Viral Video: ‘ಮಲ್ಲಿಪೂ’ ಹಾಡಿಗೆ ನರ್ತಿಸಿದ ಅಮ್ಮ ಮಗ; ನಿಮ್ಮ ಅಕ್ಕನೋ ಅಮ್ಮನೋ ಎನ್ನುತ್ತಿರುವ ನೆಟ್ಟಿಗರು

|

Updated on: Aug 11, 2023 | 11:45 AM

Mallipoo : ಅಕ್ಕನೊಂದಿಗೆ, ತಂಗಿಯೊಂದಿಗೆ, ಸ್ನೇಹಿತರೊಂದಿಗೆ, ಗೆಳತಿಯೊಂದಿಗೆ ಒಡಗೂಡಿ ನರ್ತಿಸುವುದು ಸರ್ವೇ ಸಾಮಾನ್ಯ. ಆದರೆ ಈಗಿನ ಕಾಲದ ಹಾಡಿಗೆ ಡ್ಯಾನ್ಸ್ ಮಾಡೋಣ ಎಂದು ಅಮ್ಮನನ್ನು ಮಗ ಕರೆದರೆ ಆಕೆ ಒಪ್ಪುತ್ತಾರೆಯೇ? ತಮಿಳಿನ ತಾಯಿಯೊಬ್ಬರು ಮಗನ ಮಾತಿಗೆ ಒಪ್ಪಿ ಹೆಜ್ಜೆ ಹಾಕಿದ್ದಾರೆ. ನೋಡಿ ಈ ವಿಡಿಯೋ!

Viral Video: ಮಲ್ಲಿಪೂ ಹಾಡಿಗೆ ನರ್ತಿಸಿದ ಅಮ್ಮ ಮಗ; ನಿಮ್ಮ ಅಕ್ಕನೋ ಅಮ್ಮನೋ ಎನ್ನುತ್ತಿರುವ ನೆಟ್ಟಿಗರು
ಮಲ್ಲಿಪೂ ಹಾಡಿಗೆ ಹೆಜ್ಜೆ ಹಾಕುತ್ತಿರುವ ಅಮ್ಮ ಮಗ
Follow us on

Mother Son : ನೃತ್ಯ ಎನ್ನುವುದು ಜೀವನೋಲ್ಲಾಸಕ್ಕೆ ಒಂದು ಮಾರ್ಗ. ಎಲ್ಲರೂ ವೃತ್ತಿಪರ ನೃತ್ಯಕಲಾವಿದರೇ ಆಗಬೇಕಿಲ್ಲ. ವೈಯಕ್ತಿಕ ಖುಷಿಗೆ ಯಾರೂ ಯಾವಾಗ ಬೇಕಾದರೂ ನರ್ತಿಸಬಹುದು. ಸಾಮಾಜಿಕ ಜಾಲತಾಣಗಳ ರೀಲಿಗರನ್ನು ಗಮನಿಸಿ. ತಾವಷ್ಟೇ ಅಲ್ಲ, ತಮ್ಮ ಪೋಷಕರನ್ನೂ ಸ್ಕ್ರೀನ್ ಮುಂದೆ ಕರೆತಂದು ನಿಲ್ಲಿಸುತ್ತಾರೆ. ನಿತ್ಯಜಂಜಡಗಳ ನಡುವೆ ಕಳೆದು ಹೋಗುವ ಅವರಿಗೆ ಖುಷಿಯಾಗಿರಲು ಹೀಗೂ ಒಂದು ಜಗತ್ತಿದೆ ಎನ್ನುವುದನ್ನು ತೋರಿಸುತ್ತಾರೆ. ಇದೀಗ ವೈರಲ್ (Viral) ಆಗಿರುವ ಈ ವಿಡಿಯೋ ನೋಡಿ. ಅಮ್ಮ ಮತ್ತು ಮಗ ‘ಮಲ್ಲಿಪೂ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

2022ರಲ್ಲಿ ಬಿಡುಗಡೆಯಾದ Vendhu Thanindhathu Kaadu ಸಿನೆಮಾದ ಮಲ್ಲಿಪೂ ಹಾಡನ್ನು ಎ.ಆರ್. ರೆಹಮಾನ್​ ಸಂಯೋಜಿಸಿದ್ದು ಮಧುಶ್ರೀ ಹಾಡಿದ್ದಾರೆ. ಇದೀಗ ಅಜಿತ್​ ಕುಮಾರ್ ಎನ್ನುವವರು ತಮ್ಮ ತಾಯಿಯೊಂದಿಗೆ ಟೆರೇಸ್ ಮೇಲೆ ನರ್ತಿಸಿ ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್ ಮಾಡಿದ್ದಾರೆ.

ಇದನ್ನೂ ಓದಿ : Viral Video: ಬೆಂಗಳೂರು; ಬೆಕ್ಕೇ ಬೆಕ್ಕೇ ಮುದ್ದಿನ ಮೂಟೆ ಅಮ್ಮನ ಬೆನ್ನೇರಿ ಹೊರಟಿಹೆ ಎಲ್ಲಿಗೆ?

ಕಳೆದ ಅಕ್ಟೋಬರ್​ನಲ್ಲಿ ಈ ಪೋಸ್ಟ್​ ಹಂಚಿಕೊಳ್ಳಲಾಗಿದ್ದು ಇದೀಗ ವೈರಲ್ ಆಗುತ್ತಿದೆ. ಈತನಕ 1 ಲಕ್ಷಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿ ಇವರಿಬ್ಬರ ಅಭಿನಯವನ್ನು ಮೆಚ್ಚಿದ್ದಾರೆ. ನೀವಿಬ್ಬರೂ ತುಂಬಾ ಮುದ್ದಾಗಿದ್ದೀರಿ, ನಿಮ್ಮ ತಾಯಿ ನಿಮ್ಮ ಅಕ್ಕನಂತೆ ಕಾಣುತ್ತಿದ್ದಾರೆ ಎಂದಿದ್ಧಾರೆ ಅನೇಕರು. ನೀವು ಅದ್ಭುತವಾಗಿ ನರ್ತಿಸಿದ್ದೀರಿ, ಮತ್ತಷ್ಟು ಹೊಸ ರಿಲ್​ಗಾಗಿ ಕಾಯುತ್ತಿದ್ದೆವೆ ಎಂದಿದ್ದಾರೆ ಕೆಲವರು.

ಇದನ್ನೂ ಓದಿ : Viral Brain Teaser: ಸ್ಮೆಲ್​ ಪದಗಳ ರಾಶಿಯಲ್ಲಿ ಸ್ವೆಲ್​ ಪದವೂ ಅಡಗಿದೆ, ಕಂಡುಹಿಡಿಯುವಿರೇ?

ಎಷ್ಟು ನಿರಾಯಾಸವಾಗಿ ನಿಮ್ಮ ತಾಯಿ ನಿಮ್ಮೊಂದಿಗೆ ನರ್ತಿಸಿದ್ದಾರೆ, ನೀವು ಅದೃಷ್ಟವಂತರು. ನನ್ನ ತಾಯಿ ತುಂಬಾ ಸಂಕೋಚದ ಸ್ವಭಾವದವರು, ಈ ವಿಡಿಯೋ ಅನ್ನು ನನ್ನ ತಾಯಿಗೆ ತೋರಿಸುತ್ತೇನೆ ಎಂದಿದ್ದಾರೆ ಒಬ್ಬರು. ಹೇಗಿದ್ದರೂ ನೀವು ನಟರು, ನಿಮ್ಮ ತಾಯಿಯೊಂದಿಗೆ ಸಿನೆಮಾ ಮಾಡಿ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಎರಡು ತಟ್ಟೆ ಅವಲಕ್ಕಿ; ಒಂದು ನಿಮ್ಮ ಕೋಣೆಯ ಗೋಡೆಗೆ ಇನ್ನೊಂದು ನಿಮ್ಮ ಹೊಟ್ಟೆಗೆ!

ಪ್ರತೀ ಕುಟುಂಬದಲ್ಲಿಯೂ ಪರಸ್ಪರ ಖುಷಿಯಾಗಿರಲು ಆಗಾಗ ಹೀಗೆ ಕುಣಿಯಬೇಕು, ಹಾಡಬೇಕು, ನಲಿಯಬೇಕು. ಮಕ್ಕಳು ಬೆಳೆದಂತೆ ಪೋಷಕರು ಅವರನ್ನು ಸ್ನೇಹಿತರಂತೆ ಕಾಣಬೇಕು. ಆಗಲೇ ಪರಸ್ಪರ ಗೌರವ, ಪ್ರೀತಿ ಉಳಿಯಲು ಸಾಧ್ಯ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ