ಪ್ರತೀ ದಿನ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವಿಡಿಯೋಗಳು ಹರಿದಾಡುತ್ತಿರುತ್ತದೆ. ಆದರೆ ಕೆಲವೊಂದಿಷ್ಟು ವಿಡಿಯೋಗಳು ಭಾರೀ ವೈರಲ್ ಆಗುತ್ತದೆ. ಅಂತದ್ದೇ ವಿಡಿಯೋ ಇದೀಗಾ ಸುದ್ದಿಯಲ್ಲಿದೆ. ಹುಲಿ ಬೇಟೆಯಲ್ಲಿ ತಾನೆ ಬುದ್ಧಿವಂತ ಎಂದು ಅಂದುಕೊಂಡರೇ, ಆದರೆ ನಿನ್ನ ಬಾಯಿಂದ ತಪ್ಪಿಸಿಕೊಳ್ಳುವುದರಲ್ಲಿ ನಿನಗಿಂತ ನಾನೇ ಬುದ್ದಿವಂತ ಎಂದು ತೋರಿಸಿಕೊಟ್ಟ ಜಿಂಕೆಯೊಂದರ ಸಖತ್ ಪ್ಲಾನ್ ವಿಡಿಯೋ ಟ್ವಿಟರ್ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಐಎಫ್‌ಎಸ್ ಅಧಿಕಾರಿ ಸುಸಂತ ನಂದಾ ಅವರು ಹುಲಿ ಬೇಟೆಯ ಈ ರೋಚಕ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಹುಲಿಯ ಪೇಚಾಟ ಕಂಡು ನೆಟ್ಟಿಗರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇಲ್ಲಿದೆ ನೋಡಿ ವಿಡಿಯೋ:
Ohh dear deer…
Tigers of Sunderbans mangroves are adopted to catch the prey even in water. But here is one that dodged the big cat.
VC:@Plchakraborty pic.twitter.com/5dU8Ih1hDl— Susanta Nanda (@susantananda3) May 18, 2023
ಇದನ್ನೂ ಓದಿ: ಮನುಷ್ಯರ ಜೊತೆಗೆ ಪುಟ್ಟ ಹಕ್ಕಿಯೊಂದರ ಸ್ನೇಹ ನೋಡಿ
ವಿಡಿಯೋದಲ್ಲಿ ಹುಲಿ ಬೇಟೆಗೆ ಸಜ್ಜಾಗಿ ಹುಲ್ಲಿನ ಮರೆಯಲ್ಲಿ ಕುಳಿತಿರುವುದನ್ನು ಕಾಣಬಹುದು. ಸ್ಪಲ್ಪ ದೂರದಲ್ಲಿದೆ ಜಿಂಕೆಗಳ ಗುಂಪಿದೆ. ಜಿಂಕೆಗಳ ಗುಂಪು ಎದ್ದೇಳುತ್ತಿದ್ದಂತೆ ಹುಲಿ ಜಿಂಕೆಯೊಂದರ ಮೇಲೆ ದಾಳಿಗೆ ಮುಂದಾಗಿದೆ. ಆದರೆ ಜಿಂಕೆ ಸಖತ್ ಆಗಿ ಪ್ಲಾನ್ ಮಾಡಿ ಹುಲಿಯ ಬಾಯಿಂದ ತನ್ನ ಜೀವವನ್ನು ಕಾಪಾಡಿಕೊಂಡಿದೆ. ಜಿಂಕೆ ಹತ್ತಿರದ ನದಿಗೆ ಹಾರುತ್ತಿದ್ದಂತೆ ಹುಲಿಯು ಕೂಡ ಹಾರಿದೆ. ಆದರೆ ಜಿಂಕೆ ಹೆಂಗೂ ಈಜಿಕೊಂಡು ಹೊರಬಂದಿದ್ದು, ಹುಲಿಯ ನೀರಿನಿಂದ ಹೊರಬರಲು ಕಷ್ಟ ಪಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: