ್ಯ ಮಾಡಿದ ರೀಲಿಗರನ್ನು ಜೈಲಿಗೆ ಅಟ್ಟಿದ ಪೊಲೀಸರು

ಇಂಥ ನೈಜ ಪ್ರತಿಭೆಗೆ ನಾನು ಸ್ಥಳದಲ್ಲಿ ಸಾಕ್ಷಿಯಾಗಿದ್ದೆ ಎನ್ನುವುದೇ ನನಗೆ ಹೆಮ್ಮೆ ಎಂದಿದ್ದಾರೆ ಮತ್ತೊಬ್ಬರು. ಹೀಗೆ ಬ್ಯಾಲೆನ್ಸ್ ಮಾಡುವುದು ಹೋಗಲಿ, ಈ ಮಗ್​​ಗಳಲ್ಲಿ ಇರುವ ಬಿಯರನ್ನೆಲ್ಲ ಕುಡಿಯುವ ತಾಕತ್ತೂ ನನಗಿಲ್ಲ ಎಂದು ಮಗದೊಬ್ಬರು ಹೇಳಿದ್ದಾರೆ. ಜೂ. 2ರಂದು ಪೋಸ್ಟ್ ಮಾಡಲಾದ ಈ ವಿಡಿಯೋ ಅನ್ನು ಈತನಕ 10 ಮಿಲಿಯನ್​ಗಿಂತಲೂ ಹೆಚ್ಚು ಜನರು ನೋಡಿದ್ದಾರೆ. 3 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ಲೈಕ್ ಮಾಡಿದ್ದಾರೆ ಮತ್ತು ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ.

ಕೌಶಲ ಎನ್ನುವುದು ಚಿತ್ತೈಸುವಿಕೆ ಮತ್ತು ಅಭ್ಯಾಸ ಬಲದಿಂದ ರೂಢಿಗೊಳ್ಳುವಂಥದ್ದು. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ