Viral : ಹರಿದ ಚಪ್ಪಲಿ ಹೊಲಿಯಲು ಸರ್ಜಿಕಲ್ ಸೂಜಿ, ದಾರ ಬಳಸಿದ ವೈದ್ಯಕೀಯ ವಿದ್ಯಾರ್ಥಿ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವನ್ನು ನೋಡಿದಾಗ ಎಂತೆಂತಹ ವ್ಯಕ್ತಿಗಳು ಇರುತ್ತಾರೆ ಎಂದೆನಿಸುವುದು ಸಹಜ. ಕೆಲವರ ಬುದ್ಧಿವಂತಿಕೆಯನ್ನು ಮೆಚ್ಚಬೇಕೋ ಅಥವಾ ಬೈಯಬೇಕೋ ಎಂದು ತಿಳಿಯುವುದಿಲ್ಲ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವೈದ್ಯಕೀಯ ವಿದ್ಯಾರ್ಥಿಯೊಬ್ಬನು ಶಸ್ತ್ರಚಿಕಿತ್ಸೆಗೆ ಬಳಸುವ ಸರ್ಜಿಕಲ್ ಸೂಜಿ ಮತ್ತು ದಾರವನ್ನು ಬಳಸಿ ಹರಿದ ಚಪ್ಪಲಿಯನ್ನು ಹೊಲಿದಿದ್ದಾನೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಈತನ ಈ ಕೆಲಸಕ್ಕೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

Viral : ಹರಿದ ಚಪ್ಪಲಿ ಹೊಲಿಯಲು ಸರ್ಜಿಕಲ್ ಸೂಜಿ, ದಾರ ಬಳಸಿದ ವೈದ್ಯಕೀಯ ವಿದ್ಯಾರ್ಥಿ
ವೈರಲ್ ವಿಡಿಯೋ
Image Credit source: Instagram

Updated on: Apr 27, 2025 | 5:05 PM

ಈಗಿನ ಕಾಲದವರು ಅತೀ ಬುದ್ಧಿವಂತ (intelligent) ರು. ಆದರೆ ತಮ್ಮ ಬುದ್ಧಿವಂತಿಕೆಯನ್ನು ಚಿತ್ರ ವಿಚಿತ್ರ ಕೆಲಸ ಮಾಡುವಾಗ ಬಳಸಿಕೊಳ್ಳುತ್ತಾರೆ. ಕೆಲವೊಮ್ಮೆ ತನ್ನ ಬುದ್ಧಿ ಖರ್ಚು ಮಾಡಿ ಮಾಡುವ ಕೆಲಸಗಳಿಗೆ ಸಂಬಂಧಪಟ್ಟಂತಹ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಸಾಮಾನ್ಯವಾಗಿ ಸರ್ಜಿಕಲ್ ಸೂಜಿ (surgical needles) ಹಾಗೂ ದಾರ (thread) ವನ್ನು ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ಬಳಸಲಾಗುತ್ತದೆ. ಆದರೆ ಇಲ್ಲೊಬ್ಬ ವೈದ್ಯಕೀಯ ವಿದ್ಯಾರ್ಥಿಯೂ ಹರಿದ ಚಪ್ಪಲಿ (slipper) ಹೊಲಿಯಲು ಬಳಸಿದ್ದಾನೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈತನು ಮಾಡಿದ ಕೆಲಸ ಕಂಡು ಆತಂಕ ವ್ಯಕ್ತಪಡಿಸಿದ್ದಾರೆ.

medicaldialogues ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಇದರಲ್ಲಿ ವೈದ್ಯಕೀಯ ವಿದ್ಯಾರ್ಥಿಯೊಬ್ಬನು ರೋಗಿಯು ಮಲಗಿದ್ದ ಹಾಸಿಗೆಯ ಪಕ್ಕದ ಕುರ್ಚಿ ಮೇಲೆ ಕುಳಿತುಕೊಂಡಿದ್ದು, ಫೇಸ್ ಮಾಸ್ಕ್ ಮತ್ತು ಸರ್ಜಿಕಲ್ ಹೆಡ್ ಕವರ್‌ ಹಾಕಿಕೊಂಡಿರುವುದನ್ನು ಕಾಣಬಹುದು. ಮೇಜಿನ ಮೇಲೆ ತನ್ನ ಕಾಲನ್ನು ಇರಿಸಿ ಹರಿದ ಚಪ್ಪಲಿಯನ್ನು ಸರ್ಜಿಕಲ್ ಸೂಜಿ ಹಾಗೂ ದಾರದಿಂದ ಜಾಗರೂಕನಾಗಿ ಹೊಲಿಯುತ್ತಿರುವುದನ್ನು ಕಾಣಬಹುದು. ಅದರಲ್ಲಿಯೂ ಈತನು ತನ್ನ ಚಪ್ಪಲಿ ಹೊಲಿಯಲು ವೈದ್ಯಕೀಯ ಉಪಕರಣಗಳನ್ನು ಬಳಸಿದ್ದಾನೆ.

ಇದನ್ನೂ ಓದಿ
ಈ ಸ್ಪೆಷಲ್‌ ಎಳನೀರಿನ ಟೀಯನ್ನು ಯಾವತ್ತಾದ್ರೂ ಕುಡಿದಿದ್ದೀರಾ?
ಚೀನಾದಲ್ಲಿ ರಿಮೋಟ್ ಕಂಟ್ರೋಲ್ ಹಾಸಿಗೆ! ವಿಶೇಷತೆ ತಿಳಿದರೆ ಆಶ್ಚರ್ಯ ಆಗುತ್ತೆ
ನಮ್ಮ ಮೆಟ್ರೋದಲ್ಲಿ ಕುಳಿತು ವಿಮಲ್‌ ಪಾನ್‌ ಮಸಾಲಾ ಜಗಿದ ಪ್ರಯಾಣಿಕ
ಫೋನ್​ ಕಸಿದುಕೊಂಡ ಶಿಕ್ಷಕಿಯ ಜಡೆಹಿಡಿದು ಚಪ್ಪಲಿಯಲ್ಲಿ ಹೊಡೆದ ವಿದ್ಯಾರ್ಥಿನಿ

ಇದನ್ನೂ ಓದಿ : Viral : ಇದು ಕಲರ್ ಕಲರ್ ಫ್ರೂಟ್ ಐಸ್ ಗೋಲಾ, ನೋಡಿದ್ರೆ ಬಾಯಲ್ಲಿ ನೀರೂರುತ್ತೆ

ವೈರಲ್ ವಿಡಿಯೋ ಇಲ್ಲಿದೆ ನೋಡಿ

 

ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಏಳು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದಾರೆ. ಬಳಕೆದಾರರು ಈ ವಿಡಿಯೋ ನೋಡಿ ಆತಂಕ ವ್ಯಕ್ತಪಡಿಸಿದ್ದು, ಒಬ್ಬ ಬಳಕೆದಾರರು, ‘ಈ ಸೂಜಿಯನ್ನೇ ಶಸ್ತ್ರ ಚಿಕಿತ್ಸೆಗೆ ಬಳಸಿದರೆ ಏನಾಗುತ್ತದೆ ಎನ್ನುವ ಪ್ರಜ್ಞೆಯೂ ಈತನಿಗೆ ಇಲ್ಲವೇ, ಯಾವ ಉಪಕರಣಗಳನ್ನು ಯಾವ ಕೆಲಸಕ್ಕೆ ಬಳಸಬೇಕು ಎನ್ನುವುದು ತಿಳಿದಿರಬೇಕು’ ಎಂದಿದ್ದಾರೆ. ಮತ್ತೊಬ್ಬರು,’ಹರಿದ ಚಪ್ಪಲಿ ಹೊಲಿಯುವ ಮೂಲಕ ಸರ್ಜರಿ ಮಾಡುವುದಕ್ಕೆ ಪ್ರಾಕ್ಟೀಸ್ ಮಾಡುತ್ತಿರಬೇಕು’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊರ್ವ ಬಳಕೆದಾರರು, ‘ಇವರು ವೈದ್ಯರೇ ಚಮ್ಮಾರರೇ’ ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 4:36 pm, Sun, 27 April 25