Viral Video: ರೀಲ್​ಮಂದಿ; ಮೆಟ್ರೋದಲ್ಲಿ ಲಗಾಟಿ ಹೊಡಿಯಲು ಹೋಗಿ ಏನಾಯಿತು ನೋಡಿ

|

Updated on: Sep 25, 2023 | 2:30 PM

Backflip : ಚಲಿಸುತ್ತಿರುವ ಮೆಟ್ರೋದಲ್ಲಿ ಲಗಾಟಿ ಹೊಡೆಯಲು ಹೋಗಿ ಈ ಯುವಕ ತಲೆಗೆ ಏಟು ಮಾಡಿಕೊಂಡಿದ್ದಾನೆ. ತನ್ನ ಈ ವಿಡಿಯೋ ಅನ್ನು ಇನ್​ಸ್ಟಾಗ್ರಾಂನಲ್ಲಿ ತಾನೇ ಅಪ್​ಲೋಡ್ ಕೂಡ ಮಾಡಿ ಹೀಗೆಲ್ಲ ಆಯಿತು ಎಂದೂ ಹೇಳಿದ್ದಾನೆ. ಮಾಡಿದ್ದುಣ್ಣೋ ಮಾರಾಯಾ ಎಂದು ಕೆಲವರು ಹೇಳುತ್ತಿದ್ದಾರೆ. ಈ ರೀಲಿಗರ ಬಗ್ಗೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನೆಟ್​ಮಂದಿ ಮತ್ತೆ ಪೇಚಾಡಿದೆ.

Viral Video: ರೀಲ್​ಮಂದಿ; ಮೆಟ್ರೋದಲ್ಲಿ ಲಗಾಟಿ ಹೊಡಿಯಲು ಹೋಗಿ ಏನಾಯಿತು ನೋಡಿ
ಮೆಟ್ರೋದಲ್ಲಿ ಲಗಾಟಿ ಹೊಡೆಯಲು ಹೋಗಿ ತಲೆಗೆ ಏಟು ಮಾಡಿಕೊಂಡ ಯುವಕ
Follow us on

Metro: ಸಾರ್ವಜನಿಕ ಪ್ರದೇಶಗಳಲ್ಲಿ ಮತ್ತು ಸಾರಿಗೆಗಳಲ್ಲಿ ರೀಲ್ ಮಾಡಬೇಡಿ ಎಂದು ಎಷ್ಟು ಎಚ್ಚರಿಸಿದರೂ ಈ ರೀಲಿಗರು ಪಾಠ ಕಲಿಯುತ್ತಿಲ್ಲ, ಈ ವಿಷಯವನ್ನು ಮೆಟ್ರೋ ಆಡಳಿತ ಮಂಡಳಿ ಮತ್ತು ಪೊಲೀಸರ ಗಮನಕ್ಕೆ ನೆಟ್ಟಿಗರು ತಂದುತಂದು ಸೋತಿದ್ದಾರೆ. ಆದರೆ ಯಾವ ಅಗತ್ಯ ಕ್ರಮಗಳನ್ನೂ ಮೆಟ್ರೋ ಮತ್ತು ಸ್ಥಳೀಯ ಪೊಲೀಸರು ತೆಗೆದುಕೊಳ್ಳುತ್ತಿಲ್ಲ. ಇದೀಗ ಮೆಟ್ರೋದಲ್ಲಿ ಲಗಾಟಿ (Backflip) ಹೊಡೆಯಲು ಹೋಗಿ ಯುವಕನೊಬ್ಬ ತಲೆಗೆ ಏಟು ಮಾಡಿಕೊಂಡ ವಿಡಿಯೋ ವೈರಲ್ ಆಗುತ್ತಿದೆ. @chaman_flipper ಎಂಬಾತ ತನ್ನ ಈ ವಿಡಿಯೋ ಅನ್ನು ತಾನೇ ಇನ್​ಸ್ಟಾಗ್ರಾಂ ಪುಟದಲ್ಲಿ ಪೋಸ್ಟ್ ಮಾಡಿ, ಮೆಟ್ರೋದಲ್ಲಿ ಲಗಾಟಿ ಹೊಡೆಯುತ್ತಿದ್ದಾಗ ಗಾಯಗೊಂಡೆ ಎಂದು ಪೋಸ್ಟ್ ಮಾಡಿದ್ದಾನೆ.

ಇದನ್ನೂ ಓದಿ : Viral: ಆಫೀಸ್​ ಕುರ್ಚಿಯಲ್ಲಿ ಕುಳಿತು ಆಟೋ ಓಡಿಸುತ್ತಿರುವ ಚಾಲಕ; ನೆಟ್ಟಿಗರ ನಾನಾ ರೀತಿಯ ಪ್ರತಿಕ್ರಿಯೆ

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸೆ. 4ರಂದು ಹಂಚಿಕೊಂಡ ಈ ವಿಡಿಯೋವನ್ನು ಈತನಕ 2.3 ಲಕ್ಷ ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿ ಬುದ್ಧಿ ಹೇಳಿದ್ದಾರೆ. ಇನ್ನಾದರೂ ನಿಮಗೆ ಅರಿವಾಯಿತೆ? ಇದೆಲ್ಲವನ್ನೂ ಮೆಟ್ರೋದಲ್ಲಿ ಮಾಡುವ ಅಗತ್ಯವಾದರೂ ಏನು? ಇದರಿಂದ ಏನು ಸಾಧಿಸುತ್ತೀರಿ? ಈಗ ಯಾರಿಗ ತೊಂದರೆಯಾಯಿತು? ಎಂದು ಕೇಳಿದ್ದಾರೆ.

ಮೆಟ್ರೋದಲ್ಲಿ ಲಗಾಟಿ ಹೊಡೆಯಲು ಹೋಗಿ

ಓಡುತ್ತಿರುವ ಮೆಟ್ರೋದಲ್ಲಿ ಇಂಥ ಸಾಹಸಗಳನ್ನು ಮಾಡಿದರೆ ಇನ್ನೇನು ಆಗಬಹುದು? ಗೊತ್ತಾಯಿತಲ್ಲ ಈಗ ಎಂದಿದ್ದಾರೆ ಒಬ್ಬರು. ಓಹ್ ನೀವು ಈಗ ಸುಧಾರಿಸಿಕೊಂಡಿದ್ದೀರಿ ಎಂದುಕೊಳ್ಳುವೆ, ಮೆಟ್ರೋದಲ್ಲಿ ಇಂಥದೆಲ್ಲವನ್ನು ಪ್ರಯತ್ನಿಸಬೇಡಿ ಎಂದಿದ್ದಾರೆ ಇನ್ನೊಬ್ಬರು. ಮೆಟ್ರೊ ಆಡಳಿತ ಮಂಡಳಿ ಈ ರೀಲಿಗರಿಗಾಗಿ ಏನನ್ನೂ ಕ್ರಮ ಕೈಗೊಳ್ಳುತ್ತಿಲ್ಲ, ಇದರ ಹಿಂದಿನ ಉದ್ದೇಶವೇನು ತಿಳಿಯದಾಗಿದೆ ಎಂದು ಪೇಚಾಡಿದ್ಧಾರೆ ಅನೇಕರು.

ಇದನ್ನೂ ಓದಿ : Viral Video: ಗಿನ್ನೀಸ್​ ವಿಶ್ವದಾಖಲೆ; ನಿಂಜಾ ಪ್ರಶಸ್ತಿ ಪಡೆದ 71 ವರ್ಷದ ಹಿರಿಯ ಮಹಿಳೆ

ರೀಲಿಗರಿಗೆ ಮೆಟ್ರೋ ಎನ್ನುವುದು ಒಳ್ಳೆಯ ತಾಣವಾದಂತಿದೆ, ಸರ್ಕಾರ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಇಂಥ ಸಾಹಸಿಗರು ತಾವೂ ಅಪಾಯವನ್ನು ಮಾಡಿಕೊಳ್ಳುತ್ತಾರೆ ಮತ್ತು ಇತರೇ ಪ್ರಯಾಣಿಕರಿಗೂ ಎಂದು ಇನ್ನೂ ಓಂದಿಷ್ಟು ಜನ ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 2:30 pm, Mon, 25 September 23