AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನೆಗಳಿಗೆ ಮಾತು ಬರಲ್ಲ ಅಷ್ಟೇ! ಆದ್ರೆ ಮನುಷ್ಯರಿಗಿಂತ ಹೆಚ್ಚು ಅಂತಃಕರಣ ಹೊಂದಿವೆ, ಈ ವಿಡಿಯೋ ಪುರಾವೆ ನೋಡಿ

ಬಹುಶಃ ತಾಯಿ ಆನೆಯೂ ಸೇರಿದಂತೆ ಗಜ ಬಳಗ ಅಷ್ಟೂ ಆ ಪುಟ್ಟ ಆನೆಯನ್ನು ಮೇಲೆತ್ತಲು ಪ್ರಯತ್ನಿಸುತ್ತದೆ. ಆದರೂ ಸಾಧ್ಯವಾಗುವುದಿಲ್ಲ. ಮತ್ತೊಂದು ದೊಡ್ಡ ಆನೆಯೊಂದು ಮರಿಯ ಬುಡಕ್ಕೆ ತನ್ನ ಸೊಂಡಿಲು ಹಾಕಿ, ಲೊಟಕ್ಕಂತಾ ಮೇಲಕ್ಕೆ ಎತ್ತಿಹಾಕುತ್ತದೆ. ಅಲ್ಲಿಗೆ ಎಲ್ಲವೂ ಶುಭಂ!

ಆನೆಗಳಿಗೆ ಮಾತು ಬರಲ್ಲ ಅಷ್ಟೇ! ಆದ್ರೆ ಮನುಷ್ಯರಿಗಿಂತ ಹೆಚ್ಚು ಅಂತಃಕರಣ ಹೊಂದಿವೆ, ಈ ವಿಡಿಯೋ ಪುರಾವೆ  ನೋಡಿ
ಆನೆಗಳ ನಡುವಣ ಸಹಕಾರ, ಮಮಕಾರ, ಅಂತಃಕರಣಕ್ಕೆ ಫಿದಾ ಆದ ನೆಟ್ಟಿಗರು
TV9 Web
| Edited By: |

Updated on: Aug 26, 2022 | 8:18 PM

Share

Viral Video ವೈರಲ್ ವೀಡಿಯೋ: ಸೋಷಿಯಲ್ ಮೀಡಿಯಾ (Social Media).. ಈ ಹೆಸರು ಕೇಳದವರೇ ಇಲ್ಲ. ಅಬಾಲವೃದ್ಧರು ಎಂಬ ಭೇದವಿಲ್ಲದೆ ಎಲ್ಲರಿಗೂ ಈಗ ಸೋಷಿಯಲ್ ಮೀಡಿಯಾ ಅನಿವಾರ್ಯವಾಗಿಬಿಟ್ಟಿದೆ. ಸೆಲ್ ಫೋನ್‌ಗಳಿಗೆ ಜೊತೆಗಾತಿಯಾಗಿರುವ ಇಂಟರ್ನೆಟ್‌ ಬಂಧ ದೊಡ್ಡದಿದೆ.

ಸೋಷಿಯಲ್ ಮೀಡಿಯಾ.. ಈ ಹೆಸರು ಕೇಳದವರೇ ಇಲ್ಲ. ಅಬಾಲವೃದ್ಧರು ಎಂಬ ಭೇದವಿಲ್ಲದೆ ಎಲ್ಲರಿಗೂ ಈಗ ಸೋಷಿಯಲ್ ಮೀಡಿಯಾ ಅನಿವಾರ್ಯವಾಗಿಬಿಟ್ಟಿದೆ. ಸೆಲ್ ಫೋನ್‌ಗಳಿಗೆ ಜೊತೆಗಾತಿಯಾಗಿರುವ ಇಂಟರ್ನೆಟ್‌ ಬಂಧ ದೊಡ್ಡದಿದೆ. ಒಂದರ್ಥದಲ್ಲಿ, ಸಂಬಂಧಿಕರಿಗಿಂತ ಸಾಮಾಜಿಕ ಮಾಧ್ಯಮದಲ್ಲಿನ ಈ ಬಂಧಗಳು ಹೆಚ್ಚು ಅವಶ್ಯಕವಾಗಿವೆ. ಹಾಗಾಗಿ ನೂರಾರು ನಾನಾ ವೀಡಿಯೊಗಳು ಅಪ್‌ಲೋಡ್ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವು ನೆಟಿಜನ್‌ಗಳನ್ನು ಅಪಾರವಾಗಿ ಆಕರ್ಷಿಸುತ್ತವೆ. ಇಂತಹ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತವೆ.

ಇನ್ನು ಇಂತಹ ವೀಡಿಯೋಗಳ ಪೈಕಿ ಹೆಚ್ಚಿನವು ಪ್ರಣಿಗಳಿಗೆ ಸಂಬಂಧಪಟ್ಟಿರುವಂತಹವಾಗಿವೆ. ಪ್ರಾಣಿಗಳಿಗೆ ಸಂಬಂಧಿಸಿದ ಈ ಹೆಚ್ಚಿನ ವಿಡಿಯೋಗಳು ನೆಟಿಜನ್‌ಗಳನ್ನು ಆಕರ್ಷಿಸುತ್ತಿವೆ. ಸದ್ಯ ಇಂತಹದೊಂದು ವಿಡಿಯೋ ಹರಿದಾಡುತ್ತಿದೆ. ವೈರಲ್ ಆಗುತ್ತಿರುವ ಈ ಕ್ಲಿಪ್ ನಲ್ಲಿ ಎಳೆಯ ಆನೆಯೊಂದು ಬುರುದೆಯ ಹೊಂಡದಲ್ಲಿ ಸಿಲುಕಿಕೊಂಡಿದೆ. ಅಲ್ಲಿಂದ ಮೇಲೆ ಬರಲು ಹರಸಾಹಸ ಪಡುತ್ತಿದೆ.

ಆನೆಗಳ ನಡುವಣ ಸಹಕಾರ, ಮಮಕಾರ, ಅಂತಃಕರಣಕ್ಕೆ ಫಿದಾ ಆದ ನೆಟ್ಟಿಗರು

ಆದರೂ ಹೊರಗೆ ಬರಲಾಗದೆ ಪರದಾಡುತ್ತಿದೆ. ಆಗ ಅಲ್ಲೇ ಇದ್ದ ಆನೆಗಳ ಹಿಂಡು… ಬಹುಶಃ ತಾಯಿ ಆನೆಯೂ ಸೇರಿದಂತೆ ಗಜ ಬಳಗ ಅಷ್ಟೂ ಆ ಪುಟ್ಟ ಆನೆಯನ್ನು ಮೇಲೆತ್ತಲು ಪ್ರಯತ್ನಿಸುತ್ತದೆ. ಆದರೂ ಸಾಧ್ಯವಾಗುವುದಿಲ್ಲ. ಗುಂಡಿಯಲ್ಲಿ ಇಳಿದು ತನ್ನ ಮರಿ ಆನೆಯನ್ನು ಮೇಲೆತ್ತಲು ಪ್ರಯತ್ನಿಸುತ್ತದೆ. ಆಗುವುದಿಲ್ಲ. ನಂತರ, ಮತ್ತೊಂದು ದೊಡ್ಡ ಆನೆಯೊಂದು ಮರಿಯ ಬುಡಕ್ಕೆ ತನ್ನ ಸೊಂಡಿಲು ಹಾಕಿ ಲೊಟಕ್ಕಂತಾ ಮೇಲಕ್ಕೆ ಎತ್ತಿಹಾಕುತ್ತದೆ. ಅಲ್ಲಿಗೆ ಎಲ್ಲವೂ ಶುಭಂ!

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ಕ್ಲಿಪ್ ಇದುವರೆಗೆ 32,000 ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇದಲ್ಲದೇ ಸಾವಿರಾರು ಲೈಕ್‌ಗಳನ್ನು ಪಡೆಯುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ತಮ್ಮದೇ ಶೈಲಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ವೀಡಿಯೋ ಅವರ ಹೃದಯ ಗೆದ್ದಿದೆ-ಕದ್ದಿದೆ ಮತ್ತು ಆನೆಗಳ ನಡುವಣ ಸಹಕಾರ, ಮಮಕಾರ, ಅಂತಃಕರಣಕ್ಕೆ ಫಿದಾ ಆಗಿದ್ದಾರೆ.

ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿ ಹಲ್ಲೆ: ಗೃಹ ಸಚಿವರು ಹೇಳಿದ್ದೇನು?
ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿ ಹಲ್ಲೆ: ಗೃಹ ಸಚಿವರು ಹೇಳಿದ್ದೇನು?
30 ಕಾಂಗ್ರೆಸ್​​​ ಕಾರ್ಯಕರ್ತರಿಗೆ ಶಾಕ್​​ ಕೊಟ್ಟ ಪೊಲೀಸರು
30 ಕಾಂಗ್ರೆಸ್​​​ ಕಾರ್ಯಕರ್ತರಿಗೆ ಶಾಕ್​​ ಕೊಟ್ಟ ಪೊಲೀಸರು
ಥ್ರಿಲ್ಲರ್ ಸೂಪರ್ ಥ್ರಿಲ್ಲರ್... ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
ಥ್ರಿಲ್ಲರ್ ಸೂಪರ್ ಥ್ರಿಲ್ಲರ್... ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
ಗವಿಸಿದ್ದೇಶ್ವರ ಜಾತ್ರೆ: ದಾಸೋಹದಲ್ಲಿ ಹೊಸ ದಾಖಲೆ, ಲಕ್ಷ ರೊಟ್ಟಿ ಸಂಗ್ರಹ!
ಗವಿಸಿದ್ದೇಶ್ವರ ಜಾತ್ರೆ: ದಾಸೋಹದಲ್ಲಿ ಹೊಸ ದಾಖಲೆ, ಲಕ್ಷ ರೊಟ್ಟಿ ಸಂಗ್ರಹ!
ಎಷ್ಟು ಅದ್ದೂರಿಯಾಗಿದೆ ನೋಡಿ ಅಲ್ಲು ಅರ್ಜುನ್ ಹೊಸ ಥಿಯೇಟರ್
ಎಷ್ಟು ಅದ್ದೂರಿಯಾಗಿದೆ ನೋಡಿ ಅಲ್ಲು ಅರ್ಜುನ್ ಹೊಸ ಥಿಯೇಟರ್
ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ
ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಯಾಕೆ?
ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಯಾಕೆ?
ಓಲಾ, ಊಬರ್, ರ್ಯಾಪಿಡೋ, ನಮ್ಮ ಯಾತ್ರಿ ಬಗ್ಗೆ ಸರ್ಕಾರ ಬಿಗ್ ಅಪ್​ಡೇಟ್!
ಓಲಾ, ಊಬರ್, ರ್ಯಾಪಿಡೋ, ನಮ್ಮ ಯಾತ್ರಿ ಬಗ್ಗೆ ಸರ್ಕಾರ ಬಿಗ್ ಅಪ್​ಡೇಟ್!