
ಬದುಕು (life) ಒಂದಲ್ಲ ಒಂದು ಹೊಡೆತಗಳನ್ನು ನೀಡಬಹುದು. ಕೈ ತುಂಬಾ ದುಡ್ಡು ಇದ್ದು, ಒಂದೊಳ್ಳೆ ಬದುಕು ಕಟ್ಟಿಕೊಂಡ ವ್ಯಕ್ತಿ ಬೀದಿಗೆ ಬೀಳಬಹುದು. ಇದಕ್ಕೆ ನೈಜ ಉದಾಹರಣೆನೇ ಈ ವ್ಯಕ್ತಿ. ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿರುವ ಈ ವ್ಯಕ್ತಿ ತನ್ನ ಜೀವನದ ಕಥೆಯನ್ನು (life story) ಬಿಚ್ಚಿಟ್ಟಿರುವ ವಿಡಿಯೋ ನೆಟ್ಟಿಗರ ಕಣ್ಣನ್ನು ಒದ್ದೆಯಾಗಿಸಿದೆ.
ak.beats2 ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಭಿಕ್ಷೆ ಬೇಡುತ್ತಿದ್ದವನನ್ನು ಮಾತನಾಡಿಸುವ ಪ್ರಯತ್ನ ಮಾಡಿದ್ದಾನೆ. ಈ ವೇಳೆ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿ, ತಾನು ಎಂಬಿಎ ಸ್ಟೂಡೆಂಟ್ ಆಗಿದ್ದು, ತಿಂಗಳಿಗೆ 1 ಲಕ್ಷ ರೂ ಸಂಬಳ ಬರುವ ಉದ್ಯೋಗದಲ್ಲಿದ್ದೆ. ಆದರೆ ನನ್ನ ಹಣೆಬರಹ ಸರಿ ಇರಲಿಲ್ಲ. ನನ್ನ ಹೆಂಡ್ತಿ ಅನೈತಿಕ ಸಂಬಂಧ ಹೊಂದಿದ್ದಳು. ಆದರೆ ನನ್ನ ಮಗಳು ವಿಜಯವಾಡದಲ್ಲಿ ಎಂಬಿಬಿಎಸ್ ಡಾಕ್ಟರ್. ಆದರೆ ನಾನೀಗ ಭಿಕ್ಷುಕ ಎಂದು ಕಣ್ಣೀರು ಸುರಿಸಿದ್ದಾನೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
ಬದುಕು ಚಕ್ರದ ಹಾಗೆ, ಅಂದು ನಾನು 50 ಲಕ್ಷದ ಆಡಿ ಕಾರಿನಲ್ಲಿ ತಿರುಗಾಡುತ್ತಿದ್ದೆ, ಇಂದು ಫುಟ್ ಪಾತ್ ನಲ್ಲಿದ್ದೇನೆ. ನನಗೆ ತಿನ್ನಲು ಆಹಾರ ಇಲ್ಲ, ಬಟ್ಟೆಯಿಲ್ಲ, ದುಡ್ಡಿಲ್ಲ ಎಲ್ಲಾ ಹಣೆಬರಹ ಎನ್ನುವುದನ್ನು ಕಾಣಬಹುದು.
ಇದನ್ನೂ ಓದಿ:ಹಸಿವು ನೀಗಿಸಿ, ಬಟ್ಟೆ ಕೊಡಿಸಿ ವೃದ್ಧೆಯ ಪಾಲಿಗೆ ದೇವರಾದ ಯುವಕ
ಈ ವಿಡಿಯೋ ಇದುವೆರೆಗೆ ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ವಿದ್ಯೆ ಇದೆ, ದುಡಿದು ಒಂದೊಳ್ಳೆ ಬದುಕು ಕಟ್ಟಿಕೊಳ್ಳಿ ಎಂದಿದ್ದಾರೆ. ಇನ್ನೊಬ್ಬರು, ಬದುಕು ಎಲ್ಲರಿಗೂ ಒಂದೇ ರೀತಿ ಇರಲ್ಲ ಎಂದಿದ್ದಾರೆ. ಮತ್ತೊಬ್ಬರು, ಈ ವ್ಯಕ್ತಿ ಬದುಕಿನ ಕಥೆ ಕೇಳಿ ಕಣ್ಣಲ್ಲಿ ನೀರು ಬಂತು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ