Video: ಝೂನಲ್ಲಿ ಸಿಂಹವಿದ್ದ ಬೇಲಿಯೊಳಗೆ ಹೋಗಲು ಪ್ರಯತ್ನಿಸಿದ ವ್ಯಕ್ತಿ; ಪ್ರಶ್ನಿಸಿದ್ದಕ್ಕೆ ಊಹಿಸಲೂ ಸಾಧ್ಯವಿಲ್ಲದ ಉತ್ತರ ಕೊಟ್ಟ!

| Updated By: Lakshmi Hegde

Updated on: Nov 28, 2021 | 11:29 AM

ಈ ವ್ಯಕ್ತಿಯ ಹೆಸರು ಜಿ.ಸಾಯಿಕುಮಾರ್​. 31 ವರ್ಷ.  ನೆಲದ ಮೇಲೆ ಸಿಂಹವಿದೆ. ಈತ ಅಲ್ಲಿಯೇ ಇರುವ ಬಂಡೆಗಲ್ಲಿನ ಮೇಲೆ ಕುಳಿತ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್​ ಆಗುತ್ತಿದೆ.

Video: ಝೂನಲ್ಲಿ ಸಿಂಹವಿದ್ದ ಬೇಲಿಯೊಳಗೆ ಹೋಗಲು ಪ್ರಯತ್ನಿಸಿದ ವ್ಯಕ್ತಿ; ಪ್ರಶ್ನಿಸಿದ್ದಕ್ಕೆ ಊಹಿಸಲೂ ಸಾಧ್ಯವಿಲ್ಲದ ಉತ್ತರ ಕೊಟ್ಟ!
ಸಾಂಕೇತಿಕ ಚಿತ್ರ
Follow us on

ಎಂತೆಂತಾ ವಿಚಿತ್ರ ಜನರು ಇರುತ್ತಾರೆ ಎಂಬುದಕ್ಕೆ ಈ ಸುದ್ದಿಯೇ ಸಾಕ್ಷಿ.  ಹೈದರಾಬಾದ್​​ನಲ್ಲಿ ಒಬ್ಬ ವ್ಯಕ್ತಿ ಅಲ್ಲಿನ ನೆಹರೂ ಝೂಲಾಜಿಕಲ್​ ಪಾರ್ಕ್​​ (ನೆಹರೂ ಝೂ)ಗೆ ಹೋಗಿ ಆತಂಕ ಸೃಷ್ಟಿಸಿದ್ದಾನೆ. ಪ್ರಾಣಿ ಸಂಗ್ರಹಾಲಯಕ್ಕೆ ಹೋದ ಆತ ಸೀದಾ ಆಫ್ರಿಕಾದ ಸಿಂಹಗಳಿದ್ದ ಸ್ಥಳಕ್ಕೆ ಬೇಲಿಯೊಳಗೆ ನುಸುಳಲು ಪ್ರಯತ್ನ ಪಟ್ಟಿದ್ದಾನೆ. ಅದನ್ನು ನೋಡಿದ ಝೂ ಸಿಬ್ಬಂದಿ ಕೂಡಲೇ ಆ ವ್ಯಕ್ತಿಯನ್ನು ತಡೆದು, ಪೊಲೀಸರಿಗೆ ಒಪ್ಪಿಸಿದ್ದಾರೆ.

ವಿಚಿತ್ರ ಕಾರಣ ಕೊಟ್ಟ ವ್ಯಕ್ತಿ
ಸಾಮಾನ್ಯವಾಗಿ ಪ್ರಾಣಿ ಸಂಗ್ರಹಾಲಯಗಳಲ್ಲಿ ಬೇರೆಬೇರೆ ವಿಭಾಗಗಳಲ್ಲಿ ಬೇರೆ ಬೇರೆ ಜಾತಿಯ ಪ್ರಾಣಿಗಳು ಇರುತ್ತವೆ. ಹಾಗೇ, ಅವಕ್ಕೊಂದು ಪಂಜರದ ಮಾದರಿಯ ಬೇಲಿ ಮಾಡಿಡಲಾಗುತ್ತದೆ. ಈತ ಸೀದಾ ಬಂದು ಆ ಬೇಲಿಯೊಳಗೆ ನುಗ್ಗಿ ಸಿಂಹವಿದ್ದಲ್ಲಿಗೆ ಹೋಗುವುದನ್ನು ನೋಡಿ ಝೂ ಸಿಬ್ಬಂದಿಯೇ ತಲೆಕೆಡಿಸಿಕೊಂಡಿದ್ದಾರೆ. ಅಲ್ಲಿ ಸಿಂಹ ಓಡಾಡುತ್ತಿದ್ದರೂ ಬೇಲಿಯೊಳಗೆ ಹೋಗಲು ಯಾಕೆ ಪ್ರಯತ್ನಿಸಿದೆ ಎಂಬ ಪ್ರಶ್ನೆಗೆ ಅವನು ನೀಡಿದ ಉತ್ತರ ಇನ್ನಷ್ಟು ಅಚ್ಚರಿಯನ್ನುಂಟು ಮಾಡಿದೆ. ಆ ಸಿಂಹ ಇರುವ ಜಾಗದಲ್ಲಿ ಡೈಮಂಡ್​​ (ವಜ್ರ)ನ್ನು ಅಡಗಿಸಿಡಲಾಗಿದೆ. ಅದನ್ನು ತೆಗೆದುಕೊಳ್ಳಬೇಕು. ಹಾಗಾಗಿ ಒಳಗೆ ಹೋಗುತ್ತಿದ್ದೆ ಎಂದು ಆತ ಹೇಳಿದ್ದಾನೆ.

ಈ ವ್ಯಕ್ತಿಯ ಹೆಸರು ಜಿ.ಸಾಯಿಕುಮಾರ್​. 31 ವರ್ಷ.  ನೆಲದ ಮೇಲೆ ಸಿಂಹವಿದೆ. ಈತ ಅಲ್ಲಿಯೇ ಇರುವ ಬಂಡೆಗಲ್ಲಿನ ಮೇಲೆ ಕುಳಿತ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್​ ಆಗುತ್ತಿದೆ.  ಪೊಲೀಸರು ಈತನನ್ನು ಹಿಡಿದು ವಿಚಾರಿಸಿದಾಗ ಇವನು ಸ್ವಲ್ಪಮಟ್ಟಿಗೆ ಮಾನಸಿಕ ಅಸ್ವಸ್ಥ ಎಂಬುದು ಗೊತ್ತಾಗಿದೆ.  ನಂತರ ಪೊಲೀಸರು ಯುವಕನ ಪಾಲಕರಿಗೆ ವಿಷಯ ತಿಳಿಸಿ ಆತನನ್ನು ಕಳಿಸಿಕೊಟ್ಟಿದ್ದಾರೆ.

ಇದನ್ನೂ ಓದಿ: Mann Ki Baat: ಇಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ಮೋದಿಯವರಿಂದ ಮನ್​ ಕೀ ಬಾತ್​; ಎಲ್ಲೆಲ್ಲಿ ಪ್ರಸಾರಗೊಳ್ಳಿದೆ? ಇಲ್ಲಿದೆ ಮಾಹಿತಿ