
ಎಲ್ಲಾ ಮಕ್ಕಳ (children) ಬದುಕು ಒಂದೇ ರೀತಿ ಇರಲ್ಲ. ಕೇಳಿದ್ದನ್ನೆಲ್ಲ ಕೊಡಿಸುವ ಅಪ್ಪ ಅಮ್ಮನನ್ನು ಹೊಂದಿರುವ ಮಕ್ಕಳ ನಡುವೆ, ಕೆಲವು ಮಕ್ಕಳು ತಮ್ಮ ಓದಿನ ಜತೆಗೆ ಮನೆಯ ಜವಾಬ್ದಾರಿಗಳನ್ನು ನಿಭಾಯಿಸಿಕೊಂಡು ಹೋಗುತ್ತಾರೆ. ಇದೀಗ ವೈರಲ್ ಆಗಿರುವ ವಿಡಿಯೋ ಹೋರಾಟದ ಬದುಕಿನ ಸ್ಪಷ್ಟ ಚಿತ್ರಣವನ್ನು ತೆರೆದಿಟ್ಟಿದೆ. ಈ ಶಾಲಾ ಬಾಲಕಿಯ (school girl) ಬೆನ್ನ ಮೇಲೆ ಬ್ಯಾಗ್ ಜತೆಗೆ ಸಾವಿರ ಕನಸುಗಳು, ಆದರೆ ಮನೆಯ ಜವಾಬ್ದಾರಿಗಳು ಆಕೆಯ ತಲೆಯ ಮೇಲಿದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ. ಬ್ಯಾಗ್ ಹೆಗಲಿಗೇರಿಸಿಕೊಂಡು, ತಲೆಯ ಮೇಲೆ ಸಿಲಿಂಡರ್ ಹೊತ್ತು ಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಹುಡುಗಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ದೃಶ್ಯ ನೋಡಿ ನೆಟ್ಟಿಗರ ಕಣ್ಣು ತುಂಬಿ ಬಂದಿದೆ.
ದಿನೇಶ್ವರ ಪಾಟೇಲ್ (dineshwar_0673) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಈ ಬಾಲಕಿ ಶಿಕ್ಷಣದ ಬಗೆಗಿನ ಅವಳ ಸಮರ್ಪಣೆ ಹಾಗೂ ಕುಟುಂಬದ ಜವಾಬ್ದಾರಿಯನ್ನು ಹೇಗೆ ನಿಭಾಯಿಸುತ್ತಿದ್ದಾಳೆ ಎನ್ನುವುದನ್ನು ತೋರಿಸುತ್ತಿದೆ. ಈ ವಿಡಿಯೋದಲ್ಲಿ ರಸ್ತೆಯಲ್ಲಿ ಬೈಕ್ ಸವಾರರು, ಆಟೋಗಳು ಮತ್ತು ಪಾದಚಾರಿಗಳ ದೊಡ್ಡ ಜನಸಂದಣಿಯನ್ನು ಕಾಣಬಹುದು. ಆದರೆ ಶಾಲೆಗೆ ಹೊರಟಿರುವ ಈ ಹುಡುಗಿ ಬೆನ್ನಿಗೆ ಬ್ಯಾಗ್ ಹಾಕಿಕೊಂಡು ತಲೆಯ ಮೇಲೆ ಗ್ಯಾಸ್ ಸಿಲಿಂಡರ್ ಹೊತ್ತುಕೊಂಡು ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಇದು ಆಕೆಯು ತನ್ನ ದೈನಂದಿನ ಜೀವನದ ಹೋರಾಟಗಳಿಗೆ ಒಗ್ಗಿಕೊಂಡಿರುವುದನ್ನು ತೋರಿಸುತ್ತಿದೆ.
जिनको कंधो मे जिम्मेदारी होता है सब मोहमाया खत्म हो जाता है
चाहे लड़का हो या लड़की सबको अपना अपना घर का जिमेदारी निभाना पड़ता है pic.twitter.com/br3y0bgYZx
— dineshwar patel (@dineshwar_0673) December 7, 2025
ಇದನ್ನೂ ಓದಿ: ಅಜ್ಜಿಯನ್ನು ಸೈಕಲ್ ಮೇಲೆ ಕೂರಿಸಿಕೊಂಡು ಮುಗ್ಗರಿಸಿ ಬಿದ್ದ ಪುಟಾಣಿ
ಡಿಸೆಂಬರ್ 7 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಇದುವರೆಗೆ ಐವತ್ತಾರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಜವಾಬ್ದಾರಿಗೆ ವಯಸ್ಸಿನ ಮಿತಿಯಿಲ್ಲ ಎಂದಿದ್ದಾರೆ. ಇನ್ನೊಬ್ಬರು ಈ ಹುಡುಗಿಯ ಬಾಲ್ಯವೇ ಜವಾಬ್ದಾರಿಯೇ ಕಸಿದಿದೆ. ದೇವರು ಇಂತಹ ಕಷ್ಟಗಳನ್ನು ಯಾರಿಗೂ ನೀಡದಿರಲಿ ಎಂದಿದ್ದಾರೆ. ಮತ್ತೊಬ್ಬರು ಓದುವ ವಯಸ್ಸಿನಲ್ಲಿ ಜವಾಬ್ದಾರಿ ಹೊರಲು ಧೈರ್ಯ ಬೇಕು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:35 pm, Tue, 9 December 25