ಮಂಡ್ಯ: ಪಾಲಿಶ್ ಅಕ್ಕಿ ಬಳಿಕ ನಕಲಿ ಗೊಬ್ಬರ ದಂಧೆ ಬೆಳಕಿಗೆ; ಸಾವಯವ ಗೊಬ್ಬರ ಹೆಸರಲ್ಲಿ ರೈತರಿಗೆ ದೋಖಾ

ಕೃಷಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ಜಂಟಿ ದಾಳಿ ವೇಳೆ 500ಕ್ಕೂ ಹೆಚ್ಚು ಚೀಲ ಗೊಬ್ಬರ, 1 ಲಾರಿ ಜಪ್ತಿ ಮಾಡಲಾಗಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೊಲ್ಲರದೊಡ್ಡಿ ಬಳಿಯ ನಕಲಿ ಗೊಬ್ಬರ ತಯಾರಿಕಾ ಘಟಕದಲ್ಲಿ ಘಟನೆ ನಡೆದಿದೆ. ನಕಲಿ ಗೊಬ್ಬರ ತಯಾರಿಸುತ್ತಿದ್ದ ಆರೋಪಿಗಳು ಪರಾರಿ ಆಗಿದ್ದಾರೆ.

ಮಂಡ್ಯ: ಪಾಲಿಶ್ ಅಕ್ಕಿ ಬಳಿಕ ನಕಲಿ ಗೊಬ್ಬರ ದಂಧೆ ಬೆಳಕಿಗೆ; ಸಾವಯವ ಗೊಬ್ಬರ ಹೆಸರಲ್ಲಿ ರೈತರಿಗೆ ದೋಖಾ
ನಕಲಿ ಗೊಬ್ಬರ ದಂಧೆ ಬೆಳಕಿಗೆ
Follow us
TV9 Web
| Updated By: ganapathi bhat

Updated on: Mar 11, 2022 | 11:04 AM

ಮಂಡ್ಯ: ಇಲ್ಲಿ ಸಾವಯವ ಗೊಬ್ಬರ ಹೆಸರಲ್ಲಿ ರೈತರಿಗೆ ವಂಚನೆ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಾಹಿತಿ ಹಿನ್ನೆಲೆ ನಕಲಿ ಗೊಬ್ಬರ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಲಾಗಿದೆ. ಕೃಷಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ಜಂಟಿ ದಾಳಿ ವೇಳೆ 500ಕ್ಕೂ ಹೆಚ್ಚು ಚೀಲ ಗೊಬ್ಬರ, 1 ಲಾರಿ ಜಪ್ತಿ ಮಾಡಲಾಗಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೊಲ್ಲರದೊಡ್ಡಿ ಬಳಿಯ ನಕಲಿ ಗೊಬ್ಬರ ತಯಾರಿಕಾ ಘಟಕದಲ್ಲಿ ಘಟನೆ ನಡೆದಿದೆ. ನಕಲಿ ಗೊಬ್ಬರ ತಯಾರಿಸುತ್ತಿದ್ದ ಆರೋಪಿಗಳು ಪರಾರಿ ಆಗಿದ್ದಾರೆ.

ಮಂಡ್ಯದಲ್ಲಿ ಪಾಲಿಶ್ ಅಕ್ಕಿ ಬಳಿಕ ನಕಲಿ ಗೊಬ್ಬರ ದಂಧೆ ಬೆಳಕಿಗೆ ಬಂದಿದೆ. ಸಾವಯವ ಗೊಬ್ಬರ ಹೆಸರಲ್ಲಿ ರೈತರಿಗೆ ದೋಖಾ ಆಗುತ್ತಿದೆ. ಈ ಹಿನ್ನೆಲೆ, ಖಚಿತ ಮಾಹಿತಿ ಪಡೆದು ಕೃಷಿ ಇಲಾಜೆ ಜಂಟಿ ನಿರ್ದೇಶಕ ಚಂದ್ರಶೇಖರ್ ದಾಳಿ ನಡೆಸಿದ್ದಾರೆ. ಯಾವುದೇ ಅನುಮತಿ ಪಡೆಯದೆ ನಕಲಿ ಗೊಬ್ಬರ ತಯಾರಿಕಾ ಘಟಕ ಸ್ಥಾಪನೆ ಮಾಡಲಾಗಿದೆ. ಕಾರ್ಖಾನೆಗಳಲ್ಲಿ ಸಿಗುವ ಪ್ರೆಸ್ ಮಡ್, ಮಲಾಸಸ್, ಮಣ್ಣು, ಬೂದಿ ಬಳಸಿ ನಕಲಿ ಗೊಬ್ಬರ ತಯಾರು ಮಾಡಲಾಗುತ್ತಿದೆ. ವಿವಿಧ ಬ್ರಾಂಡ್‌‌ಗಳ ಹೆಸರಿನಲ್ಲಿ ನೂರಾರು ಚೀಲಗಳು ಹೊರ ಜಿಲ್ಲೆಗೆ ರವಾನೆ ಮಾಡಲಾಗುತ್ತಿದೆ ಎಂದು ಮಾಹಿತಿ ಲಭಿಸಿದೆ.

ದಾಳಿ ವೇಳೆ 500ಕ್ಕೂ ಹೆಚ್ಚು ಚೀಲ ಗೊಬ್ಬರ, 1 ಲಾರಿ ವಶಕ್ಕೆ ಪಡೆಯಲಾಗಿದೆ. ಅಧಿಕಾರಿಗಳು ದಾಳಿ ಮಾಡ್ತಿದ್ದಂತೆ ನಕಲಿ ಗೊಬ್ಬರ ತಯಾರಕರು ಪರಾರಿ ಆಗಿದ್ದಾರೆ. ನಕಲಿ ಗೊಬ್ಬರ ಬಳಕೆಯಿಂದ ರೈತನಿಗೆ ಯಾವುದೇ ಪ್ರಯೋಜನ ಇಲ್ಲ. ಆದ್ರೆ ಬೆಳೆ ಹಾನಿಯಾಗುವ ಸಾಧ್ಯತೆಗಳಿರುತ್ತವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಯೋಗಾಲಯಕ್ಕೆ ನಕಲಿ ಗೊಬ್ಬರ ಸ್ಯಾಂಪಲ್ ರವಾನೆ ಮಾಡಲಾಗಿದೆ. ಏನೆಲ್ಲಾ ರಾಸಾಯನಿಕ ಬಳಸಿ ನಕಲಿ ಗೊಬ್ಬರ ತಯಾರಿಸಿದ್ದಾರೆಂದು ತಿಳಿಯಲು ಲ್ಯಾಬ್‌ಗೆ ರವಾನೆ ಮಾಡಲಾಗಿದೆ.

ರಾಮನಗರ: ಅಕ್ರಮವಾಗಿ ಪಡಿತರ ಸಾಗಿಸುತ್ತಿದ್ದ ಕ್ಯಾಂಟರ್, 115 ಚೀಲ ಅಕ್ಕಿ ವಶ

ಯಾರಬ್ ನಗರದ ಬಳಿ ಅಕ್ರಮವಾಗಿ ಪಡಿತರ ಸಾಗಿಸುತ್ತಿದ್ದ ಕ್ಯಾಂಟರ್, 115 ಚೀಲ ಅಕ್ಕಿ ವಶಕ್ಕೆ ಪಡೆಯಲಾಗಿದೆ. ದಾಳಿ ವೇಳೆ ಕ್ಯಾಂಟರ್ ಬಿಟ್ಟು ಚಾಲಕ ಸೈಯದ್ ಸುಹೇಲ್ ಪರಾರಿ ಆಗಿದ್ದಾನೆ ಎಂದು ತಿಳಿದುಬಂದಿದೆ. ರಾಮನಗರ ಟೌನ್​​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: Crime News: ಬೈಕ್ ಕಳ್ಳರ ಬಂಧನ, ಪತ್ರಕರ್ತನ ವಿರುದ್ಧ ಎಫ್​ಐಆರ್ ದಾಖಲು, ನಕಲಿ ಸಿಮೆಂಟ್ ಘಟಕದ ಮೇಲೆ ಪೊಲೀಸರ ದಾಳಿ

ಇದನ್ನೂ ಓದಿ: ಗಲಾಟೆಯಲ್ಲಿ ಸುಮಲತಾ ಕಾರು ಚಾಲಕನಿಗೆ ಗಾಯ: ಪೊಲೀಸ್ ಠಾಣೆಗೆ ದೂರು ನೀಡಿದ ಮಂಡ್ಯ ಸಂಸದೆ!

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ