Viral Video: ದೇಶ ಸೇವೆಯೇ ಈಶ ಸೇವೆ; ಊಟವನ್ನು ಅರ್ಧಕ್ಕೆ ಬಿಟ್ಟು ಕರ್ತವ್ಯಕ್ಕೆ ಹಾಜರಾದ ಸೈನಿಕ

ದೇಶ ಸೇವೆಯೇ ಈಶ ಸೇವೆ ಎನ್ನುವ ಮಾತಿನಂತೆ ಮಳೆ, ಬಿಸಿಲು, ಚಳಿಯನ್ನು ಲೆಕ್ಕಿಸದೇ, ಕುಟುಂಬದ ಬಗ್ಗೆಯೂ ಚಿಂತಿಸ̧ದೇ ಹಗಲು ರಾತ್ರಿಯೆನ್ನದೆ ನಮ್ಮನ್ನು ಕಾಯುವವರು ನಮ್ಮ ದೇಶದ ಹೆಮ್ಮೆಯ ಸೈನಿಕರು. ಇದೀಗ ಸೈನಿಕರಿಗಿರುವ ದೇಶಾಭಿಮಾನ ಹಾಗೂ ಕರ್ತವ್ಯ ನಿಷ್ಠೆಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗಿದ್ದು,  ಯೋಧರೊಬ್ಬರ ಕರ್ತವ್ಯ ನಿಷ್ಠೆಯನ್ನು ಕಂಡು  ದೃಶ್ಯವನ್ನು ಕಂಡು ನೆಟ್ಟಿಗರು ಭಾವುಕರಾಗಿದ್ದಾರೆ.  

Viral Video: ದೇಶ ಸೇವೆಯೇ ಈಶ ಸೇವೆ; ಊಟವನ್ನು ಅರ್ಧಕ್ಕೆ ಬಿಟ್ಟು ಕರ್ತವ್ಯಕ್ಕೆ ಹಾಜರಾದ ಸೈನಿಕ
ವೈರಲ್​​ ವಿಡಿಯೋ
Edited By:

Updated on: May 03, 2024 | 12:37 PM

ನಾವೆಲ್ಲರೂ ನೆಮ್ಮದಿಯಾಗಿ ಸುಖ, ಶಾಂತಿಯಿಂದ ಜೀವನ ನಡೆಸುತ್ತಿದ್ದೇವೆ ಎಂದರೆ ಅದು ದೇಶದ ಗಡಿ ಕಾಯುವ ಸೈನಿಕರ ತ್ಯಾಗದ ಪ್ರತಿಫಲವೇ ಆಗಿದೆ. ದೇಶ ಸೇವೆಯೇ ಈಶ ಸೇವೆ ಎನ್ನುವ ಮಾತಿನಂತೆ ಮಳೆ, ಬಿಸಿಲು, ಚಳಿಯನ್ನು ಲೆಕ್ಕಿಸದೇ ಸೈನಿಕರು ದೇಶವನ್ನು ಕಾಯುತ್ತಾರೆ. ಇದೀಗ ಸೈನಿಕರಿಗಿರುವ  ದೇಶಾಭಿಮಾನದ ಕುರಿತ ವಿಡಿಯೋವೊಂದು ವೈರಲ್ ಆಗಿದ್ದು, ಯೋಧರೊಬ್ಬರು ಊಟವನ್ನು ಅರ್ಧಕ್ಕೆ ಬಿಟ್ಟು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಸೈನಿಕರ ಈ ದೇಶಾಭಿಮಾನ, ಕರ್ತವ್ಯ ನಿಷ್ಠೆಯನ್ನು ಕಂಡು  ನೆಟ್ಟಿಗರು  ಭಾವುಕರಾಗಿದ್ದಾರೆ.

ಈ ವಿಡಿಯೋವನ್ನು ಪಂಕಜ್ ಕುಮಾರ್ (@thakurPankajkumar) ಎಂಬವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಲೈಫ್ ಆಫ್ ಇಂಡಿಯನ್ ಆರ್ಮಿ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಯೋಧರೊಬ್ಬರು ಊಟ ಮಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಹೀಗೆ ಊಟ ಮಾಡುತ್ತಿರುವ ವೇಳೆ ಕರ್ತವ್ಯಕ್ಕೆ ಹಾಜರಾಗಲು ಕರೆ ಬಂತೆಂದು ಊಟವನ್ನು ಅರ್ಧಕ್ಕೆ ಬಿಟ್ಟು  ಅಲ್ಲೇ ಇದ್ದ ಗನ್ ಹಿಡಿದುಕೊಂಡು ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಇದನ್ನೂ ಓದಿ: 500 ರೂ ನೋಟುಗಳ ಮೇಲೆ ನಕ್ಷತ್ರ ಚಿಹ್ನೆ ಇದ್ದರೆ ಅದು ಅಸಲಿಯೋ ನಕಲಿಯೋ?

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ವಿಡಿಯೋ 2.2 ಮಿಲಿಯನ್ ಹಾಗೂ 80 ಸಾವಿರ ಲೈಕ್ಸ್ಗಳನ್ನು ಪಡೆದುಕೊಂಡಿದ್ದು, ಕಾಮೆಂಟ್ಸ್ ಮಅಡುವ ಮೂಲಕ ಯೋಧರ ಕರ್ತವ್ಯ ನಿಷ್ಠೆ ಹಾಗೂ ದೇಶ ಪ್ರೇಮಕ್ಕೆ ನೆಟ್ಟಿಗರು ಸೆಲ್ಯೂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:35 pm, Fri, 3 May 24

Loading...
Unable to load recommendations.
Follow Us