Video: ನನಗೆ ನೀನು, ನಿನಗೆ ನಾನು; ಶ್ವಾನವನ್ನು ಹೆಗಲ ಮೇಲೆ ಹೊತ್ತುಕೊಂಡು ಊರು ಸುತ್ತಿದ ವ್ಯಕ್ತಿ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳು ಹೃದಯಕ್ಕೆ ಹತ್ತಿರವಾಗುತ್ತದೆ. ಈ ವ್ಯಕ್ತಿಗೆ ಶ್ವಾನವೇ ತನ್ನ ಪ್ರಪಂಚವಾಗಿದೆ. ಮನೆಯ ಮುದ್ದಿನ ಶ್ವಾನವನ್ನು ಹೆಗಲ ಮೇಲೆ ಹೊತ್ತುಕೊಂಡು ಊರು ಸುತ್ತುತ್ತಿರುವ ಹೃದಯ ಸ್ಪರ್ಶಿ ದೃಶ್ಯವಿದಾಗಿದೆ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ನಿಸ್ವಾರ್ಥ ಪ್ರೀತಿಗೆ ನೆಟ್ಟಿಗರು ಕಳೆದೇ ಹೋಗಿದ್ದಾರೆ. ಕುರಿತಾದ ಸ್ಟೋರಿ ಇಲ್ಲಿದೆ.

Video: ನನಗೆ ನೀನು, ನಿನಗೆ ನಾನು; ಶ್ವಾನವನ್ನು ಹೆಗಲ ಮೇಲೆ ಹೊತ್ತುಕೊಂಡು ಊರು ಸುತ್ತಿದ ವ್ಯಕ್ತಿ
ವೈರಲ್ ವಿಡಿಯೋ
Image Credit source: Instagram

Updated on: Nov 13, 2025 | 1:34 PM

ನಿಷ್ಠೆ, ನಿಯತ್ತು, ನಿಷ್ಕಲ್ಮಶ ಪ್ರೀತಿ ಎಂದಾಕ್ಷಣ ಮೊದಲು ನೆನಪಿಗೆ ಬರುವುದೇ ಈ ಶ್ವಾನ (dog). ಹೌದು, ಶ್ವಾನ ಎಂದರೆ ಎಲ್ಲರಿಗೂ ಕೂಡ ಇಷ್ಟನೇ. ಒಂದು ಹೊತ್ತು ತುತ್ತು ಹಾಕಿದ್ರೆ ಸಾಕು, ಜೀವನ ಪರ್ಯಂತ ಋಣಿಯಾಗಿರುತ್ತದೆ. ಮನೆಯ ಮುದ್ದಿನ ಶ್ವಾನಗಳನ್ನು ತಮ್ಮ ಸದಸ್ಯರಂತೆ ನೋಡಿಕೊಳ್ಳುತ್ತಾರೆ. ಆದರೆ ಇದೀಗ ವ್ಯಕ್ತಿಯೊಬ್ಬ ನಾಯಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಊರು ಸುತ್ತಿದ್ದಾನೆ. ಮಕ್ಕಳಂತೆ ತನ್ನ ಹೆಗಲ ಮೇಲೆ ಹೊತ್ತು ನಡೆದುಕೊಂಡು  ಹೋಗುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Binoy joshep ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ವ್ಯಕ್ತಿಯೊಬ್ಬನಿಗೆ ಶ್ವಾನವು ಮಕ್ಕಳಿಗಿಂತ ಹೆಚ್ಚಾಗಿದೆ. ತನ್ನ ಹೆಗಲ ಮೇಲೆ ಹೊತ್ತು ಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ನೋಡಬಹುದು. ನಿಷ್ಕಲ್ಮಶ ಪ್ರೀತಿ ನೀಡಿದ ಶ್ವಾನಕ್ಕೆ ವ್ಯಕ್ತಿಯೂ ತೋರುವ ಪ್ರೀತಿಯನ್ನು ನೀವಿಲ್ಲಿ ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ಮಾತಿಗೆ ತಪ್ಪದೇ ಮನೆಮಾಲಕಿಯ ಪರ್ಸ್‌ನ್ನು ಕಾಯ್ದ ಮುದ್ದಿನ ಶ್ವಾನ

ಈ ವಿಡಿಯೋ ಆರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಪ್ರೀತಿ ನೀಡಿದರೆ ಕೊನೆತನಕ ಜೊತೆಯಿರುವ ಏಕೈಕ ಜೀವವಿದು ಎಂದಿದ್ದಾರೆ. ಇನ್ನೊಬ್ಬರು, ಇದು ನಿಜವಾದ ಪ್ರೀತಿ ಎಂದರೆ, ಮತ್ತೊಬ್ಬರು ಇಂತಹ ದೃಶ್ಯಗಳು ಮನಸ್ಸಿಗೆ ಹತ್ತಿರವಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 1:32 pm, Thu, 13 November 25