Viral News : ಪ್ರೀತಿ ಎಂದರೇನು? ಸದಾ ಸಾಮಾಜಿಕ ಜಾಲತಾಣಗಳಲ್ಲಿ ಬೆರಳಾಡಿಸುವ ನೀವು ಹಲವಾರು ಬಗೆಯ ವ್ಯಾಖ್ಯಾನಗಳನ್ನು ಓದಿರುತ್ತೀರಿ ಕೇಳಿರುತ್ತೀರಿ. ಆದರೆ ಪ್ರೀತಿ ಎನ್ನುವುದು ಅನುಭವಕ್ಕೆ ಸಂಬಂಧಿಸಿದ್ದು. ಒಂದೇ ಮಾತಿನಲ್ಲಿ, ಹಿಡಿತದಲ್ಲಿ ಅದು ಸಿಗುವಂಥದ್ದಲ್ಲ. ಆದರೂ ಅದೊಂದು ಚೈತನ್ಯ ಮತ್ತು ಶಕ್ತಿ ಎಂದು ಹೇಳಬಹುದು. ಭಾರತೀಯ ಮೂಲದ ಚಿತ್ರಕಲಾವಿದ ಪ್ರದ್ಯುಮ್ನ ಕುಮಾರ್ ಮಹಾನಂದಿಯಾ ಸ್ವೀಡಿಷ್ ಮಹಿಳೆ ಚಾರ್ಲೆಟ್ನೊಂದಿಗೆ ವಾಸಿಸಲು ಸೈಕಲ್ ಮೇಲೆ ಸುಮಾರು 5 ತಿಂಗಳಗಳ ಕಾಲ ಪ್ರಯಾಣ ಮಾಡಿದ ಚೈತನ್ಯದ ಯಾತ್ರೆ ಇದಾಗಿದೆ.
1975ರಲ್ಲಿ ಭಾರತೀಯ ಕಲಾವಿದರಾದ ಪ್ರದ್ಯುಮ್ನರ ಚಿತ್ರಕಲೆಗೆ ಸ್ವಿಡನ್ನ 19ರ ಯುವತಿ ಚಾರ್ಲೆಟ್ ಮಾರುಹೋದರು. ಆಗ ಆ ಕಲಾವಿದರನ್ನು ಭೇಟಿಯಾಗಲೇಬೇಕು, ಅವರ ಕಲಾಕೃತಿಗಳನ್ನು ನೋಡಲೇಬೇಕು ಮತ್ತು ತನ್ನ ಪೋರ್ಟ್ರೇಟ್ ಅನ್ನು ಅವರಿಂದ ಚಿತ್ರಿಸಿಕೊಳ್ಳಬೇಕು ಎಂಬ ಹಂಬಲ ಆಕೆಯಲ್ಲಿ ಹೆಚ್ಚಿತು. ತಡಮಾಡದೆ ಆಕೆ 22 ದಿನಗಳ ಕಾಲ ವ್ಯಾನ್ನಲ್ಲಿ ಪ್ರಯಾಣಿಸಿ ಭಾರತ ತಲುಪಿದರು. ನಂತರ ಪೋರ್ಟ್ರೇಟ್ ಚಿತ್ರಿಸುತ್ತಿರುವ ದಿನಗಳಲ್ಲೇ ಆಕೆಯ ಚೆಲುವು ಪ್ರದ್ಯುಮ್ನ ಅವರನ್ನು ಗಾಢವಾಗಿ ಸೆಳೆಯಿತು, ಪರಸ್ಪರ ಪ್ರೀತಿಯೂ ಬೆಳೆಯಿತು. ತಡಮಾಡದೆ ಅವರಿಬ್ಬರೂ ಮದುವೆಯಾದರು. ಆದರೆ ಚಾರ್ಲೆಟ್ ಒಬ್ಬಳೇ ಮರಳಿ ಸ್ವೀಡನ್ಗೆ ಪ್ರಯಾಣಿಸಬೇಕಾದ ಸಂದರ್ಭ ಸೃಷ್ಟಿಯಾಯಿತು.
ಇದನ್ನೂ ಓದಿ : Viral Video:ಸೆರಗನ್ನು ಮೇಲೇರಿಸಿಕೊಳ್ಳಿ!; ನೈತಿಕ ಶಿಕ್ಷಕರಿಗೆ ಗಾಯಕಿಯ ಮಾತಿನಚಾಟಿ, ನೋಡಿ ವಿಡಿಯೋ
ನಂತರ ಪ್ರದ್ಯುಮ್ನ ಅವರಿಗೆ ಚಾರ್ಲೆಟ್ ಅವರಿಂದ ದೂರವಿರುವುದು ಸಾಧ್ಯವಾಗಲಿಲ್ಲ. 1977ರ ಜನವರಿಯಂದು ತನ್ನೆಲ್ಲಾ ಆಸ್ತಿಯನ್ನು ಮಾರಿ ಒಂದು ಸೈಕಲ್ ಕೊಂಡುಕೊಂಡರು. ಭಾರತದಿಂದ ಸ್ವಿಡನ್ಗೆ ಸೈಕಲ್ ಪ್ರಯಾಣದ ಮೂಲಕ ಹೆಂಡತಿ ಚಾರ್ಲೆಟ್ಅನ್ನು ತಲುಪಿದರು. ದಿನಕ್ಕೆ 70 ಕಿ.ಮೀ ಪ್ರಯಾಣಿಸುತ್ತಿದ್ದ ಪ್ರದ್ಯುಮ್ನ ಸ್ವೀಡನ್ ತಲುಪಲು ನಾಲ್ಕು ತಿಂಗಳುಗಳ ಮೇಲೆ 3 ವಾರಗಳನ್ನು ತೆಗೆದುಕೊಂಡರು. ನಂತರ ಅವರು ಇಬ್ಬರು ಮಕ್ಕಳ ತಂದೆತಾಯಿಯಾದರು. ಎಲ್ಲರೂ ಒಟ್ಟಿಗೇ ವಾಸಿಸತೊಡಗಿದರು.
ಇದನ್ನೂ ಓದಿ : Viral Video: ಇದೊಂದಿದ್ದರೆ ಯಾರೂ ಏನನ್ನೂ ಚಿವುಟಬಹುದು ಕತ್ತರಿಸಬಹುದು ಸುಲಿಯಬಹುದು!
ಈ ಪೋಸ್ಟ್ ಅನ್ನು ಮೇ 5ರಂದು ಇನ್ಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿತ್ತು. ಸುಮಾರು 2 ಲಕ್ಷ ಜನರು ಇದನ್ನು ಹಂಚಿಕೊಂಡಿದ್ದರು. ಸಾವಿರಾರು ಜನರು ಪ್ರತಿಕ್ರಿಯಿಸಿದ್ದರು. ಇದೀಗ ಮತ್ತೆ ವೈರಲ್ ಆಗುತ್ತಿದೆ. ಪ್ರದ್ಯುಮ್ನ ಅವರ ಬದ್ಧತೆ ಮತ್ತು ಪ್ರೀತಿ ನಿಜಕ್ಕೂ ಶ್ಲಾಘನೀಯ. ಚೈತನ್ಯಯುತ ವ್ಯಕ್ತಿ ಇವರಾಗಿದ್ದಾರೆ. ಇದೇ ಶುದ್ಧ ಪ್ರೀತಿ ಎಂದು ಅನೇಕರು ಹೇಳಿದ್ದಾರೆ. ನಿಮ್ಮಿಬ್ಬರಿಗೂ ದೇವರು ಒಳ್ಳೆಯದನ್ನು ಮಾಡಲಿ ಎಂದು ಹಾರೈಸಿದ್ದಾರೆ ಹಲವಾರು ಜನ. ಪ್ರೀತಿ ಎನ್ನುವುದು ಹೀಗೇ. ಅದಕ್ಕಾಗಿ ಏನನ್ನೂ ಮಾಡಲು ವ್ಯಕ್ತಿಗೆ ಶಕ್ತಿ ನೀಡುತ್ತದೆ ಎಂದಿದ್ದಾರೆ. ಒಬ್ಬರು. ನೀವೇನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:12 pm, Fri, 26 May 23