Viral Video: ದಾರಿಬಿಡಿ, ಪುಟ್ಟಮಕ್ಕಳನ್ನು ನೋಡಲು ದೊಡ್ಡವರು ಬಂದಿದ್ದಾರೆ!
Dog Visits Children’s Hospital : ಆಸ್ಪತ್ರೆಗೆ ಹೋಗಿ ಹೈಫೈ ಕೊಟ್ಟು, ಅಪ್ಪಿಕೊಂಡು ಮಕ್ಕಳಲ್ಲಿ ಚೈತನ್ಯ ಮೂಡಿಸಿ ಬಂದಿದೆ ಈ ಬ್ರೋಡಿ.
Viral Video : ಬ್ರೋಡಿ ಎಂಬ ಈ ಗೋಲ್ಡನ್ ಡೂಡಲ್ ನಾಯಿ ಇತ್ತೀಚೆಗೆ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ವಿಡಿಯೋ ನೆಟ್ಟಿಗರ ಮನ ಬೆಚ್ಚಗೆ ಮಾಡಿದೆ. ಟಿಕ್ಟಾಕ್ನಲ್ಲಿ ಪೋಸ್ಟ್ ಮಾಡಲಾಗಿದ್ದ ಈ ವಿಡಿಯೋ ಇನ್ಸ್ಟಾಗ್ರಾಮಿಗರನ್ನೂ ಬೆರಗುಗೊಳಿಸಿದೆ. ಆಸ್ಪತ್ರೆಯಲ್ಲಿ ದಾಖಲಾದ ಮಕ್ಕಳನ್ನು ಭೇಟಿಯಾಗಿ ಅವರಲ್ಲಿ ಸ್ವಲ್ಪ ಲವಲವಿಕೆ ತುಂಬುವಲ್ಲಿ ಬ್ರೋಡಿ ಸಹಾಯ ಮಾಡಿದೆ ಎಂದರೆ ಇದಕ್ಕಿಂತ ಒಳ್ಳೆಯ ಮದ್ದೇನಿದೆ? ಕೆಲ ಮಕ್ಕಳಿಗೆ ಅಪ್ಪುಗೆಯನ್ನೂ ನೀಡಿದೆ! ಸುಮಾರು 14 ಗಂಟೆಗಳ ಹಿಂದೆ ಹಂಚಿಕೊಳ್ಳಲಾದ ವೀಡಿಯೊ 8.6 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿದೆ. ಸುಮಾರು 84,000 ಜನರು ಲೈಕ್ ಮಾಡಿದ್ದಾರೆ.
ಇದನ್ನೂ ಓದಿView this post on Instagram
ಈ ಆಸ್ಪತ್ರೆಯಲ್ಲಿರುವ ಆರು ಮಕ್ಕಳ ನಗುವನ್ನು ಇವನು ಹಿಂದಿರುಗಿಸುತ್ತಾನೆ ಎಂದು ನೆಟ್ಟಿಗರು ಪ್ರೀತಿಯಿಂದ ಕಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:47 pm, Fri, 26 August 22