Viral Video: ತಾಯಿಯನ್ನು ಬಿಟ್ಟು ಇವನ ಬಳಿ ಹೇಗೆ ಬಂದಿತಿದು? ನೆಟ್ಟಿಗರಿಂದ ಕಾನೂನುಪಾಠ

|

Updated on: Jul 04, 2023 | 11:40 AM

Lion Cub: 'ಲವ್ ಬೈಟ್​ ಕೊಟ್ರೆ ನಿನಗೂ ಬೈಟ್ ಕೊಡಬೇಕಾಗತ್ತೆ ನೋಡು' ಹೀಗೆ ಇವನು ಮಾತನಾಡುತ್ತಿರುವದು ಬೆಕ್ಕುನಾಯಿಮರಿಯನ್ನುದ್ದೇಶಿಸಿ ಅಲ್ಲ, ಮತ್ತೆ? ಈ ವಿಡಿಯೋ ನೋಡಿದರೆ ಖಂಡಿತ ನಿಮಗೂ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

Viral Video: ತಾಯಿಯನ್ನು ಬಿಟ್ಟು ಇವನ ಬಳಿ ಹೇಗೆ ಬಂದಿತಿದು? ನೆಟ್ಟಿಗರಿಂದ ಕಾನೂನುಪಾಠ
ಸಿಂಭಾ ಎಂಬ ಸಿಂಹದ ಮರಿಯೊಂದಿಗೆ ಕಾರು ಚಲಾಯಿಸುತ್ತಿರುವ ವ್ಯಕ್ತಿ
Follow us on

Animals: ಸುಮ್ನೆ ಸೀಟ್ ಮೇಲೆ ಹೋಗಿ ಕೂತ್ಕೊಳ್ಳೋ, ಡ್ರೈವ್​ ಮಾಡ್ತಿದೀನಿ ಎಂದು ಇವನು ಸಿಂಹದ ಮರಿಗೆ (Lion Cub) ಹೇಳುತ್ತಾನೆ. ಅದು ಅವನ ಭುಜವನ್ನೇರಿ ಕತ್ತಿಗಾಸರೆಯಾಗಿ ನಿಲ್ಲುತ್ತದೆ. ಸಿಂಭಾ ಪಕ್ಕದ ಸೀಟಿನಲ್ಲಿ ಕುಳಿತುಕೊಂಡು ಕಿಟಕಿಯಲ್ಲಿ ಹೊರಗೆ ನೋಡು, ಏನಾಗ್ತಿದೆ, ಯಾರು ಹೋಗ್ತಿದಾರೆ ಯಾರು ಬರ್ತಿದಾರೆ ನೋಡಲ್ಲಿ ಎಂದು ಹೇಳುತ್ತಿರುವಂತೆ ಅದು ಸೀಟಿನಲ್ಲಿ ಕುಳಿತು, ಕಿಟಕಿಗಾಜಿಗೆ ಮುಂಗಾಲುಗಳನ್ನು ಕೊಟ್ಟು ಹೊ ನೋಡತೊಡಗುತ್ತದೆ. ಹತ್ರ ಎಲ್ಲಾದರೂ ಶಾಲೆ ಇದೆಯಾ ನೋಡು ಎನ್ನುತ್ತಾನೆ. ಹೀಗೆ ಸಿಂಹದ ಮರಿಯೊಂದಿಗೆ ನಡೆದ ಈ ಸಂಭಾಷಣೆಯುಳ್ಳ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ನಿಮ್ಮ ಕಾರನ್ನು ನಿಲ್ಲಿಸಿ ನೀವು ಈ ಮರಿಯನ್ನು ತೋಳೊಳಗೆ ಎತ್ತಿಕೊಂಡು ತಬ್ಬಿಕೊಳ್ಳಿ ಆಗ ಇದಕ್ಕೆ ಖುಷಿ ಎನ್ನಿಸುತ್ತದೆ. ನೀವು ಈ ಮರಿಯನ್ನು ತಾಯಿಯಿಂದ ಏಕೆ ದೂರ ಮಾಡಿರುವಿರಿ, ಈ ಮರಿಯನ್ನು ಮರಳಿ ತಾಯಿಯ ಬಳಿ ಬಿಡಿ. ಅದು ತಾಯಿಗಾಗಿ ಹಂಬಲಿಸುತ್ತಿದೆ, ಅರಣ್ಯ ಸಂರಕ್ಷಕರಿಗೆ ಅದನ್ನು ಒಪ್ಪಿಸಿ. ಭಾರದಲ್ಲಿ ಕಾಡುಪ್ರಾಣಿಗಳನ್ನು ಸಾಕಲು ಅನುಮತಿ ಇದೆಯೇ?! ನಾಯಿ ಬೆಕ್ಕುಗಳನ್ನು ಸಾಕಿದಂತೆ ಅಲ್ಲ ಸಿಂಹದ ಮರಿಯನ್ನು ಸಾಕುವುದೆಂದರೆ, ಅಷ್ಟಕ್ಕೂ ಈ ಮರಿಯನ್ನು ಎಲ್ಲಿಂದ ತಂದಿದ್ದೀರಿ…? ಅಂತೆಲ್ಲ ಜನರು ಪ್ರಶ್ನೆಗಳ ಸುರಿಮಳೆಯನ್ನೇ ಈ ವಿಡಿಯೋದ ಕೆಳಗೆ ಹರಿಸುತ್ತಿದ್ದಾರೆ.

ಇದನ್ನೂ ಓದಿ : Viral Video: ತಾಳುವಿಕೆಗಿಂತನ್ಯ ತಪವು ಇಲ್ಲ; ಆಟೋಗಾಗಿ ಸರದಿಯಲ್ಲಿ ನಿಂತಿರುವ ಮುಂಬೈಕರ್ಸ್

ನಿಮ್ಮ ಸ್ವಾರ್ಥಕ್ಕಾಗಿ ಅದರ ಸಹಜ ನಡೆಯನ್ನು ಯಾಕೆ ನಿಯಂತ್ರಿಸಲು ನೋಡುತ್ತಿದ್ದೀರಿ? ಇನ್ನೂ ಸಮಯವಿದೆ ನಾಡಿಗೆ ಕರೆತಂದು ಅದರ ಜೀವನವನ್ನು ಹಾಳುಗೆಡಹದಿರಿ. ಕಾನೂನಾತ್ಮಕವಾಗಿ ಇದನ್ನು ನೀವು ಕರೆತಂದಿದ್ದೀರೇ? ಇದು ಅಳಿವಿನಂಚಿಲ್ಲಿರುವ ತಳಿ. ನಿಜವಾಗಲೂ ನೀವು ಪ್ರಾಣಿಪ್ರಿಯರು ಆಗಿದ್ದರೆ ದಯವಿಟ್ಟು ಪ್ರಾಣಿ ಸಂರಕ್ಷಣಾ ತಂಡಕ್ಕೆ ಅದನ್ನು ಒಪ್ಪಿಸಿ. ಈ ವಿಡಿಯೋ ಅನ್ನು ರಿಪೋರ್ಟ್​ ಮಾಡಿ ಈತನಿಗೆ ತಕ್ಕ ಬುದ್ಧಿಯನ್ನು ಕಲಿಸಿ… ಜನರು ಪರಿಪರಿಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಆದರೆ ಈ ವಿಡಿಯೋದ ಮೂಲ ಮತ್ತು ಈ ವಿಡಿಯೋದಲ್ಲಿರುವ ವ್ಯಕ್ತಿ, ಈ ಮರಿ ಈತನಲ್ಲಿಗೆ ಹೇಗೆ ಬಂದಿತು ಏನೊಂದು ಮಾಹಿತಿಯೂ ಇಲ್ಲ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 11:35 am, Tue, 4 July 23