Viral Video: ನಿಲ್ಲು ನಿಲ್ಲೇ ಪತಂಗ, ಇದೋ ಮಾಡು ಪೆಂಗ್ವಿನ್ ಸಂಗ!
Penguin : ನೀವು ನನ್ನ ಹಿಡಿಯಲಾರಿರಿ; ನಾವು ನಿನ್ನ ಬಿಡಲಾರೆವು. ಚಿಟ್ಟೆಯ ಈ ವೇಗ, ಪೆಂಗ್ವಿನ್ನ ಈ ನಿಧಾನ ಆಹಾ...
Viral Video : ಪೆಂಗ್ವಿನ್‌ಗಳು ಚಿಟ್ಟೆಯ ಬೆನ್ನಟ್ಟಿಕೊಂಡು ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೂರು ಪೆಂಗ್ವಿನ್‌ಗಳನ್ನು ಇಲ್ಲಿರುವ ಒಂದೇ ಚಿಟ್ಟೆಯನ್ನು ಹಿಡಿಯಲು ಹರಸಾಹಸ ಪಡುತ್ತಿವೆ. ಹೇಳಿಕೇಳಿ ಚಿಟ್ಟೆ. ಅದರ ವೇಗಕ್ಕೂ ಈ ಪೆಂಗ್ವಿನ್ನ ವೇಗಕ್ಕೂ ಎಂದಾದರೂ ತಾಳೆ ಸಿಕ್ಕೀತಾ? ಆದರೆ ಇದನ್ನು ನೋಡೋದೇ ಮಜಾ ಎನ್ನುತ್ತಿದ್ದಾರೆ ನೆಟ್ಟಿಗರು. 2 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಯನ್ನು ಈ ವಿಡಿಯೋ ಹೊಂದಿದೆ.
Penguins chasing a butterfly..????pic.twitter.com/80djMMSI8v
ಇದನ್ನೂ ಓದಿ— ?o̴g̴ (@Yoda4ever) August 25, 2022
ಮೊದಲು ಮೂರು ನಂತರ ನಾಲ್ಕು, ಆನಂತರ ಆರು ಪೆಂಗ್ವಿನ್‌ಗಳು ಒಟ್ಟಾಗಿ ಈ ಚಿಟ್ಟೆಯನ್ನು ಹಿಡಿಯಲು ಪುಟುಪುಟು ಓಡಲಾರಂಭಿಸುತ್ತವೆ. ಆ ಚಿಟ್ಟೆಯೂ ಎಂಥ ಕಿಲಾಡಿ! ಅದಕ್ಕೂ ಗೊತ್ತಿದೆ ತನ್ನನ್ನು ಇವುಗಳೆಲ್ಲ ಹಿಡಿಯಲು ಪ್ರಯತ್ನಿಸುವುದು. ಬೇಕೆಂದರೆ ಆ ಜಾಗದಲ್ಲೇ ಸುತ್ತು ಹೊಡಿಯುತ್ತೆ.
ಮತ್ತಷ್ಟು ಇಂಥ ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:11 pm, Fri, 26 August 22