AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ವಿಶ್ವದ ಅತಿ ಉದ್ದದ ರಸ್ತೆ: 14 ದೇಶಗಳನ್ನು ಹಾದುಹೋಗುವ ಈ ರಸ್ತೆಗೆ ಒಂದೇ ಒಂದು ಯು-ಟರ್ನ್ ಇಲ್ಲ!

ವಿಶ್ವದ ಅತಿ ಉದ್ದದ ರಸ್ತೆಯಾದ ಪ್ಯಾನ್-ಅಮೆರಿಕನ್ ಹೆದ್ದಾರಿಯು 30,000 ಕಿ.ಮೀ ಉದ್ದವಿದೆ. ಇದು ಅಲಾಸ್ಕಾದಿಂದ ಅರ್ಜೆಂಟೀನಾ ವರೆಗೆ 14 ದೇಶಗಳನ್ನು ಸಂಪರ್ಕಿಸುತ್ತದೆ. ವಿಶೇಷವೆಂದರೆ, ಇದರಲ್ಲಿ ಒಂದೂ ಯು-ಟರ್ನ್ ಇಲ್ಲ! ಪ್ರವಾಸೋದ್ಯಮ ಉತ್ತೇಜಿಸಲು 1920ರ ದಶಕದಲ್ಲಿ ನಿರ್ಮಿಸಲಾದ ಈ ಹೆದ್ದಾರಿಯು ಪ್ರಪಂಚದಾದ್ಯಂತ ರಸ್ತೆ ಪ್ರಯಾಣಿಕರಿಗೆ ಅದ್ಭುತ ಅನುಭವ ನೀಡುತ್ತದೆ. ಇದರ ನಿರ್ವಹಣೆಯನ್ನು ಎಲ್ಲಾ 14 ರಾಷ್ಟ್ರಗಳು ಹಂಚಿಕೊಳ್ಳುತ್ತವೆ.

ಇದು ವಿಶ್ವದ ಅತಿ ಉದ್ದದ ರಸ್ತೆ: 14 ದೇಶಗಳನ್ನು ಹಾದುಹೋಗುವ ಈ ರಸ್ತೆಗೆ ಒಂದೇ ಒಂದು ಯು-ಟರ್ನ್ ಇಲ್ಲ!
ಪ್ಯಾನ್ ಅಮೆರಿಕನ್ ಹೆದ್ದಾರಿ
ಅಕ್ಷಯ್​ ಪಲ್ಲಮಜಲು​​
|

Updated on: Dec 09, 2025 | 12:42 PM

Share

ವಿಶ್ವದ ಅತಿ ಉದ್ದವಾದ ಹೆದ್ದಾರಿಯನ್ನು ನೀವು ನೋಡಿರಬಹುದು, ಏಕೆಂದರೆ ಭಾರತ ಕೂಡ ವಿಶ್ವದ ಉದ್ದವಾದ ಹೆದ್ದಾರಿಯನ್ನು ಹೊಂದಿದೆ. ಆದರೆ ಪ್ಯಾನ್-ಅಮೇರಿಕನ್ ಹೆದ್ದಾರಿಗೆ (Pan-American Highway) ಹೋಲಿಸಿದರೆ ಇದು ಚಿಕ್ಕದೆ. ಹಾಗೂ ಈ ಪ್ಯಾನ್-ಅಮೇರಿಕನ್ ಹೆದ್ದಾರಿ ವಿಭಿನ್ನ ವಿಶೇಷತೆಗಳನ್ನು ಒಳಗೊಂಡಿದೆ. ಈ ಹೆದ್ದಾರಿ 14 ದೇಶಗಳ ಮೂಲಕ ಹಾದುಹೋಗುತ್ತದೆ. 30,000 ಕಿಲೋಮೀಟರ್ (ಸುಮಾರು 19,000 ಮೈಲುಗಳು) ಉದ್ದವನ್ನು ಹೊಂದಿದೆ. 30,000 ಕಿ.ಮೀ ಉದ್ದದ ಪ್ಯಾನ್-ಅಮೆರಿಕನ್ ಹೆದ್ದಾರಿಯು ಉತ್ತರ ಅಮೆರಿಕದ ಉತ್ತರದ ತುದಿಯಲ್ಲಿರುವ ಅಲಾಸ್ಕಾದ ಪ್ರುಧೋ ಕೊಲ್ಲಿಯಿಂದ ಪ್ರಾರಂಭವಾಗಿ, ದಕ್ಷಿಣ ಅಮೆರಿಕದ ದಕ್ಷಿಣ ತುದಿಯಾದ ಅರ್ಜೆಂಟೀನಾದ ಉಶುವಾಯಾದಲ್ಲಿ ಕೊನೆಗೊಳ್ಳುತ್ತದೆ.

ಪ್ಯಾನ್-ಅಮೇರಿಕನ್ ಹೆದ್ದಾರಿಯಲ್ಲಿ ಯು-ಟರ್ನ್ ಇಲ್ಲ:

ಪ್ಯಾನ್-ಅಮೇರಿಕನ್ ಹೆದ್ದಾರಿ ನೇರ ರಸ್ತೆ ಆಗಿದ್ದು, ಆರಂಭದಿಂದ ಕೊನೆಯವರೆಗೆ ಒಂದೇ ಒಂದು ಯು-ಟರ್ನ್ ಅಥವಾ ಯಾವುದೇ ತಿರುವುಗಳನ್ನು ಹೊಂದಿರುವುದಿಲ್ಲ. ರಸ್ತೆಯು ಸರಿಸುಮಾರು 30,600 ಕಿಲೋಮೀಟರ್ (19,000 ಮೈಲುಗಳು) ಉದ್ದವಾಗಿದ್ದು, ಇದು ವಿಶ್ವ ಅತಿ ಉದ್ದವಾದ ಹೆದ್ದಾರಿ ಎಂದು ಹೇಳಲಾಗಿದೆ. ಪ್ಯಾನ್-ಅಮೆರಿಕನ್ ಹೆದ್ದಾರಿಯ ಒಂದು ತುದಿಯಿಂದ ಇನ್ನೊಂದು ತುದಿಗೆ ಪ್ರಯಾಣಿಸಲು ಸರಿಸುಮಾರು 60 ದಿನಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ಈ ಹೆದ್ದಾರಿ ಯಾವೆಲ್ಲ ದೇಶಗಳನ್ನು ಸಂಪರ್ಕಿಸುತ್ತದೆ?

ಪ್ಯಾನ್-ಅಮೆರಿಕನ್ ಹೆದ್ದಾರಿಯು ಅಮೆರಿಕದ 14 ದೇಶಗಳ ಮೂಲಕ ಹಾದುಹೋಗುತ್ತದೆ. ಕೆನಡಾ, ಯುನೈಟೆಡ್ ಸ್ಟೇಟ್ಸ್, ಮೆಕ್ಸಿಕೊ, ಗ್ವಾಟೆಮಾಲಾ, ಎಲ್ ಸಾಲ್ವಡಾರ್, ಹೊಂಡುರಾಸ್, ನಿಕರಾಗುವಾ, ಕೋಸ್ಟರಿಕಾ, ಪನಾಮ, ಕೊಲಂಬಿಯಾ, ಈಕ್ವೆಡಾರ್, ಪೆರು, ಚಿಲಿ ಮತ್ತು ಅರ್ಜೆಂಟೀನಾ. ಪ್ಯಾನ್-ಅಮೆರಿಕನ್ ಹೆದ್ದಾರಿಯ ನಿರ್ವಹಣೆಯ ಜವಾಬ್ದಾರಿಯನ್ನು ಎಲ್ಲಾ 14 ರಾಷ್ಟ್ರಗಳು ಹಂಚಿಕೊಳ್ಳುತ್ತವೆ.

ಇದನ್ನೂ ಓದಿ: ಬೆಂಗಳೂರಲ್ಲಿ 2.2 ಕೋಟಿ ರೂ. ಮೌಲ್ಯದ ಮನೆ ಖರೀದಿಸ್ಬೇಕು: ಆದರೆ ಧೈರ್ಯ ಸಾಕಾಗ್ತಿಲ್ಲ, ಏನ್ಮಾಡ್ಲಿ?

ಇದರ ನಿರ್ಮಾಣ ಯಾವಾಗ?

ಅಮೆರಿಕದ ವಿವಿಧ ರಾಷ್ಟ್ರಗಳಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ 1920 ರ ದಶಕದಲ್ಲಿ ಪ್ಯಾನ್-ಅಮೆರಿಕನ್ ಹೆದ್ದಾರಿಯನ್ನು ನಿರ್ಮಿಸಲಾಯಿತು. ಹೆದ್ದಾರಿಯ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ 1937 ರಲ್ಲಿ ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊ ಸೇರಿದಂತೆ 14 ದೇಶಗಳು ಒಪ್ಪಂದಕ್ಕೆ ಸಹಿ ಹಾಕಿದವು. ಹೆದ್ದಾರಿಯನ್ನು 1960 ರಲ್ಲಿ ಸಂಚಾರಕ್ಕೆ ಸಂಪೂರ್ಣವಾಗಿ ತೆರೆಯಲಾಯಿತು.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ