ಜಪಾನ್​ನಲ್ಲಿ ಬೇಸ್ ಬಾಲ್ ಆಟಕ್ಕೆ ಪ್ರೇಕ್ಷಕರಾಗಿ ಕುಳಿತು ಹುರಿದುಂಬಿಸಿದ 100 ರೋಬೋಟ್​ಗಳು; ಏನಿದು ಅಚ್ಚರಿ?

| Updated By: shivaprasad.hs

Updated on: Oct 04, 2021 | 2:56 PM

ರೋಬೋ ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರಗಳಿಗೆ ಹೆಸರಾಗಿರುವ ಜಪಾನ್ ಮತ್ತೊಂದು ದಾಖಲೆ ಬರೆದಿದೆ. ಬೇಸ್​ ಬಾಲ್ ಗೇಮ್ ಸಂದರ್ಭದಲ್ಲಿ ಆಟಗಾರರನ್ನು ಹುರಿದುಂಬಿಸಲು 100 ರೋಬೋಗಳನ್ನು ಬಳಸಿದ್ದಾರೆ. ಈ ಕುರಿತು ಕುತೂಹಲಕರ ವರದಿ ಇಲ್ಲಿದೆ.

ಜಪಾನ್​ನಲ್ಲಿ ಬೇಸ್ ಬಾಲ್ ಆಟಕ್ಕೆ ಪ್ರೇಕ್ಷಕರಾಗಿ ಕುಳಿತು ಹುರಿದುಂಬಿಸಿದ 100 ರೋಬೋಟ್​ಗಳು; ಏನಿದು ಅಚ್ಚರಿ?
ರೋಬೋಟ್​ಗಳು ಒಟ್ಟಾಗಿ ಹುರಿದುಂಬಿಸುತ್ತಿರುವ ದೃಶ್ಯ
Follow us on

ಜಪಾನ್​ನಲ್ಲಿ ತಂತ್ರಜ್ಞಾನಗಳು ಬಹಳ ಮುಂದುವರೆದಿದೆ.ಅದರಲ್ಲೂ ರೋಬೋಟ್ ಟೆಕ್ನಾಲಜಿಯಲ್ಲಿ ಅವರು ಹೊಸ ಹೊಸ ಆವಿಷ್ಕಾರಗಳನ್ನು ನಡೆಸುತ್ತಲೇ ಇರುತ್ತಾರೆ. ಮನೆ, ಹೋಟೆಲ್ ಮುಂತಾದೆಡೆ ಈಗಾಗಲೇ ಅಲ್ಲಿ ರೋಬೋಗಳು ಕಾಣಸಿಗುತ್ತವೆ ಎಂಬುದನ್ನೂ ನಾವು ಕೇಳಿದ್ದೇವೆ. ಈಗ ಹೊಸದೊಂದು ಸುದ್ದಿ ಬಂದಿದೆ. 100 ರೋಬೋಟ್​ಗಳ ತಂಡವೊಂದು ಸಾಲಾಗಿ ನಿಂತುಕೊಂಡು ಆಟಗಾರರಿಗೆ ಸಪೋರ್ಟ್ ಮಾಡುತ್ತಿವೆ. ಈ ವಿಡಿಯೊ ಸದ್ಯ ವೈರಲ್ ಆಗಿದ್ದು, ಕೊರೊನಾ ಸಾಂಕ್ರಮಿಕದ ಸಂದರ್ಭದಲ್ಲಿ ಆಟಗಾರರನ್ನು ಹುರಿದುಂಬಿಸಲು ಹೊಸ ಪ್ರಯತ್ನವಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್​​ನ ಅಧಿಕೃತ ಇನ್ಸ್ಟಾಗ್ರಾಂ ಪೇಜ್​ನಲ್ಲಿ ಈ ವಿಡಿಯೊ ಹಂಚಿಕೊಳ್ಳಲಾಗಿದೆ. ಇತ್ತೀಚೆಗೆ ನಡೆದ ಬೆಸ್​ಬಾಲ್ ಪಂದ್ಯಾವಳಿಯೊಂದರ ಸಂದರ್ಭದಲ್ಲಿ 100 ಪೆಪ್ಪರ್ ಹ್ಯೂಮನಾಯಿಡ್ ರೊಬೋಟ್​​ಗಳ ತಂಡವನ್ನು ಮೈದಾನದಲ್ಲಿ ಆಟಗಾರರನ್ನು ಹುರಿದುಂಬಿಸಲು ಬಳಸಲಾಯಿತಂತೆ. ಇದು ಗಿನ್ನೆಸ್ ದಾಖಲೆಯ ಪಟ್ಟಿಗೂ ಸೇರಿದೆ. ರೋಬೋಟ್​ಗಳು ಹುರಿದುಂಬಿಸುವ ವಿಡಿಯೊ ತುಣುಕೊಂದನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಪೇಜ್​ನಲ್ಲಿ ಹಂಚಿಕೊಳ್ಳಲಾಗಿದೆ.

ವಿಡಿಯೊ ಇಲ್ಲಿದೆ:

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೊ ಈಗಾಗಲೇ ಸಾಕಷ್ಟು ವೀಕ್ಷಣೆ ಗಳಿಸಿದ್ದು, ನೆಟ್ಟಿಗರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಇದಕ್ಕೆ ಬಳಕೆದಾರರು ಹಲವು ವಿಧದಲ್ಲಿ ಕಾಮೆಂಟ್ ಮಾಡುತ್ತಿದ್ದು, ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಓರ್ವರು, ‘ಮೊದಲಿಗೆ ಇದು ಬಹಳ ವಿಚಿತ್ರವಾಗಿ ಕಂಡಿತು’ ಎಂದು ಬರೆದಿದ್ದರೆ, ಮತ್ತೋರ್ವರು, ‘ಮ್ಯಾಟ್ರಿಕ್ಸ್ ಪ್ರಾರಂಭವಾಗಿದ್ದೇ ಹೀಗೆ’ ಎಂದು ತಮಾಷೆ ಮಾಡಿದ್ದಾರೆ.

ಕೊರೊನಾ ಕಾರಣದಿಂದಾಗಿ ಆಟಗಾರರ ಹಿತದೃಷ್ಟಿಯಿಂದ ಜಗತ್ತಿನೆಲ್ಲೆಡೆ ಸೀಮಿತ ಪ್ರೇಕ್ಷಕರು ಅಥವಾ ಪ್ರೇಕ್ಷಕರಿಲ್ಲದೆಯೇ ಆಟಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಆಟಗಾರರನ್ನು ಹುರಿದುಂಬಿಸಲು ಜಪಾನ್​ನಲ್ಲಿ ಈ ತಂತ್ರಜ್ಞಾನದ ಮೊರೆ ಹೋಗಿರಬಹುದು. ಇದು ಕ್ರೀಡಾ ಕ್ಷೇತ್ರದಲ್ಲಿ ಹೊಸ ಸಾಧ್ಯತೆಯನ್ನು ತೆರೆಯುವ ಸಾಧ್ಯತೆ ಇದೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಇದನ್ನೂ ಓದಿ:

ಮಲ್ಪೆ ಬಂದರಿನಲ್ಲಿ ಅಪರೂಪದ ಮೀನು ಪತ್ತೆ; ನೆಮ್ಮೀನ್​ಗೆ ಕೇರಳದಲ್ಲಿ ಭಾರೀ ಬೇಡಿಕೆ!

Airtel: ನೀವು ಏರ್ಟೆಲ್ ಸಿಮ್ ಉಪಯೋಗಿಸುತ್ತಿದ್ದಲ್ಲಿ ಒಮ್ಮೆ ಈ ಆಫರ್​ಗಳನ್ನು ಚೆಕ್ ಮಾಡಿ

ವಿಜಯನಗರ: ಕಲುಷಿತ ನೀರು ಸೇವನೆಯಿಂದ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆ; ಸ್ಪಂದಿಸದ ಜಿಲ್ಲಾಡಳಿತದ ವಿರುದ್ಧ ಜನರ ಆಕ್ರೋಶ