ದೂಧ್ಸಾಗರ್ ಜಲಪಾತದ ಎದುರಿನಿಂದ ಹಾದುಹೋಗುವ ಕೊಂಕಣ ಮಾರ್ಗದ ರೈಲೊಂದು ಜಲಪಾತದ ನೀರು ಜಾಸ್ತಿಯಾಗಿದ್ದರಿಂದ ಅದರ ಎದುರೇ ನಿಂತಿದೆ. ಮಾಂಡೊವಿ ನದಿಯಿಂದ ಉಂಟಾದ ದೂಧ್ಸಾಗರ್ ಜಲಪಾತದ ನೀರು ವಿಪರೀತ ಹೆಚ್ಚಾಗಿ ರೈಲ್ವೆ ಹಳಿಗಳ ಬಳಿ ಬೀಳುತ್ತಿದ್ದುದರಿಂದ ರೈಲು ನಿಂತಿತ್ತು. ಇದನ್ನು ರೈಲ್ವೆ ಇಲಾಖೆ ಹಂಚಿಕೊಂಡಿರುವ ವಿಡಿಯೊದಲ್ಲಿ ನೋಡಬಹುದು.
ಪಶ್ಚಿಮ ಘಟ್ಟ ಪ್ರದೇಶದಲ್ಲಿ ವಿಪರೀತ ಮಳೆಯಾಗುತ್ತಿರುವ ಕಾರಣದಿಂದ ಮಾಂಡೊವಿ ನದಿ ತುಂಬಿ ಹರಿಯುತ್ತಿದೆ. ದೂಧ್ಸಾಗರ್ ಜಲಪಾತ ಅದರಿಂದಲೇ ಸೃಷ್ಟಿಯಾಗಿದ್ದು ಹಲವು ಧಾರೆಗಳಲ್ಲಿ ಬಹಳ ಎತ್ತರದಿಂದ ಕಣಿವೆಗೆ ಧುಮ್ಮಿಕ್ಕುತ್ತದೆ. ಅದರ ಎದುರಲ್ಲೇ ರೈಲ್ವೆ ಹಳಿ ಹಾದು ಹೋಗಿದ್ದು ವಿಪರೀತ ಮಳೆಯಿಲ್ಲದಾಗ ಜಲಪಾತ ಅದ್ಭುತವಾಗಿ ಕಾಣುತ್ತದೆ. ಆದರೆ ಈಗ ಮಳೆ ಹೆಚ್ಚಾಗಿರುವುದರಿಂದ ಮತ್ತು ಗಾಳಿಯ ರಭಸಕ್ಕೆ ರೈಲ್ವೆ ಹಳಿಯ ಮೇಲೆ ನೀರು ಬೀಳುತ್ತಿದೆ. ಇದರಿಂದಾಗಿ ರೈಲು ಕೆಲ ಕಾಲ ಅಲ್ಲೇ ನಿಂತು ನಂತರ ಮುಂದೆ ತೆರಳಿದೆ.
ಪ್ರಸಾರ ಭಾರತಿ ಟ್ವಿಟರ್ನಲ್ಲಿ ಹಂಚಿಕೊಂಡಿರುವ ವಿಡಿಯೊ ಇಲ್ಲಿದೆ:
WATCH: A train passing through Doodhsagar waterfall in South Western Railway, halted due to heavy rainfall. @RailMinIndia pic.twitter.com/lrGbfPpYbd
— Prasar Bharati News Services पी.बी.एन.एस. (@PBNS_India) July 28, 2021
ಗೋವಾ ಮತ್ತು ಬೆಂಗಳೂರನ್ನು ಸಂಪರ್ಕಿಸುವ ಮಾರ್ಗದಲ್ಲಿ ದೂದ್ಸಾಗರ್ ಜಲಪಾತವಿದೆ. ಮಾನ್ಸೂನ್ ಸಂದರ್ಭದಲ್ಲಿ ಈ ಜಲಪಾತ ಹಾಲಿನ ಸಮುದ್ರದಂತೆ ಕಾಣುವುದರಿಂದ ದೂಧ್ಸಾಗರ್ ಎಂಬ ಹೆಸರು ಬಂದಿದೆ. ಈ ಜಲಪಾತದ ಸುತ್ತಲೂ ರಕ್ಷಿತಾರಣ್ಯವಿದ್ದು ಅಮೂಲ್ಯವಾದ ಜೀವ ವೈವಿಧ್ಯವನ್ನು ಹೊಂದಿದೆ. ಮಾಂಡೊವಿ ನದಿಯು ಭಗವಾನ್ ಮಹಾವೀರ ಅರಣ್ಯ ಮತ್ತು ಮೊಳ್ಳೆಮ್ ರಾಷ್ಟ್ರೀಯ ಉದ್ಯಾನವನದ ನಡುವಲ್ಲಿ ಹರಿದು ಅಲ್ಲಿನ ಜೀವ ವೈವಿಧ್ಯಕ್ಕೆ ಆಸರೆಯಾಗಿದೆ. ಮಾಂಡೊವಿ ನದಿ ಹುಟ್ಟುವುದು ಕರ್ನಾಟಕದ ಬೆಳಗಾವಿಯಲ್ಲಿ. ನಂತರ ಅದು ಗೋವಾದ ರಾಜಧಾನಿ ಪಣಜಿಯಲ್ಲಿ ಅರೇಬಿಯನ್ ಸಮುದ್ರವನ್ನು ಸೇರುತ್ತದೆ.
ದೂಧ್ ಸಾಗರ್ ಜಲಪಾತ ಭಾರತದ ಎತ್ತರದ ಜಲಪಾತಗಳಲ್ಲಿ ಒಂದಾಗಿದ್ದು ಸುಮಾರು 310 ಮೀಟರ್ ಎತ್ತರದಿಂದ ಧುಮುಕುತ್ತದೆ. ಇದರ ವಿಸ್ತಾರವೂ ದೊಡ್ಡದಾಗಿದ್ದು ಸುಮಾರು ಮೂವತ್ತು ಮೀಟರ್ ಅಗಲವಿದೆ. ಈ ಭಾಗದಲ್ಲಿ ಇನ್ನು ಮೂರು ದಿನಗಳ ಕಾಲ ವಿಪರೀತ ಮಳೆಯಾಗುವ ಸಂಭವವಿದ್ದು ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.
ಇದನ್ನೂ ಓದಿ: Video: ಕಾಲಿನ ಸ್ವಾಧೀನ ಕಳೆದುಕೊಂಡ ಮಗ ‘ಅಪ್ಪಾ, ನಾನೂ ಎಲ್ಲರಂತೆ ನಡೆಯಬೇಕು…’ ಎಂದಾಗ ಇಂಜಿನಿಯರ್ ತಂದೆ ಮಾಡಿದ್ದೇನು?
ಇದನ್ನೂ ಓದಿ: Viral Video: ಯಮಹಾ ಬೈಕ್ ಓಡಿಸಿ ಕ್ಯಾಮರಾಕ್ಕೆ ಪೋಸ್ ಕೊಟ್ಟ ವೃದ್ದೆ! ಯುವಕರೆಲ್ಲಾ ಬೆರಗಾಗುವ ವಿಡಿಯೋವಿದು
(a train was stopped in front of Dudhsagar waterfalls due to heavy rain fall and railway department shares the video)