Viral Video: ಅಜ್ಜ ಮೊಮ್ಮಗನ ಮಿಲನದ ಈ ಗಳಿಗೆಗಳು

Grandfather : ಮೊಮ್ಮಗುವಿನ ಭೇಟಿಗೆ ಈ ಅಜ್ಜ ಎಷ್ಟು ಬೆರಗಿನಿಂದ ಖುಷಿಯಿಂದ ಕಾಯುತ್ತಿದ್ದಾರೆ. ಮೂರು ಮಿಲಿಯನ್ ನೆಟ್ಟಿಗರು ಹರ್ಷ ಸೂಚಿಸಿದ್ದಾರೆ ಈ ದೃಶ್ಯಕ್ಕೆ.

Viral Video: ಅಜ್ಜ ಮೊಮ್ಮಗನ ಮಿಲನದ ಈ ಗಳಿಗೆಗಳು
ಅಜ್ಜ ಮೊಮ್ಮಗನ ಹರ್ಷ
Follow us
TV9 Web
| Updated By: ಶ್ರೀದೇವಿ ಕಳಸದ

Updated on: Aug 26, 2022 | 5:05 PM

Viral Video: ಈ ಅಜ್ಜ-ಅಜ್ಜಿ ಮೊಮ್ಮಕ್ಕಳ ಬಂಧ ಸಾಟಿಯಿಲ್ಲದ್ದು. ಈ ವಿಮಾನ ನಿಲ್ದಾಣದಲ್ಲಿ ಚಿತ್ರೀಕರಿಸಿದ ಅಜ್ಜ ಮತ್ತು ಮೊಮ್ಮಗನ ಭೇಟಿಯ ವಿಡಿಯೋ ಈಗ ವೈರಲ್ ಆಗಿದೆ. ಎಲಿಜಬೆತ್ ಕ್ಯಾಸ್ಟ್ರೊ ಎಂಬ ಇನ್‌ಸ್ಟಾಗ್ರಾಮ್ ಖಾತೆದಾರರು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಆಗಸ್ಟ್​ 7 ರಂದು ಪೋಸ್ಟ್ ಮಾಡಲಾದ ಈ ವಿಡಿಯೋ 3 ಮಿಲಿಯನ್​ಗಿಂತಲೂ ಹೆಚ್ಚು ವೀಕ್ಷಕರನ್ನು ಸೆಳೆದಿದೆ. ನೆಟ್ಟಿಗರು ತಮ್ಮ ಅನುಭವ, ಆಶಯಗಳನ್ನು ಪ್ರತಿಕ್ರಿಯೆಗಳ ಮೂಲಕ ಹಂಚಿಕೊಂಡಿದ್ದು ಹೃದ್ಯವಾಗಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Elizabeth Castro (@mrslizcastro)

ಒಂದೂವರೆ ಲಕ್ಷಕ್ಕಿಂತಲೂ ಹೆಚ್ಚು ಲೈಕ್ಸ್​ ಈ ವಿಡಿಯೋ ಪಡೆದಿದೆ. ತನ್ನ ಮೊಮ್ಮಗು ಎಂದು ಆ ಅಜ್ಜ ಸಂತೋಷದಿಂದ ಕೈ ಬೀಸುತ್ತಿರುತ್ತಾರೆ ಆದರೆ ಅದು ಅವರದಾಗಿರುವುದಿಲ್ಲ. ಒಡನೆಯೇ ತನ್ನ ಮೊಮ್ಮಗು ಅಜ್ಜನಿಗೆ ಕಾಣವುದರಿಂದ ಅಜ್ಜ ಖುಷಿಯಲ್ಲಿ ತೇಲಿ, ಮೊಮ್ಮಗುವನ್ನು ಭುಜದ ಮೇಲೆ ಕೂರಿಸಿಕೊಂಡು ಸಂಭ್ರಮಿಸುತ್ತಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ