ತಮ್ಮ ಮನೆಯ ಕಸವನ್ನು ತಂದು ಎಲ್ಲೆಂದರಲ್ಲಿ ಎಸೆದು ಹೋಗುವ ಲಜ್ಜೆಗೆಟ್ಟ ಜನರಿಗೇನು ನಮ್ಮ ದೇಶದಲ್ಲಿ ಕೊರತೆಯಿಲ್ಲ. ಹೌದು ಸ್ವಚ್ಛತೆಯ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಇಂದಿಗೂ ಅದೆಷ್ಟೋ ಜನರು ರಸ್ತೆ ಬದಿ ಸೇರಿದಂತೆ ಎಲ್ಲೆಂದರಲ್ಲಿ ಕಸ ಎಸೆಯುತ್ತಿರುತ್ತಾರೆ. ಇಂತಹವರಿಗೆ ತಕ್ಕ ಪಾಠ ಕಲಿಸಬೇಕು ಇನ್ನು ಮುಂದೆ ಎಲ್ಲೆಂದರಲ್ಲಿ ಕಸ ಎಸೆಯಬಾರದೆಂದು, ದಕ್ಷಿಣ ಕನ್ನಡ ಜಿಲ್ಲೆಯ ತೋಕೂರಿನ ಗ್ರಾಮಸ್ಥರು, ಬೀದಿ ಬದಿಯಲ್ಲಿ ಎಸೆದು ಹೋಗುವಂತಹ ಸ್ಥಳದಲ್ಲಿ “ನಿನ್ನ ಚಿತೆಗೆ ಬೆಂಕಿ ಹಚ್ಚಲು ಇಷ್ಟು ಕಸ ಸಾಲದು, ಇನ್ನಷ್ಟು ಕಸವನ್ನು ತಂದು ಇಲ್ಲಿ ಬಿಸಾಕು. ಕಸದ ಜೊತೆಗೆ ನಿನ್ನ ಪಿಂಡವನ್ನು ಕೂಡಾ ಬಿಡುತ್ತೇವೆ” ಎಂಬ ಬರಹವನ್ನು ಬರೆದಿರುವ ಬ್ಯಾನರ್ ಹಾಕುವ ಮೂಲಕ ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ತಕ್ಕ ಪಾಠ ಕಲಿಸಿದ್ದಾರೆ.
ಈ ವೈರಲ್ ವಿಡಿಯೋವನ್ನು ವೀರ ವಸಂತ್ ಕುಮಾರ್ ಕೋಟ್ಯಾನ್ (@veeer_kotian) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯಬಾರದೆಂದು ಬೀದಿ ಬದಿಯಲ್ಲಿ ಒಂದು ಬ್ಯಾನರ್ ಹಾಕಿ ಅದರಲ್ಲಿ ನಿನ್ನ ಚಿತೆಗೆ ಬೆಂಕಿ ಹಚ್ಚಲು ಇಷ್ಟು ಕಸ ಸಾಕಾಗುವುದಿಲ್ಲ, ಇನ್ನಷ್ಟು ಕಸವನ್ನು ತಂದು ಇಲ್ಲಿ ಸುರಿ, ಇಲ್ಲೇ ಈ ಕಸದ ಜೊತೆಗೆ ನಿನ್ನ ಪಿಂಡವನ್ನು ಬಿಡುತ್ತೇವೆ; ಭಾವಪೂರ್ಣ ಶ್ರದ್ಧಾಂಜಲಿ, ಇದು ಇಲ್ಲಿ ಕಸ ಬಿಸಾಡುವ ದಿವ್ಯ ಆತ್ಮಗಳಿಗೆ ಅರ್ಪಣೆ” ಎಂಬ ಬರಹವನ್ನು ಬರೆದಿರುವುದನ್ನು ಕಾಣಬಹುದು.
ಇದನ್ನೂ ಓದಿ: ಮಗನಿಗಾಗಿ ಉರುಳು ಸೇವೆ ಮೂಲಕ ಚಾಮುಂಡಿ ಬೆಟ್ಟ ಹತ್ತಿದ ವೃದ್ಧ ತಂದೆ
ನಾಲ್ಕು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.9 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಹೌದು ಕಸ ಎಸೆಯುವವರಿಗೆ ಇದೊಂದು ಒಳ್ಳೆಯ ಪಾಠ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ