Video: ಮಹಿಳೆಯ ಕೈಯಲ್ಲಿನ ಗಾಯ ನೋಡಿ ಡಾಕ್ಟರ್‌ನಂತೆ ಚಿಕಿತ್ಸೆ ನೀಡಿದ ಮಂಗ
ನೀವು ಏನೇ ಹೇಳಿ, ಈ ಪ್ರಾಣಿಗಳಿಗೆ ಇರುವ ಬುದ್ಧಿ ಮನುಷ್ಯರಿಗಿಲ್ಲ. ಹೌದು, ಮನುಷ್ಯರಿಗಿಂತ ಪ್ರಾಣಿಗಳೇ ಲೇಸು ಎನ್ನುವುದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಮಹಿಳೆಯೊಬ್ಬಳ ಕೈಯಲ್ಲಾದ ಗಾಯ ನೋಡಿದ ಮಂಗವು ತಕ್ಷಣವೇ ಎಲೆಯಿಂದಲೇ ಗಾಯವನ್ನು ಮುಚ್ಚಿ ಚಿಕಿತ್ಸೆ ನೀಡಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ನಮ್ಮ ಹಿರಿಯರು ಹಿಂದೆಲ್ಲಾ ಸಣ್ಣ ಪುಟ್ಟ ಗಾಯವಾದರೆ ಪ್ರಕೃತಿಯಲ್ಲಿ ಸಿಗುವ ಎಲೆಗಳನ್ನೇ ಔಷಧವಾಗಿ ಬಳಸುತ್ತಿದ್ದರು. ಆದರೆ ಈಗ ಆಗಿಲ್ಲ, ಯಾವುದೇ ಗಾಯವಾಗಲಿ, ಅದನ್ನು ಶುಚಿಗೊಳಿಸಿ ಆಂಟಿಸೆಪ್ಟಿಕ್ ಕ್ರೀಂ ಹಚ್ಚಿ, ಬ್ಯಾಂಡೇಜ್ ಮಾಡುವುದನ್ನು ನೀವು ನೋಡಿರುತ್ತೀರಿ. ಮಹಿಳೆಯೊಬ್ಬಳ ಕೈಯಲ್ಲಾದ ಗಾಯ ನೋಡಿದ ಮಂಗವು (monkey) ತಕ್ಷಣವೇ ತನ್ನ ಬುದ್ಧಿಯನ್ನು ಉಪಯೋಗಿಸಿದೆ. ಈ ಕೋತಿಯೂ ಮಾಡಿದ ಕೆಲಸ ನೋಡಿದ್ರೆ ನೀವು ಶಾಕ್ ಆಗ್ತೀರಾ. ಈ ಪ್ರಾಣಿಯ ಬುದ್ಧಿವಂತಿಕೆಗೆ ಸಾಕ್ಷಿಯಾದ ಈ ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
smartanimalz ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಂಗನ ಬುದ್ಧಿವಂತಿಕೆಯನ್ನು ಕಾಣಬಹುದು. ಹೌದು, ಮಹಿಳೆಯೊಬ್ಬಳ ಕೈಗೆ ಸಣ್ಣ ಗಾಯವಾಗಿದ್ದು ರಕ್ತವು ಬರುತ್ತಿದೆ. ಇದನ್ನು ನೋಡಿದ ಮಂಗವು ಅಲ್ಲೇ ಇದ್ದ ಎಲೆಯನ್ನು ಕಿತ್ತು ಗಾಯದ ಮೇಲೆ ಇಟ್ಟು ಹೋಗಿರುವುದನ್ನು ನೋಡಬಹುದು. ಈ ಮಂಗ ಮಾಡುತ್ತಿದ್ದ ಕೆಲಸ ನೋಡಿ ಅಚ್ಚರಿಗೊಂಡ ಮಹಿಳೆ, ಮೂಕ ಪ್ರಾಣಿಗೆ ಧನ್ಯವಾದ ತಿಳಿಸಿರುವುದನ್ನು ನೀವು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಇದನ್ನೂ ಓದಿ:ಪುಟ್ಟ ಹುಡುಗಿಯನ್ನು ಜೋಪಾನವಾಗಿ ಶಾಲೆಗೆ ಬಿಟ್ಟು ಬರಲು ಹೊರಟ ಮರಿಯಾನೆ
ಈ ವಿಡಿಯೋ ಇಪ್ಪತ್ತು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇದು ನಿಜವೇ ಎಂದು ಕೇಳಿದ್ದಾರೆ. ಇನ್ನೊಬ್ಬರು, ಅದ್ಭುತವಾಗಿದೆ ಎಂದರೆ, ಮತ್ತೊಬ್ಬರು, ಈ ಮನುಷ್ಯರಿಗೆ ತಿಳಿಯದ ಅದೆಷ್ಟೋ ವಿಷ್ಯಗಳು ಪ್ರಾಣಿಗಳಿಗೆ ತಿಳಿದಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:22 pm, Tue, 9 December 25




