ರೈಲಿನಲ್ಲಿ ಈ ಸಮಸ್ಯೆ ನಿಮಗೂ ಎದುರಾಗಿರಬಹುದು, ಈ ಕಿರಿಕಿರಿ ಬಗ್ಗೆ ಪ್ರಯಾಣಿಕರೊಬ್ಬರು ತಮ್ಮ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಭಾರತೀಯ ರೈಲ್ವೆಯ ಸ್ಲೀಪರ್ ಕೋಚ್‌ಗಳಲ್ಲಿ ಟಿಕೆಟ್ ಪಡೆಯದ ವ್ಯಕ್ತಿಗಳು ಬಂದು ಕಾಯ್ದಿರಿಸಿದ ಆಸನಗಳಲ್ಲಿ ಕುಳಿತುಕೊಂಡಿರುತ್ತಾರೆ. ಈ ಬಗ್ಗೆ ಎಕ್ಸ್ ಬಳಕೆದಾರರೊಬ್ಬರು ತಮ್ಮ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಭುಜ್-ಶಾಲಿಮಾರ್ ಎಕ್ಸ್‌ಪ್ರೆಸ್‌ನ ಕೋಚ್ S5 ನಲ್ಲಿ ಜನ ತುಂಬಿಕೊಂಡಿರುತ್ತಾರೆ. ಆದರೆ ಇದು ಕಾಯ್ದಿರಿಸಿದ ಬೋಗಿ, ಇದರಲ್ಲಿ ಟಿಕೆಟ್ ಪಡೆಯದ ವ್ಯಕ್ತಿಗಳು ಇರುತ್ತಾರೆ ಎಂದು ಹೇಳಿದ್ದಾರೆ.
ಅಹಮದಾಬಾದ್ ಜಂಕ್ಷನ್‌ನಿಂದ ರೈಲು ಹೊರಟ ನಂತರ ಈ ಸಮಸ್ಯೆ ಕಾಣಿಸಿಕೊಂಡಿದೆ. ಟಿಕೆಟ್ ಇಲ್ಲದ ಅಪರಿಚಿತ ವ್ಯಕ್ತಿಗಳು ತಮ್ಮ ಕಾಯ್ದಿರಿಸಿದ ಆಸನವನ್ನು ಆಕ್ರಮಿಸಿಕೊಂಡಿದ್ದರು. ಈ ಬೋಗಿಯಲ್ಲಿ ಜನ ತುಂಬಿಕೊಂಡಿತ್ತು. ಇದರಿಂದ ಅವರು ಕುಟುಂಬ ಕೂಡ ಈ ಸಮಸ್ಯೆಯನ್ನು ಅನುಭವಿಸಬೇಕಾದ ಸ್ಥಿತಿ ಬಂತು.
Sleeper coach, reserved s5, 22829 which departed from Ahmedabad a while ago. Without ticket People not moving and giving place to us with reserved ticket. Please help. Pnr number – 8413099794 @RailwaySeva @RailMinIndia @AshwiniVaishnaw pic.twitter.com/NUhTvKIXWP
— Babu Bhaiya (@Shahrcasm) March 26, 2024
ತಾನು ಅನುಭವಿಸಿದ ಸಂಕಷ್ಟದಲ್ಲಿ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿ ಭಾರತೀಯ ರೈಲ್ವೆ ಇಲಾಖೆಗೆ ಹಾಗೂ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಟ್ಯಾಗ್ ಮಾಡಲಾಗಿದೆ. ರೈಲ್ವೆಯ ಅಧಿಕೃತ ಗ್ರಾಹಕ ಸೇವಾ ಖಾತೆಯಾದ ರೈಲ್ವೇ ಸೇವಾ ಈ ಪೋಸ್ಟ್ಗೆ ಪ್ರತಿಕ್ರಿಯೆ ನೀಡಿದೆ. ಈ ಸಮಸ್ಯೆಯನ್ನು ಪರಿಹರಿಸಲು ಮತ್ತು ಪ್ರಯಾಣಿಕರ ಸುರಕ್ಷತೆ ಮತ್ತು ಸೌಕರ್ಯವನ್ನು ಸುಲಭಗೊಳಿಸುವ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದು ರೈಲ್ವೆ ಇಲಾಖೆ ಹೇಳಿದೆ.
ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ: ಆಯುಧಗಳ ಸ್ವಚ್ಛಗೊಳಿಸುತ್ತಿರುವಾಗ ಪ್ರಮಾದ, ಎಕೆ-47ನಿಂದ ಗುಂಡು ಹಾರಿಸಿಕೊಂಡ ಕಮಾಂಡರ್
ಆದರೆ ಜನರಿಗೆ ಈ ಬಗ್ಗೆ ಇನ್ನು ಮನವರಿಕೆಯಾಗಿಲ್ಲ. ಈ ಪೋಸ್ಟ್ನ್ನು 1.3 ಮಿಲಿಯನ್‌ಗಿಂತಲೂ ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆ. ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿರುವ ಪ್ರಯಾಣಿಕರಿಗೆ ಎಚ್ಚರಿಕೆಯನ್ನು ನೀಡಬೇಕು. ಹಾಗೂ ಈ ರೀತಿಯಲ್ಲಿ ಪ್ರಯಾಣಿಸುವುದು ಅಪಾಯಕ್ಕೆ ಕಾರಣವಾಗುತ್ತದೆ. ಇನ್ನು ಎಸಿ ಕಂಪಾರ್ಟ್ಮೆಂಟ್ನಲ್ಲೂ ಈ ಸಮಸ್ಯೆಗಳು ಉಂಟಾಗಿದೆ ಎಂದು ಎಕ್ಸ್ ಬಳಕೆದಾರರೂ, ಈ ಪೋಸ್ಟ್ಗೆ ಕಮೆಂಟ್ ಮಾಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ