Viral Video : 42 ವರ್ಷಗಳ ನಂತರ ಸಿನೆಮಾ ನೋಡಲು ಥಿಯೇಟರಿಗೆ ಬಂದ ಈ ಅಜ್ಜ
Grandfather Visits Theatre : ಹೀಗೆ ನೀವೂ ಒಮ್ಮೆ ಥಿಯೇಟರ್ಗೆ ನಿಮ್ಮ ಅಜ್ಜ ಅಜ್ಜಿಯರನ್ನು ಸಿನೆಮಾ ನೋಡಲು ಕರೆತಂದರೆ ಹೇಗಿದ್ದೀತು? 6 ಲಕ್ಷ ನೆಟ್ಟಿಗರು ಮೊಮ್ಮಗನಿಗೆ ಶಭಾಷ್ ಎಂದಿದ್ದಾರೆ.

ಮೊಮ್ಮಗನೊಂದಿಗೆ ಥಿಯೇಟರಿಗೆ ಬಂದ ಅಜ್ಜ
Viral Video: ಅಜ್ಜ ಅಜ್ಜಿಯರಿಂದ ಸುತ್ತುವರೆದಿರುವ ಈಗಿನ ಪೀಳಿಗೆಯು ತಮ್ಮನ್ನು ಅದೃಷ್ಟವಂತರೆಂದೇ ಪರಿಗಣಿಸಬೇಕು, ಹಾಗಿದೆ ಇಂದಿನ ಪರಿಸ್ಥಿತಿ. ಇಲ್ಲೊಬ್ಬ ವ್ಯಕ್ತಿ ತನ್ನ ಅಜ್ಜನನ್ನು 42 ವರ್ಷಗಳ ನಂತರ ಸಿನೆಮಾ ಥಿಯೇಟರಿಗೆ ಕರೆದುಕೊಂಡು ಬಂದ ವಿಡಿಯೋ ವೈರಲ್ ಆಗಿದೆ. ಡಾ. ದೀಪಕ್ ಅಂಜನಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ಅಜ್ಜ ಸಾಂಪ್ರದಾಯಿಕ ಧೋತಿ, ಪೇಟಾ ಧರಿಸಿ ಎಸ್ಕಲೇಟರ್ ಮೇಲೆ ಏರಿಬರುತ್ತಾರೆ. ಆರಾಮಾಗಿ ಮಾಲ್ ಅನ್ನು ಓಡಾಡಿಕೊಂಡು ಗಮನಿಸುತ್ತಾರೆ. ನಂತರ ಸಿನೆಮಾ ಥಿಯೇಟರ್ ಒಳಗೆ ಬರುತ್ತಾರೆ.
View this post on Instagram
ಆರು ಲಕ್ಷ ನೆಟ್ಟಿಗರು ಈ ವಿಡಿಯೋ ನೋಡಿದ್ದಾರೆ. ಖಂಡಿತ ಅವರಿಗೆ ಅನ್ನಿಸಲು ಸಾಕು, ನಮ್ಮ ಅಜ್ಜ ಅಜ್ಜಿಯರನ್ನೂ ಹೀಗೆ ಥಿಯೇಟರ್ಗೆ ಒಮ್ಮೆಯಾದರೂ ಕರೆತರಬೇಕೆಂದು.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ




