Viral Video ವೈರಲ್ ವೀಡಿಯೋ: ಸೋಷಿಯಲ್ ಮೀಡಿಯಾ (Social Media).. ಈ ಹೆಸರು ಕೇಳದವರೇ ಇಲ್ಲ. ಅಬಾಲವೃದ್ಧರು ಎಂಬ ಭೇದವಿಲ್ಲದೆ ಎಲ್ಲರಿಗೂ ಈಗ ಸೋಷಿಯಲ್ ಮೀಡಿಯಾ ಅನಿವಾರ್ಯವಾಗಿಬಿಟ್ಟಿದೆ. ಸೆಲ್ ಫೋನ್‌ಗಳಿಗೆ ಜೊತೆಗಾತಿಯಾಗಿರುವ ಇಂಟರ್ನೆಟ್ ಬಂಧ ದೊಡ್ಡದಿದೆ.
ಸೋಷಿಯಲ್ ಮೀಡಿಯಾ.. ಈ ಹೆಸರು ಕೇಳದವರೇ ಇಲ್ಲ. ಅಬಾಲವೃದ್ಧರು ಎಂಬ ಭೇದವಿಲ್ಲದೆ ಎಲ್ಲರಿಗೂ ಈಗ ಸೋಷಿಯಲ್ ಮೀಡಿಯಾ ಅನಿವಾರ್ಯವಾಗಿಬಿಟ್ಟಿದೆ. ಸೆಲ್ ಫೋನ್‌ಗಳಿಗೆ ಜೊತೆಗಾತಿಯಾಗಿರುವ ಇಂಟರ್ನೆಟ್ ಬಂಧ ದೊಡ್ಡದಿದೆ. ಒಂದರ್ಥದಲ್ಲಿ, ಸಂಬಂಧಿಕರಿಗಿಂತ ಸಾಮಾಜಿಕ ಮಾಧ್ಯಮದಲ್ಲಿನ ಈ ಬಂಧಗಳು ಹೆಚ್ಚು ಅವಶ್ಯಕವಾಗಿವೆ. ಹಾಗಾಗಿ ನೂರಾರು ನಾನಾ ವೀಡಿಯೊಗಳು ಅಪ್‌ಲೋಡ್ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವು ನೆಟಿಜನ್‌ಗಳನ್ನು ಅಪಾರವಾಗಿ ಆಕರ್ಷಿಸುತ್ತವೆ. ಇಂತಹ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತವೆ.
ಇನ್ನು ಇಂತಹ ವೀಡಿಯೋಗಳ ಪೈಕಿ ಹೆಚ್ಚಿನವು ಪ್ರಣಿಗಳಿಗೆ ಸಂಬಂಧಪಟ್ಟಿರುವಂತಹವಾಗಿವೆ. ಪ್ರಾಣಿಗಳಿಗೆ ಸಂಬಂಧಿಸಿದ ಈ ಹೆಚ್ಚಿನ ವಿಡಿಯೋಗಳು ನೆಟಿಜನ್‌ಗಳನ್ನು ಆಕರ್ಷಿಸುತ್ತಿವೆ. ಸದ್ಯ ಇಂತಹದೊಂದು ವಿಡಿಯೋ ಹರಿದಾಡುತ್ತಿದೆ. ವೈರಲ್ ಆಗುತ್ತಿರುವ ಈ ಕ್ಲಿಪ್ ನಲ್ಲಿ ಎಳೆಯ ಆನೆಯೊಂದು ಬುರುದೆಯ ಹೊಂಡದಲ್ಲಿ ಸಿಲುಕಿಕೊಂಡಿದೆ. ಅಲ್ಲಿಂದ ಮೇಲೆ ಬರಲು ಹರಸಾಹಸ ಪಡುತ್ತಿದೆ.
ಆನೆಗಳ ನಡುವಣ ಸಹಕಾರ, ಮಮಕಾರ, ಅಂತಃಕರಣಕ್ಕೆ ಫಿದಾ ಆದ ನೆಟ್ಟಿಗರು
ಆದರೂ ಹೊರಗೆ ಬರಲಾಗದೆ ಪರದಾಡುತ್ತಿದೆ. ಆಗ ಅಲ್ಲೇ ಇದ್ದ ಆನೆಗಳ ಹಿಂಡು… ಬಹುಶಃ ತಾಯಿ ಆನೆಯೂ ಸೇರಿದಂತೆ ಗಜ ಬಳಗ ಅಷ್ಟೂ ಆ ಪುಟ್ಟ ಆನೆಯನ್ನು ಮೇಲೆತ್ತಲು ಪ್ರಯತ್ನಿಸುತ್ತದೆ. ಆದರೂ ಸಾಧ್ಯವಾಗುವುದಿಲ್ಲ. ಗುಂಡಿಯಲ್ಲಿ ಇಳಿದು ತನ್ನ ಮರಿ ಆನೆಯನ್ನು ಮೇಲೆತ್ತಲು ಪ್ರಯತ್ನಿಸುತ್ತದೆ. ಆಗುವುದಿಲ್ಲ. ನಂತರ, ಮತ್ತೊಂದು ದೊಡ್ಡ ಆನೆಯೊಂದು ಮರಿಯ ಬುಡಕ್ಕೆ ತನ್ನ ಸೊಂಡಿಲು ಹಾಕಿ ಲೊಟಕ್ಕಂತಾ ಮೇಲಕ್ಕೆ ಎತ್ತಿಹಾಕುತ್ತದೆ. ಅಲ್ಲಿಗೆ ಎಲ್ಲವೂ ಶುಭಂ!
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ಕ್ಲಿಪ್ ಇದುವರೆಗೆ 32,000 ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇದಲ್ಲದೇ ಸಾವಿರಾರು ಲೈಕ್‌ಗಳನ್ನು ಪಡೆಯುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ತಮ್ಮದೇ ಶೈಲಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ವೀಡಿಯೋ ಅವರ ಹೃದಯ ಗೆದ್ದಿದೆ-ಕದ್ದಿದೆ ಮತ್ತು ಆನೆಗಳ ನಡುವಣ ಸಹಕಾರ, ಮಮಕಾರ, ಅಂತಃಕರಣಕ್ಕೆ ಫಿದಾ ಆಗಿದ್ದಾರೆ.
Elephants have such a strong bonding that every female elephant in the herd is a mother to all the calves.
Mother & aunts gather together to help the kid gets out. pic.twitter.com/VlIpLM6LJ8
— Susanta Nanda IFS (@susantananda3) August 21, 2022