AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ಭಾರತದ ಅತ್ಯಂತ ನಿಧಾನವಾಗಿ ಚಲಿಸುವ ರೈಲು: ಸೈಕಲ್‌ಗಿಂತ ನಿಧಾನವಾಗಿ ಓಡುವ ಟ್ರೈನ್ ಎಲ್ಲಿದೆ ಗೊತ್ತಾ?

ಭಾರತದ ರೈಲ್ವೆ ವೇಗವಾಗಿ ಬೆಳೆಯುತ್ತಿದೆ. ಆದರೆ ಇಲ್ಲೊಂದು ರೈಲು ಇದಕ್ಕೆ ವಿರುದ್ಧವಾಗಿದೆ, ಇದು ಭಾರತದ ಅತ್ಯಂತ ನಿಧಾನವಾಗಿ ಚಲಿಸುವ ರೈಲು ಎಂದು ಹೇಳಲಾಗಿದೆ. ಇದನ್ನು ನೀಲಗಿರಿ ಪರ್ವತ ರೈಲು ಎಂದು ಕರೆಯುತ್ತಾರೆ. ಇದು ಮೆಟ್ಟುಪಾಳಯಂನಿಂದ ಊಟಿಗೆ ಹೋಗುವ ಪ್ರಯಾಣಿಸುವ ರೈಲು. ಇದು 5 ಗಂಟೆಗಳಲ್ಲಿ ಕೇವಲ 46 ಕಿ.ಮೀ. ಕ್ರಮಿಸುತ್ತದೆ. ಕಡಿದಾದ ಹಾದಿಗಳಿಗೆ ವಿಶೇಷ "ರ್ಯಾಕ್-ಅಂಡ್-ಪಿನಿಯನ್" ವ್ಯವಸ್ಥೆ ಬಳಸುತ್ತದೆ. ಇದು ವೇಗಕ್ಕಿಂತ ಸುರಕ್ಷತೆ ಮತ್ತು ಪ್ರಕೃತಿ ಸೌಂದರ್ಯವನ್ನು ಸವಿಯಲು ಅವಕಾಶವನ್ನು ನೀಡುತ್ತದೆ, ಹಸಿರು ಬೆಟ್ಟಗಳು, ಸುರಂಗಗಳು, ಚಹಾ ತೋಟಗಳ ಅದ್ಭುತ ನೋಟ ನೀಡುತ್ತದೆ.

ಇದು ಭಾರತದ ಅತ್ಯಂತ ನಿಧಾನವಾಗಿ ಚಲಿಸುವ ರೈಲು: ಸೈಕಲ್‌ಗಿಂತ ನಿಧಾನವಾಗಿ ಓಡುವ ಟ್ರೈನ್ ಎಲ್ಲಿದೆ ಗೊತ್ತಾ?
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Dec 09, 2025 | 3:59 PM

Share

ಭಾರತದ ರೈಲ್ವೆಯಲ್ಲಿ ಬಹಳ ಬದಲಾವಣೆಗಳು ಆಗಿವೆ. ವಂದೇ ಭಾರತ್​​​ ಎಕ್ಸ್​​ಪ್ರಸ್​​​ನಂತ ವೇಗವಾಗಿ ಚಲಿಸುವ ರೈಲು ಬಂದಿದೆ. ಪ್ರಸ್ತುತ ಬುಲೆಟ್​​​​ ಟ್ರೈನ್​​​ಗೂ ತಯಾರಿಯನ್ನು ಮಾಡಿಕೊಳ್ಳುತ್ತಿದೆ. ಇದರ ಮಧ್ಯೆ ಒಂದು ಅಚ್ಚರಿ ವಿಚಾರ ವೈರಲ್​​ ಆಗಿದೆ. ಇದು ಭಾರತದ ರೈಲು ವೇಗಕ್ಕೆ ವಿರುದ್ಧವಾಗಿದೆ. ಮೆಟ್ಟುಪಾಳಯಂನಿಂದ ಊಟಿಗೆ ಹೋಗುವ ನೀಲಗಿರಿ ಪರ್ವತ ರೈಲನ್ನು (Nilgiri Mountain Railway) ಭಾರತದ ಅತ್ಯಂತ ನಿಧಾನ ರೈಲು ಎಂದು ಕರೆಯಲಾಗುತ್ತದೆ. ಇದು 5 ಗಂಟೆಗಳಲ್ಲಿ ಕೇವಲ 46 ಕಿ.ಮೀ. ಪ್ರಯಾಣಿಸುತ್ತದೆ. ಸಮತಟ್ಟಾದ ರಸ್ತೆಗಳಲ್ಲಿನ ಸೈಕಲ್‌ಗಳಿಗಿಂತ ನಿಧಾನವಾಗಿರುತ್ತದೆ. ರೈಲು ಮಂಜಿನ ಬೆಟ್ಟಗಳು, ಚಹಾ ತೋಟಗಳು, ಸುರಂಗಗಳು, ಸೇತುವೆಗಳು ಮತ್ತು ಕಡಿದಾದ ಪರ್ವತ ವಕ್ರರೇಖೆಗಳ ಮೂಲಕ ಹಾದುಹೋಗುತ್ತದೆ.

ಒಂದು ರೈಲು 208 ತಿರುವುಗಳು, 16 ಸುರಂಗಗಳು ಮತ್ತು 250ಕ್ಕೂ ಹೆಚ್ಚು ಸೇತುವೆಗಳ ಮೂಲಕ ಹಾದುಹೋಗುತ್ತದೆ. ಜತೆಗೆ ಜನರಿಗೆ ಪರಿಸರ ಕಣ್ತುಂಬಿಕೊಳ್ಳಲು ಅವಕಾಶ ನೀಡುತ್ತದೆ. ಜನರು ಕೂಡ ಈ ಪ್ರಯಾಣವನ್ನು ತುಂಬಾ ಖುಷಿಯಿಂದ ಅನುಭವಿಸುತ್ತಾರೆ.

ಈ ರೈಲು ಏಕೆ ಇಷ್ಟೊಂದು ನಿಧಾನವಾಗಿ ಚಲಿಸುತ್ತದೆ?

ಈ ರೈಲು ಕಡಿದಾದ ಬೆಟ್ಟಗಳನ್ನು ಹತ್ತುತ್ತದೆ. ಬಯಲು ಪ್ರದೇಶದಿಂದ ಪರ್ವತಗಳವರೆಗೆ ಹಾಗೂ ಕಡಿದಾದ ಇಳಿಜಾರುಗಳನ್ನು ನಿರ್ವಹಿಸಲು ಈ ಹಳಿಯು ವಿಶೇಷ “ರ್ಯಾಕ್-ಅಂಡ್-ಪಿನಿಯನ್” ವ್ಯವಸ್ಥೆಯನ್ನು ಬಳಸುತ್ತದೆ. ಇದು ರೈಲು ಸುರಕ್ಷಿತವಾಗಿ ಹತ್ತಲು ಹಾಗೂ ನಿಧಾನವಾಗಿ ಚಲಿಸಲು ಸಹಾಯ ಮಾಡುತ್ತದೆ. ಈ ರೈಲು ಸಂಚಾರಿಸುವ ಮಾರ್ಗಗಳಲ್ಲಿ ನೂರಾರು ತಿರುವುಗಳು ಮತ್ತು ಅನೇಕ ಸುರಂಗಗಳು ಮತ್ತು ಸೇತುವೆಗಳಿವೆ. ಇದು 46 ಕಿಮೀ ಮಾರ್ಗವನ್ನು ತಲುಪಲು 5 ಗಂಟೆ ತೆಗೆದುಕೊಳ್ಳುತ್ತದೆ. ಇದು ವೇಗಕ್ಕಿಂತ ಎಚ್ಚರಿಕೆಗೆ ಹೆಚ್ಚು ಆದ್ಯತೆ ನೀಡುತ್ತದೆ.

ಇದನ್ನೂ ಓದಿ: ಇದು ವಿಶ್ವದ ಅತಿ ಉದ್ದದ ರಸ್ತೆ: 14 ದೇಶಗಳನ್ನು ಹಾದುಹೋಗುವ ಈ ರಸ್ತೆಗೆ ಒಂದೇ ಒಂದು ಯು-ಟರ್ನ್ ಇಲ್ಲ!

ಅನೇಕ ಪ್ರಯಾಣಿಕರು ಪ್ರಯಾಣವೇ ಮುಖ್ಯ, ವೇಗವಲ್ಲ ಎಂದು ಹೇಳುತ್ತಾರೆ. ಈ ರೈಲು ಬೆಟ್ಟವನ್ನು ಹತ್ತುವುದು ಮಾತ್ರವಲ್ಲ, ನಮಗೆ ಪರಿಸರದ ಸೌಂದರ್ಯವನ್ನು ಪರಿಚಯಿಸುತ್ತದೆ. ಪರಿಸರದ ನೋಟಗಳು, ಮಂಜು, ಚಹಾ ತೋಟಗಳು ಮತ್ತು ಕಾಡಿನ ಗಾಳಿಯನ್ನು ಆನಂದಿಸುವಂತೆ ಮಾಡುತ್ತದೆ. ರೈಲಿನ ಕಿಟಕಿಗಳಿಂದ ಹಚ್ಚ ಹಸಿರಿನ ಬೆಟ್ಟಗಳು, ಕಣಿವೆಗಳು, ಮೋಡಗಳು ಮತ್ತು ತಂಪಾದ ಪರ್ವತ ಗಾಳಿಯನ್ನು ಆನಂದಿಸಬಹುದು. ಒತ್ತಡದಿಂದ ದೂರು ಇರಲು ಈ ರೈಲು ಪಯಾಣ ತುಂಬಾ ಉತ್ತಮ ಎಂದು ಪ್ರವಾಸಿಗರು ಹೇಳುತ್ತಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ