16 ವರ್ಷಗಳ ನಂತರ ತನ್ನ ಮೊದಲ ಸಂಬಳದ ಅನುಭವ ಮೆಲುಕು ಹಾಕಿದ ಡಾ.ಸುಧೀರ್ ಕುಮಾರ್
ಎಂಬಿಬಿಎಸ್ ಮುಗಿಸಿದ 16 ವರ್ಷಗಳ ನಂತರ ತನ್ನ ತಿಂಗಳ ವೇತನದ ಕುರಿತು ವೈದ್ಯರೊಬ್ಬರು ಟ್ವಿಟರ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಇದೀಗಾ ಭಾರೀ ವೈರಲ್ ಆಗಿದೆ.
ಎಂಬಿಬಿಎಸ್ ಮುಗಿಸಿದ 16 ವರ್ಷಗಳ ನಂತರ ತನ್ನ ತಿಂಗಳ ವೇತನದ ಕುರಿತು ವೈದ್ಯರೊಬ್ಬರು ಟ್ವಿಟರ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಇದೀಗಾ ಭಾರೀ ವೈರಲ್ ಆಗಿದೆ. ಹೈದರಾಬಾದ್ ಅಪೋಲೋ ಆಸ್ಪತ್ರೆಯ ನರರೋಗ ತಜ್ಞ ಡಾ.ಸುಧೀರ್ ಕುಮಾರ್ ತನ್ನ ಸ್ವಂತ ಅನುಭವವನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಎಂಬಿಬಿಎಸ್ ಮುಗಿಸಿ ಮೊದಲು ನಾನು ವೃತ್ತಿರಂಗಕ್ಕೆ ಕಾಲಿಟ್ಟಾಗ ನನ್ನ ತಿಂಗಳ ಸಂಬಳ ಕೇವಲ 9ಸಾವಿರ ಇತ್ತು. ಈ 9 ಸಾವಿರ ರೂಪಾಯಿ ನನ್ನ ಜೀವನದಲ್ಲಿ ಪಾಠವನ್ನು ಕಲಿಸಿಕೊಟ್ಟಿದೆ ಎಂದು ಎಂದು ಅವರು ಪೋಸ್ಟ್ನಲ್ಲಿ ಬರೆದು ಕೊಂಡಿದ್ದಾರೆ. ಮಿತವ್ಯಯ ಎಂದರೆ ಏನು ಎಂಬುದನ್ನು ನನಗೆ ತಿಳಿಸಿದೆ ಎಂದು ಅವರು ತಮ್ಮ ಪ್ರಾರಂಭದ ವೃತ್ತಿ ಜೀವನವನ್ನು ಮೆಲುಕು ಹಾಕಿದ್ದಾರೆ.
ವೈದ್ಯರ ಜೀವನ ಮಿತವ್ಯಯದಿಂದ ಕೂಡಿರಬೇಕು ಎಂದು ತಿಳಿದುಕೊಂಡ ನಂತರ ಅಗತ್ಯವಿದ್ದಷ್ಟು ಮಾತ್ರ ಖರ್ಚು ಮಾಡಲು ಕಲಿತೆ ಎಂದು ಬರೆದುಕೊಂಡಿದ್ದಾರೆ. ಡಾ.ಸುಧೀರ್ ಕುಮಾರ್ ಹಂಚಿಕೊಂಡಿರುವ ಪೋಸ್ಟ್ ಇಲ್ಲಿದೆ:
Agree with you. I was also a young practitioner 20 yrs back. My salary 4 yrs after DM Neurology (2004) was Rs 9000/month. This was 16 yrs after joining MBBS. At CMC Vellore, by observing my professors, I realized that doctor’s life should be frugal & learnt to live with bare… https://t.co/IPnJKoIixs
— Dr Sudhir Kumar MD DM (@hyderabaddoctor) April 4, 2023
ಡಾ.ಸುಧೀರ್ ಕುಮಾರ್ ಹಂಚಿಕೊಂಡಿರುವ ಪೋಸ್ಟ್ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಟ್ವಿಟರ್ ಬಳಕೆದಾರರೊಬ್ಬರು ಇವರ ಪೋಸ್ಟ್ಗೆ ರೀಟ್ವೀಟ್ ಮಾಡಿದ್ದು, ಯುವಕರು ಜೀವನ ನಿರ್ವಹಣೆಗೆ ಕಷ್ಟಪಡುತ್ತಿರುವಾಗ ಸಮಾಜ ಸೇವೆ ಮಾಡುವುದು ಕಷ್ಟ ಎಂಬ ಟ್ವೀಟ್‌ಗೆ ಅವರು ಉತ್ತರಿಸಿದ್ದಾರೆ.
ಇದನ್ನೂ ಓದಿ: ಕೆಲವರು ಇತರರಿಗೆ ಪ್ರೇರಣೆಯಾಗುತ್ತಾರೆ, ಅಂತಹವರು ಎಲ್ಲೆಡೆ ಪ್ರಶಂಸೆಗೆ ಒಳಗಾಗುತ್ತಾರೆ
ಡಾ.ಸುಧೀರ್ ಮತ್ತೊಂದು ಟ್ವೀಟ್ನಲ್ಲಿ ತನ್ನ ಮೊದಲ ಸಂಬಳದ ಬಗ್ಗೆ ತನ್ನ ತಾಯಿಯ ಪ್ರತಿಕ್ರಿಯೆ ಹೇಗಿತ್ತು ಎಂದು ಕೂಡ ಬರೆದುಕೊಂಡಿದ್ದಾರೆ. ಎಂಬಿಬಿಎಸ್ ಮುಗಿಸಿದ ನಂತರದ ನನ್ನ ಮೊದಲ ಸಂಬಳದಲ್ಲಿ ನಾನು ಸಂತೋಷವಾಗಿದ್ದೆ , ಆದರೆ ನನ್ನ ತಾಯಿ ಅಸಮಾಧಾನವನ್ನು ಹೊಂದಿದ್ದರು ಎಂದು ಹೇಳಿದ್ದಾರೆ. ನನ್ನ ತಾಯಿಯ ಅಸಮಾಧಾನಕ್ಕೆ ಕಾರಣವೂ ಎಂದು ಹೇಳಿದ್ದಾರೆ. ಹೌದು ನನ್ನ ತಂದೆ ಕೆಲಸ ಮಾಡುತ್ತಿದ್ದ ಕಛೇರಿಯಲ್ಲಿನ ಗುಮಾಸ್ತನಿಗೂ ನನಗಿಂತ ಹೆಚ್ಚಿನ ವೇತನ ಇತ್ತು. ಇದರಿಂದಾಗಿ ನನ್ನ ತಾಯಿ ಅಸಮಾಧಾನದಿಂದಿದ್ದರು ಎಂದು ಡಾ.ಸುಧೀರ್ ಬರೆದುಕೊಂಡಿದ್ದಾರೆ. ಎಂಬಿಬಿಎಸ್ ಮಾಡುತ್ತಿರುವಾಗ ಯಾವುದೇ ಕೆಟ್ಟ ಚಟಗಳು ಇರಲ್ಲಿಲ್ಲ. ಯಾಕೆಂದರೆ ಆರ್ಥಿಕವಾಗಿ ಹಿಂದುಳಿದ್ದಿದ್ದರಿಂದ ಯಾವ ಚಟಗಳಿಗೂ ವ್ಯಯ ಮಾಡುವಷ್ಟು ದುಡ್ಡಿರಲ್ಲಿಲ್ಲ. ಕೇವಲ ಎರಡು ಸೆಟ್ ಬಟ್ಟೆಗಳನ್ನು ಹೊಂದಿದೆ. ಅಂದಿನ ಜೀವನ ನನಗೆ ಜೀವನ ಪಾಠವನ್ನು ಕಲಿಸಿದೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
ಡಾ.ಸುಧೀರ್ ಹಂಚಿಕೊಂಡ ನಂತರ, ಪೋಸ್ಟ್ 70,000 ವೀಕ್ಷಣೆಗಳನ್ನು ಸಂಗ್ರಹಿಸಿದೆ. ಹಲವಾರು ಬಳಕೆದಾರರು ವೈದ್ಯಕೀಯ ಕ್ಷೇತ್ರವು ಕಳಪೆ ವೇತನವನ್ನು ಹೊಂದಿದೆ ಎಂದು ಕಾಮೆಂಟ್ ಮೂಲಕ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಇಂದಿನ ಜೀವನಶೈಲಿಯಲ್ಲಿ ಕುಟುಂಬದ ನಿರ್ವಹಣೆ ಹೆಗಲ ಮೇಲಿರುವಾಗ ಕಡಿಮೆ ಸಂಬಳದಲ್ಲಿ ಬದುಕುವುದು ಅಷ್ಟು ಸುಲಭವಲ್ಲ ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: