ಮರಿಯಾನೆ ತನ್ನ ಪಾಲಕನ ಕೈಯನ್ನು ಸೊಂಡಿಲಿನಿಂದ ಹಿಡಿದು ಎಳೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮಾರಿಯಾನೆಯ ಈ ಮುದ್ದಾದ ವಿಡಿಯೋಗೆ ಸಾಕಷ್ಟು ಟ್ವಿಟರ್ ಬಳಕೆದಾರರು ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ವಿಡಿಯೋ ಹಂಚಿಕೊಂಡ ಕೇವಲ 2ಗಂಟೆಗಳಲ್ಲಿ ಮೂರು ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಬ್ಯುಟೆಂಗೆಬೀಡೆನ್ ಎಂಬ ಟ್ವಿಟರ್ ಖಾತೆಯಿಂದ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವೈರಲ್ ಆಗಿರುವ ಮರಿಯಾನೆಯ ಮುದ್ದಾದ ವಿಡಿಯೋ ಇಲ್ಲಿದೆ ನೋಡಿ.
Baby elephant holding caretaker’s hand.. ?
pic.twitter.com/NsqCAPQr1h— Buitengebieden (@buitengebieden) April 7, 2023
ಇದನ್ನೂ ಓದಿ: ದೈತ್ಯ ಆನೆಗಳು ಪರಸ್ಪರ ಕಾದಾಟ ನಡೆಸುವ ಮೈ ಜುಮ್ಮೆನಿಸುವ ವಿಡಿಯೋ ಇಲ್ಲಿದೆ ನೋಡಿ
ವಿಡಿಯೋದಲ್ಲಿ ಮರಿ ಆನೆಯೊಂದು ತನ್ನ ಪಾಲಕನ ಕೈಯನ್ನು ಹಿಡಿದಿರುವುದನ್ನು ಕಾಣಬಹುದು. ಆನೆ ಮರಿ ತನ್ನ ಸೊಂಡಿಲನ್ನು ಪಾಲಕನ ಕೈಗೆ ಅತ್ಯಂತ ಮುದ್ದಾಗಿ ಸುತ್ತಿಕೊಂಡಿದ್ದು, ನನ್ನನ್ನು ಎಂದಿಗೂ ಬಿಟ್ಟು ಹೋಗಬೇಡ ಎಂದು ಹೇಳಿದಂತಿದೆ. ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವೀಡಿಯೊ ಮೂರು ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.
ಬಳಕೆದಾರೊಬ್ಬರು ಅವರ ನಡುವಿನ ಬಾಂಧವ್ಯವು ನಿಜವಾಗಿಯೂ ಅಮೂಲ್ಯವಾಗಿದೆ. ಅಂತಹ ಕಾಳಜಿಯುಳ್ಳ ಸ್ನೇಹಿತನನ್ನು ಪಡೆದ ಈ ಪುಟ್ಟ ಆನೆ ಅದೃಷ್ಟ ಎಂದು ಕಾಮೆಂಟ್ನಲ್ಲಿ ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:21 pm, Sat, 8 April 23