Viral: ಆಫೀಸ್​ ಕುರ್ಚಿಯಲ್ಲಿ ಕುಳಿತು ಆಟೋ ಓಡಿಸುತ್ತಿರುವ ಚಾಲಕ; ನೆಟ್ಟಿಗರ ನಾನಾ ರೀತಿಯ ಪ್ರತಿಕ್ರಿಯೆ

Bengaluru: ಬೆಂಗಳೂರಿನ ಆಟೋ ಡ್ರೈವರ್ ಒಬ್ಬ ಎರ್ಗಾನಾಮಿಕ್ ಕುರ್ಚಿಯನ್ನು ತನ್ನ ಆಟೋದಲ್ಲಿ ಅಳವಡಿಸಿಕೊಂಡಿದ್ದ ಫೋಟೋ ಇದೀಗ ವೈರಲ್ ಆಗಿದೆ. ನೆಟ್ಟಿಗರು ವಿವಿಧ ರೀತಿಯಲ್ಲಿ ಈ ಫೋಟೋಗೆ ಪ್ರತಿಕ್ರಿಯಿಸುತ್ತಿದ್ದಾರೆ. ತಪ್ಪೇನಿದೆ ತನ್ನ ಬೆನ್ನಿನ ರಕ್ಷಣೆಯನ್ನು ತಾನು ಮಾಡಿಕೊಂಡಿದ್ದಾನೆ ಎಂದು ಕೆಲವರು. ಈತ ಪಾರ್ಟ್​ಟೈಮ್ ಕೆಲಸ ಮಾಡುತ್ತಿರಬಹುದು ಎಂದು ಇನ್ನೂ ಕೆಲವರು.

Viral: ಆಫೀಸ್​ ಕುರ್ಚಿಯಲ್ಲಿ ಕುಳಿತು ಆಟೋ ಓಡಿಸುತ್ತಿರುವ ಚಾಲಕ; ನೆಟ್ಟಿಗರ ನಾನಾ ರೀತಿಯ ಪ್ರತಿಕ್ರಿಯೆ
ಬೆಂಗಳೂರಿನ ಆಟೋ ಚಾಲಕಆಟೋದೊಳಗೆ ಆಫೀಸ್ ಕುರ್ಚಿ ಅಳವಡಿಸಿಕೊಂಡಿರುವುದು
Follow us
ಶ್ರೀದೇವಿ ಕಳಸದ
|

Updated on: Sep 25, 2023 | 1:05 PM

Ergonomic: ಬೆಂಗಳೂರಿನ ಆಟೊ ಚಾಲಕನೊಬ್ಬ (Auto Driver) ಆಫೀಸ್ ಕುರ್ಚಿಯಲ್ಲಿ ಕುಳಿತು ಆಟೋ ಓಡಿಸುತ್ತಿರುವ ಫೋಟೋ ವೈರಲ್ ಆಗಿದೆ. ಕಂಪ್ಯೂಟರ್​ ಮುಂದೆ ಕುಳಿತು ಕೆಲಸ ಮಾಡುವವರು ಇಂಥ ಕುರ್ಚಿಯನ್ನು ಉಪಯೋಗಿಸುತ್ತಾರೆ. ಆದರೆ ಆಟೋ ಓಡಿಸಲು ಈ ಕುರ್ಚಿ ಯಾಕೆ ಬೇಕು? ಎನ್ನುವ ಕುತೂಹಲ ನೆಟ್ಟಿಗರಲ್ಲಿ ಉಂಟಾಗಿದೆ. ಈತನಕ ಈ ಪೋಸ್ಟ್​ ಅನ್ನು 2 ಲಕ್ಷಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ. 3,000ಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಸುಮಾರು 200 ಜನರು ರೀಪೋಸ್ಟ್ ಮಾಡಿದ್ದಾರೆ. 60 ಜನರು ಪ್ರತಿಕ್ರಿಯಿಸಿದ್ದಾರೆ. ಅನುಜ್ ಬನ್ಸಾಲ್ X ನಲ್ಲಿ ಈ ಪೋಸ್ಟ್​ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : Viral: ತಾಂತ್ರಿಕ ದೋಷವೋ ವಂಚನೆಯೋ; ನಿಮ್ಮ ಇತ್ತೀಚಿನ ಸ್ವಿಗ್ಗಿ ಬಿಲ್ ನೋಡಿದ್ದೀರಾ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಪೋಸ್ಟಿನಡಿ ನೆಟ್ಟಿಗರು ತಮ್ಮ ವಿಭಿನ್ನ ಆಲೋಚನೆ, ಅಭಿಪ್ರಾಯಗಳನ್ನು ಹರಿಬಿಡುತ್ತಿದ್ದಾರೆ. ಕೆಳಬೆನ್ನಿನ ಆರೋಗ್ಯವೂ ಪ್ರತಿಯೊಬ್ಬರಿಗೂ ಮುಖ್ಯ, ಅದರಲ್ಲೇನಿದೆ? ಎಂದಿದ್ದಾರೆ ಒಬ್ಬರು. ಕೆಲಸ ಮಾಡುವಾಗ ಎರ್ಗಾನಾಮಿಕ್​ ಕುರ್ಚಿಗಳನ್ನು ಬಳಸಿದರೆ ಅಪಾಯ ಕಡಿಮೆ ಎಂದಿದ್ದಾರೆ ಇನ್ನೊಬ್ಬರು. ಇದು ಪೀಕ್​ ಬೆಂಗಳೂರು ಕ್ಷಣ ಎಂದಿದ್ದಾರೆ ಮತ್ತೊಬ್ಬರು. ಈ ಬ್ರೋ ಅಲ್ಟ್ರಾ-ರಿಯಲಿಸ್ಟಿಕ್ ಡ್ರೈವಿಂಗ್ ಸೆಟಪ್ ಹೊಂದಿದ್ದಾರೆ ಎಂದಿದ್ದಾರೆ ಮಗದೊಬ್ಬರು.

ಇವನು ಆಟೋ ಓಡಿಸುವುದರೊಂದಿಗೆ ಈ ಕುರ್ಚಿಯಲ್ಲಿಯೇ ಕುಳಿತು ಪಾರ್ಟ್​ಟೈಮ್​ ಕೆಲಸವನ್ನೂ ಮಾಡುತ್ತಿರಬಹುದು ಎಂದು ಪುಣೆಯ ಆಟೋಚಾಲಕನೊಬ್ಬ ಆನ್​ಲೈನ್​ ಟ್ರೇಡಿಂಗ್ ಮಾಡುತ್ತಿರುವ ಸುದ್ದಿಯನ್ನು ಹಂಚಿಕೊಂಡಿದ್ದಾರೆ ಒಬ್ಬರು. ಯಾಕೆ ಆಟೋ ಡ್ರೈವರ್​ಗಳು ತಮಗೆ ಬೇಕಾದಂಥ ಕುರ್ಚಿಯಲ್ಲಿ ಕುಳಿತುಕೊಳ್ಳವುದು ತಪ್ಪೇನಿದೆ? ಟೆಕ್ಕಿಗಳು ಮಾತ್ರ ಇಂಥ ಕುರ್ಚಿಯಲ್ಲಿ ಕುಳಿತುಕೊಳ್ಳಬೇಕಾ ಎಂದಿದ್ದಾರೆ ಕೆಲವರು. ಬೆನ್ನಿನ ಸಮಸ್ಯ ಇರಬಹುದು ಅದಕ್ಕೇ ಈ ಕುರ್ಚಿ ಜೋಡಿಸಿರಬೇಕು ಎಂದಿದ್ದಾರೆ ಇನ್ನೂ ಕೆಲವರು.

ಇದನ್ನೂ ಓದಿ : Viral Video: ರೈಲಿನಲ್ಲಿ ಹೀಗೊಂದು ದೊಡ್ಡಕೂಸಿನ ಜೋಳಿಗೆ; ಬುದ್ಧಿವಂತನಿಗೆ ಜಯವಾಲಿ ಎಂದ ನೆಟ್ಟಿಗರು

ತನ್ನ ಆರೋಗ್ಯ ಕಾಪಾಡಿಕೊಳ್ಳಲು ತನಗೇನು ಬೇಕೋ ಆ ವ್ಯವಸ್ಥೆ ಮಾಡಿಕೊಂಡಿದ್ದಾನೆ, ತಪ್ಪೇನಿದೆ? ಎಂದಿದ್ಧಾರೆ ಒಬ್ಬರು. ಈಗಷ್ಟೇ ಬಂದ ಸುದ್ದಿ, ಈ ಚಾಲಕ ಆಟೋರಿಕ್ಷಾ ಸಂಘದ ಅಧ್ಯಕ್ಷನಂತೆ ಎಂದಿದ್ದಾರೆ ಮತ್ತೊಬ್ಬರು.

ಈ ಫೋಟೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ