ಮಹಾಯುದ್ಧಗಳು ಆರಂಭವಾದ ದಿನಾಂಕಗಳ ನಡುವಿನ ವಿಚಿತ್ರ ಹೋಲಿಕೆ: ವೈರಲ್​ ಆಯ್ತು ಹೊಸ ಗಣಿತ ಸೂತ್ರ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 11, 2022 | 11:44 AM

ನನಗೆ ಈ ದಿನಾಂಕಗಳು ಗಣಿತ ಸೂತ್ರದಂತೆ ಕಂಡಿದ್ದು, ಎಲ್ಲವೂ ವಿಚಿತ್ರವಾಗಿದೆ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಈ ಟ್ವಿಟರ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಮಹಾಯುದ್ಧಗಳು ಆರಂಭವಾದ ದಿನಾಂಕಗಳ ನಡುವಿನ ವಿಚಿತ್ರ ಹೋಲಿಕೆ: ವೈರಲ್​ ಆಯ್ತು ಹೊಸ ಗಣಿತ ಸೂತ್ರ
ಹೊಸ ಗಣಿತ ಸೂತ್ರ
Follow us on

ಉಕ್ರೇನ್ ಮತ್ತು ರಷ್ಯಾ (Russia Ukraine War)  ನಡೆವೆ ಯುದ್ಧ ಆರಂಭವಾಗಿ ಇಂದಿಗೆ 16ನೇ ದಿನವಾಗಿದೆ. ರಷ್ಯಾ ಸೇನೆ ಉಕ್ರೇನ್ ಮೇಲೆ ಭೀಕರ ಯುದ್ಧ ಮುಂದುವರೆಸಿದೆ.  ಪ್ಯಾಟ್ರಿಕ್ ಬೆಟ್ ಡೇವಿಡ್ ಎನ್ನುವ ಟ್ವಿಟರ್ ಬಳಕೆದಾರರೊಬ್ಬರು ಮೊದಲ ಮಹಾಯುದ್ಧ, ಎರಡನೇ ಮಹಾಯುದ್ಧ ಮತ್ತು ಇವಾಗ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭದ ದಿನಾಂಕಗಳ ನಡುವಿನ ವಿಲಕ್ಷಣವಾದ ಹೋಲಿಕೆಯನ್ನು ಗುರುತಿಸಿದ್ದಾರೆ. ಹೌದು. ಜುಲೈ 28, 1914 ರಂದು, ಆಸ್ಟ್ರಿಯಾ-ಹಂಗೇರಿ ಸೆರ್ಬಿಯಾದ ಮೇಲೆ ಮೊದಲ ವಿಶ್ವ ಯುದ್ಧ ಪ್ರಾರಂಭಿಸಲಾಗಿತ್ತು. ಪ್ಯಾಟ್ರಿಕ್ 7, 28, 19, 14ನ್ನು ಒಟ್ಟುಗೂಡಿಸಿದಾಗ ಅದರ ಫಲಿತಾಂಶವು 68 ಆಗಿತ್ತು. ನಂತರ ಅವರು ಸೆಪ್ಟೆಂಬರ್ 1, 1939 ಎರಡನೇ ವಿಶ್ವ ಯುದ್ಧ ಆರಂಭದ ದಿನಾಂಕವನ್ನು ತೆಗೆದುಕೊಂಡರು. ಆ ದಿನಾಂಕವು ಕೂಡ 68ರ ಸಂಖ್ಯೆಯನ್ನು ಹೋಲಿತು. ತದ ನಂತರ ಅವರು ಇವಾಗ ನಡೆಯುತ್ತಿರುವ ರಷ್ಯಾ ಮತ್ತು ಉಕ್ರೇನ್ ಸಮರ ಆರಂಭವಾದ ದಿನಾಂಕವನ್ನು (ಫೆಬ್ರವರಿ 24, 2022. ಮತ್ತು 24+2+20+22 = 68) ಪರಿಶಿಲಿಸಿದ್ದಾರೆ. ಅಚ್ಚರಿಯ ವಿಷಯವೆಂದರೇ ಅದು ಕೂಡ 68 ಬಂದಿದೆ.

ನನಗೆ ಈ ದಿನಾಂಕಗಳು ಗಣಿತ ಸೂತ್ರದಂತೆ ಕಂಡಿದ್ದು, ಎಲ್ಲವೂ ವಿಚಿತ್ರವಾಗಿದೆ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಈ ಟ್ವಿಟರ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇಲ್ಲಿಯವರೆಗೂ 11 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳು ಮತ್ತು 3 ಸಾವಿರಕ್ಕೂ ಹೆಚ್ಚು ರಿಟ್ವೀಟ್​ಗಳು ಬಂದಿವೆ.

ಗಣಿತದಲ್ಲಿ 68 ಪೆರಿನ್ ಸಂಖ್ಯೆಯಾಗಿದೆ. ಇದು ನಿಖರವಾಗಿ ಎರಡು ವಿಭಿನ್ನ ರೀತಿಯಲ್ಲಿ ಎರಡು ಅವಿಭಾಜ್ಯಗಳ ಮೊತ್ತವಾಗಲು ತಿಳಿದಿರುವ ಅತಿದೊಡ್ಡ ಸಂಖ್ಯೆಯಾಗಿದೆ. 68 = 7 + 61 = 31 + 37. ಪ್ರಪಂಚವು ಗಣಿತದ ಮಾದರಿಗಳಲ್ಲಿ ಚಲಿಸುತ್ತದೆ. ಮುನ್ಸೂಚಕ ವಿಶ್ಲೇಷಣೆ ಎಲ್ಲಾ ಗಣಿತದ ಮಾದರಿಗಳಾಗಿವೆ. ಆದ್ದರಿಂದ ನೀವು ಹಂಚಿಕೊಂಡಿದ್ದು ಮೌಲ್ಯಯುತವಾಗಿದೆ ಎಂದು ಟ್ವೀಟ್​ ಬಳಕೆದಾರರೊಬ್ಬರು ಹೇಳಿದ್ದಾರೆ. ಮತ್ತೊಂಬ್ಬ ಟ್ವೀಟ್​ ಬಳಕೆದಾರ ಜನರು ಇದನ್ನು ಭವಿಷ್ಯವಾಣಿಯಂದು ನಂಬುವುದನ್ನು ನಾನು ದ್ವೇಷಿಸುತ್ತೇನೆ. ಆದರೆ ಈ ರೀತಿಯಾಗಿ ಸಂಭವಿಸುವುದು ತುಂಬಾ ಕಡಿಮೆ ಎಂದಿದ್ದಾರೆ. ಮತ್ತೊಬ್ಬರು ಇದಕ್ಕೆ ಏನಾದರೂ ಅರ್ಥವಿಸದೆಯೇ? ಇಲ್ಲ. ಆದರೂ ಇದು ಆಸಕ್ತಿದಾಯಕವಾಗಿದೆ ಎಂದು ರಿಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:

‘ರಾಧೆ ಶ್ಯಾಮ್’ ವಿಮರ್ಶೆ​: ಭವಿಷ್ಯ ಹೇಳುವ ವ್ಯಕ್ತಿಯ ಕೈಯಲ್ಲಿ ಇಲ್ಲ ಮನರಂಜನೆಯ ರೇಖೆ

ರಕ್ಷಿತಾ-ಪ್ರೇಮ್​ ದಾಂಪತ್ಯಕ್ಕೆ 15 ವರ್ಷ; ‘ಹೆಂಗೆ ಕಳೆದೆ ಅಂತ ಯೋಚನೆ ಮಾಡ್ತಾ ಇದೀನಿ’ ಅಂದ್ರು ರಕ್ಷಿತಾ